Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ
- By Sportsmail Desk
- . February 20, 2020
ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ‘ಲಾರಿಯಸ್ ಪ್ರಶಸ್ತಿ’ಯ 20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು. ಭಾರತದ ಕ್ರಿಕೆಟ್ ದೇವರು ‘ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ’ ದ ಪ್ರಶಸ್ತಿಯನ್ನು ಪಡೆದರೆ, ‘ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’ ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು. ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020 ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ.. ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ ‘ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’ ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್ ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7 ವಿಶ್ವಾದಾಖಲೆಯನ್ನು ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ.
ಕರ್ನಾಟಕ ತಂಡ ಚಾಂಪಿಯನ್
- By Sportsmail Desk
- . January 24, 2020
ಸ್ಪೋರ್ಟ್ಸ್ ಮೇಲ್ ವರದಿ ಕೇರಳದ ವಯನಾಡಿನಲ್ಲಿ ನಡೆದ ಅಂತರ್ ರಾಜ್ಯ ವಿಶೇಷ ಚೇತನರ ಕ್ರಿಕೆಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 148 ರನ್ ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ
14ರ ವಯಸ್ಸಿನಲ್ಲೇ 41 ಶತಕ ಗಳಿಸಿದ ಶಿವಂ !!
- By Sportsmail Desk
- . December 13, 2019
ಸೋಮಶೇಖರ್ ಪಡುಕೆರೆ, ಸ್ಪೋರ್ಟ್ಸ್ ಮೇಲ್ ಆ ಪುಟ್ಟ ಬಾಲಕ ಬ್ಯಾಟ್ ಹಿಡಿದು ಅಂಗಣಕ್ಕಿಳಿದರೆ ಅಲ್ಲೊಂದು ಶತಕ ಕಟ್ಟಿಟ್ಟ ಬುತ್ತಿ. ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ ಹಾಗೂ ವಿಜಯ್ ಭಾರದ್ವಾಜ್ ಅವರಂತ ಹಿರಿಯ ಆಟಗಾರರು ಈ
ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಕ್ರಿಕೆಟಿಗ ಕೊಹ್ಲಿ
- By Sportsmail Desk
- . June 14, 2019
ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2019ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಒಡಂಬಡಿಕೆಗಳಿಂದ 21
ಯುವರಾಜ್‌ಗೆ ವಿದಾಯದ ಪಂದ್ಯ ಆಡುವ ಅವಕಾಶ ನೀಡಬೇಕಿತ್ತು
- By Sportsmail Desk
- . June 12, 2019
ಸೋಮಶೇಖರ್ ಪಡುಕರೆ ಪ್ರತಿಯೊಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಅಂಗಣಕ್ಕೆ ಕಾಲಿಟ್ಟ ಮೊದಲ ದಿನ ಹಾಗೂ ಅಂಗಣದಿಂದ ನಿರ್ಗಮಿಸಿದ ದಿನ ಅತ್ಯಂತ ಸ್ಮರಣೀಯ. ಇದು ಕ್ರಿಕೆಟ್‌ಗೆ ಮಾತ್ರ ಸೀಮಿತವಾದುದಲ್ಲ. ಮೊದಲ ದಿನದ ಸಂಭ್ರಮದಂತೆ ವಿದಾಯದ ದಿನದ ‘ಭಾವುಕತೆ
ರನ್ ಶಿಖರದ ಮೇಲೆ ವಿರಾಟ್ ಪಡೆಗೆ ವಿಜಯ
- By Sportsmail Desk
- . June 10, 2019
ಲಂಡನ್: ಆರಂಭಿಕ ಶಿಖರ್ ಧವನ್ ಭರ್ಜರಿ ಶತಕ ಹಾಗೂ ವೇಗಿಗಳ ಬಿಗುವಿನ ದಾಳಿಯ ಪರಿಣಾಮ ಭಾರತ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಎರಡನೇ
ಅಬ್ಬರಿಸಿದ ರೋಹಿತ್, ಚಹಾಲ್: ಭಾರತದ ಜಯದ ಆರಂಭ
- By Sportsmail Desk
- . June 6, 2019
ಸೌತಾಂಪ್ಟನ್:- ಆರಂಭಿಕ ರೋಹಿತ್ ಶರ್ಮಾ (ಅಜೇಯ 122) ಅವರ ಭರ್ಜರಿ ಶತಕ ಹಾಗೂ ಯಜುವೇಂದ್ರ ಚಹಾಲ್ (51ಕ್ಕೆ 4) ಉತ್ತಮ ಬೌಲಿಂಗ್ ನೆರವಿನಿಂದ ಭಾರತ ಆರು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ
ಈ ಬಾರಿಯೂ ಆಸ್ಟ್ರೇಲಿಯಾವೇ ವಿಶ್ವಕಪ್ ಚಾಂಪಿಯನ್ : ಶೇನ್ ವಾರ್ನ್
- By Sportsmail Desk
- . May 30, 2019
ನವದೆಹಲಿ: ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್ ಟೂರ್ನಿಯನ್ನು ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಜಯ ಸಾಧಿಸಲಿದೆ ಎಂದು ಸ್ಪಿನ್ ದಂತಕತೆ ಶೇನ್‌ವಾರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2019ರ ವಿಶ್ವಕಪ್ ಯಾವ ತಂಡ
ಭಾರತ ತಂಡಕ್ಕೆ ಪಂತ್ ಅನುಪಸ್ಥಿತಿ ಕಾಡಲಿದೆ: ಗಂಗೂಲಿ
- By Sportsmail Desk
- . May 16, 2019
ಕೋಲ್ಕತಾ: ಇತ್ತೀಚೆಗೆ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಅನುಪಸ್ಥಿತಿ ಮುಂಬರುವ ಐಸಿಸಿ ವಿಶ್ವಕಪ್‌ನಲ್ಲಿ ಕಾಡಲಿದೆ ಎಂದು ಭಾರತ ತಂಡದ
ವಿಂಡೀಸ್ ಪ್ರವಾಸ ಎರಡು ವಾರ ಮುಂದಕ್ಕೆ
- By Sportsmail Desk
- . May 2, 2019
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ. ಕೆರಿಬಿಯನ್ ಪ್ರವಾಸವನ್ನು ಎರಡು ವಾರಗಳ ಕಾಲ