Monday, September 26, 2022

ರಾಷ್ಟ್ರೀಯ ಮೋಟಾರ್‌ ರೇಸಿಂಗ್‌ನಲ್ಲಿ ಮಿಂಚಿದ ಬೆಂಗಳೂರಿನ ಶಾಲಾ ಬಾಲಕ ಶ್ರೇಯಸ್‌ ಹರೀಶ್‌

ಬೆಂಗಳೂರು: ಮದ್ರಾಸ್‌ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ಇಂದು ಅಚ್ಚರಿಯೇ ನಡೆಯಿತು. ಬೆಂಗಳೂರಿನ ಸಹಕಾರ ನಗರದ 12 ವರ್ಷ ಪ್ರಾಯದ ಶಾಲಾ ಬಾಲಕ ಶ್ರೇಯಸ್ ಹರೀಶ್‌ ಎಂಆರ್‌ಎಫ್‌, ಎಂಎಂಎಸ್‌ಸಿ ಭಾರತೀಯ ರಾಷ್ಟ್ರೀಯ ರೇಸಿಂಗ್‌ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ರೇಸರ್‌ಗಳಿರುವ ಚಾಂಪಿಯನ್‌ಷಿಪ್‌ನಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿದ್ದಾನೆ. ಬೆಂಗಳೂರಿನ ಕೆನ್ಸರಿ ಶಾಲೆಯ 6ನೇ...

FIM MiniGP ವಿಶ್ವ ಸರಣಿಗೆ ಬೆಂಗಳೂರಿನ ಶ್ರೇಯಸ್‌

ಬೆಂಗಳೂರು: ಭಾರತದ ವಿವಿಧ ನಗರಗಳಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿಯಲ್ಲಿ ಅಗ್ರ ಸ್ಥಾನ ಪಡೆದ ಬೆಂಗಳೂರಿನ ಶ್ರೇಯಸ್‌ ಹರೀಶ್‌ ಹಾಗೂ ಕೋಲಾಪುರದ ಜಿನೇಂದ್ರ ಕಿರಣ್‌ ಸಾಂಗ್ವೆ ಅವರು ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿರುವ FIM MiniGP ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಶ್ರೇಯಸ್‌ (220 ಅಂಕಗಳು) ಮತ್ತು ಜಿನೇಂದ್ರ (213 ಅಂಕಗಳು) ಬೆಂಗಳೂರಿನ ಮಿಕೋ ಕಾರ್ಟೋಪಿಯಾದಲ್ಲಿ...

ಬೈಕ್‌ನಲ್ಲಿ 17,982 ಅಡಿ ಎತ್ತರದ ಖಾರ್ದುಂಗ್ಲಾ ಪಾಸ್‌ ತಲುಪಿದ ಕುಂದಾಪುರದ ವಿಲ್ಮಾ ಕ್ರಾಸ್ಟೋ ಕರ್ವಾಲೋ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕ ವಾಲಿಬಾಲ್‌ ತಂಡದ ಮಾಜಿ ಆಟಗಾರ್ತಿ, ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್‌ ಟ್ರೈನರ್‌ 54 ವರ್ಷದ ವಿಲ್ಮಾ ಕ್ರಾಸ್ಟೋ ಕರ್ವಾಲೋ ಬೈಕ್‌ನಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ, ಸಮುದ್ರ ಮಟ್ಟದಿಂದ 17,982 ಅಡಿ ಎತ್ತದಲ್ಲಿರುವ ಖಾರ್ದುಂಗ್ಲಾ ಪಾಸ್‌ ತಲುಪಿ ಸಾಧನೆ ಮಾಡಿದ್ದಾರೆ. 54 ವರ್ಷದ ಮಹಿಳೆಯೊಬ್ಬರು ಬೈಕ್‌ನಲ್ಲಿ ಈ...

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಎಕ್ಸ್‌ ಪಲ್ಸ್ ಎಕ್ಸ್‌ ಪೀರಿಯೆನ್ಸ್ ಸೆಂಟರ್‌ಗೆ ಹೀರೋ ಮೋಟೋಕಾರ್ಪ್ ಚಾಲನೆ

ಬೆಂಗಳೂರು, ಆಗಸ್ಟ್ 30, 2022:  ಬೈಕ್‌ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕರಾದ ಹೀರೋ ಮೋಟೋಕಾರ್ಪ್ ದೇಶದಲ್ಲಿ ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಪ್ರಚಾರ ಮಾಡುವ ತನ್ನ ವೈವಿಧ್ಯಮಯ ಮತ್ತು ಸ್ಥಿರವಾದ ಉಪಕ್ರಮಗಳ ಮುಂದುವರಿದ ಭಾಗವಾಗಿ, ಭಾರತದಲ್ಲಿ ಮೊದಲ Xpulse Xperience Centre ಅನ್ನು ಇಂದು ಉದ್ಘಾಟಿಸಿದೆ. ಕ್ಯುರೇಟೆಡ್ ಬೈಕಿಂಗ್ ಟ್ರ್ಯಾಕ್‌ಗಳು ಮತ್ತು ಇತರ ಸೌಕರ್ಯಗಳೊಂದಿಗೆ Xpulse...

ಅಬು ಧಾಬಿಯಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದ ಮೈಸೂರಿನ ದುರ್ಗಾಶ್ರೀ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಆಗಸ್ಟ್‌ 16ರಿಂದ 20ರವರೆಗೆ ಅಬು ಧಾಬಿಯಲ್ಲಿ ನಡೆದ ಎಂಎಂಎ ಯೂಥ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ದುರ್ಗಾಶ್ರೀ ಜಿ.ಎಂ. ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 13 ವರ್ಷದ ದುರ್ಗಾಶ್ರೀ ಜೊತೆಯಲ್ಲಿ ತೀಕ್ಷಾ ಭರುಣಿ ಮತ್ತು ಆರ್ಯನ್‌ ರಾಜ್‌ ಕೂಡ ಭಾರತವನ್ನು ಪ್ರತಿನಿಧಿಸಿದ್ದು, ಎಲ್ಲರೂ ಮೈಸೂರಿನ ಅಕಾಡೆಮಿ ಆಫ್‌ ಮಾರ್ಷಲ್‌ ಸೇನ್ಸ್‌ನ ವಿದ್ಯಾರ್ಥಿಗಳಾಗಿರುತ್ತಾರೆ....

ಭಾನುವಾರ ಬೆಂಗಳೂರಿನಲ್ಲಿ ರೈಡ್‌ ವಿದ್‌ ರೋಲರ್ಸ್‌

ಬೆಂಗಳೂರು, 27, ಆಗಸ್ಟ್‌, 2022:  ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯು ರೈಡ್‌ ವಿದ್‌ ರೋಲರ್ಸ್‌ ಎಂಬ ಕಾರ್ಯಕ್ರಮವನ್ನು ಇದೇ ಭಾನುವಾರ  ಹಮ್ಮಿಕೊಂಡಿದೆ ಎಂದು ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಕಾರ್ಯದರ್ಶಿ ಇಂದೂಧರ ಸೀತರಾಮ್‌ ಅವರು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಸ್ಕೇಟರ್‌ಗಳು ಹಾಗೂ 200ಕ್ಕೂ ಹೆಚ್ಚು ಬೈಕ್‌...

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್: ಕರ್ನಾಟಕಕ್ಕೆ ಎರಡು ಪದಕ

ಉತ್ತರಕಾಶಿ: 26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ಬಾಲಕರ ಲೀಡ್‌ ವಿಭಾಗದಲ್ಲಿ ಕರ್ನಾಟಕದ ಧನುಷ್‌ ಜೆ. ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 03:09 ನಿಮಿಷಗಳಲ್ಲಿ ಗುರಿ ತಲುಪಿದ ಧನುಷ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಜಾರ್ಖಂಡ್‌ ಹಾಗೂ ಮಹಾರಾಷ್ಟ್ರದ ಸ್ಪರ್ಧಿಗಳು ಈ ವಿಭಾಗದಲ್ಲಿ ಚಿನ್ನ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕರ್ನಾಟಕದ...

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ಗೆ ಭವ್ಯ ಚಾಲನೆ

ಉತ್ತರಕಾಶಿ: 26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ಗೆ ಉತ್ತರಾಖಂಡ್‌ ಕ್ರೀಡಾ ಸಚಿವೆ ರೇಖಾ ಆರ್ಯ ಅವರು ಇಲ್ಲಿನ ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೆನೇರಿಂಗ್‌ನಲ್ಲಿ ಸಂಭ್ರದಮದ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಪರ್ವತಾರೋಹಣ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಪ್ರೊ. ಹರ್ಷವಂತಿ ಬಿಸ್ಟ್‌ ಹಾಗೂ ಭಾರತದ ಮೊದಲ ಮಹಿಳಾ ಎವರೆಸ್ಟ್‌ ಆರೋಹಿ...

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ಗೆ 200 ಸ್ಪರ್ಧಿಗಳು

ಬೆಂಗಳೂರು: ಆಗಸ್ಟ್‌ 12 ರಿಂದ 14 ರವರೆಗೆ ಉತ್ತರ ಕಾಶಿಯಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಐಎಂಎಫ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ. ನೆಹರು ಇನ್‌ಸ್ಟಿಟೂಟ್‌ ಆಫ್‌ ಮೌಂಟನೇರಿಂಗ್‌ನ ಆತಿಥ್ಯದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳನ್ನು ದೇಶದ ವಿವಿಧ ಭಾಗಗಳಲ್ಲಿರುವ ಐಎಂಎಫ್‌ನ ಏಳು...

ಆಗಸ್ಟ್‌ 12-24 ಉತ್ತರ ಕಾಶಿಯಲ್ಲಿ ಐಎಂಎಫ್‌ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌

Sportsmail ಬೆಂಗಳೂರು ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟನೇರಿಂಗ್‌ ಆಶ್ರಯದಲ್ಲಿ ಇದೇ ತಿಂಗಳ 12 ರಿಂದ 26ರವರೆಗೆ ಉತ್ತರಾಖಂಡದ ಉತ್ತರಕಾಶಿಯಲ್ಲಿ 26ನೇ ಭಾರತೀಯ ಪರ್ವತಾರೋಹಣ ಸಂಸ್ಥೆ (ಐಎಂಎಫ್‌) ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಸಂಬಂಧಪಟ್ಟ ಐಎಂಎಫ್‌ ವಲಯಗಳು ಆಯ್ಕೆ ಮಾಡಿದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಹೆಸರು ನೋದಾಯಿಸಲು ಅರ್ಹರು. ಪ್ರತಿಯೊಂದು ವಲಯವುದ ಸಂಬಂದಪಟ್ಟ...

MOST COMMENTED

ಸ್ಟೀವನ್ ಸ್ಮಿತ್ ಕಣ್ಣೀರಿಗೆ ಕರಗೀತೆ ಕಳಂಕ?

ಅವಮಾನ... ನೋವು... ಬೇಸರ... ಉನ್ಮಾದ... ಟೀಕೆ-ಟಿಪ್ಪಣಿಗಳಿಂದ ಬೆಂದು ಹೋಗಿದ್ದ ಜೀವ.. ಆ ಬೇಗುದಿಯೆಲ್ಲಾ ಕಣ್ಣೀರಧಾರೆಯಾಗಿ ಹರಿಯಿತು. ಪ್ರಸಕ್ತ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್, ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್‌ಮನ್, ಆಸ್ಟ್ರೇಲಿಯಾ...

HOT NEWS