ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ
ಏಜೆನ್ಸಿಸ್ ಜಕಾರ್ತಾ
ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ, 6 ಬೆಳ್ಳಿ 8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಪುರುಷರ ಜಾವೆಲಿನ್ ಎಸೆತದಲ್ಲಿ ಸಂದೀಪ್ ಚೌಧರಿ, ಈಜಿನಲ್ಲಿ ಸುಯಶ್ ಜಾಧವ್ ಹಾಗೂ ವನಿತೆಯರ 1500 ಮೀ ಓಟದಲ್ಲಿ...
ಚಿನ್ನ ಮನೆ ಸೇರುವ ಮೊದಲೇ ಬಂಗಾರ ಹೊರಟು ಹೋಗಿತ್ತು!
ಸ್ಪೋರ್ಟ್ಸ್ ಮೇಲ್ ವರದಿ
ಏಷ್ಯನ್ ಗೇಮ್ಸ್ ಶಾಟ್ಪುಟ್ನಲ್ಲಿ ಚಿನ್ನ ಗೆದ್ದ ತೇಜಿಂದರ್ಪಾಲ್ ಸಿಂಗ್ ತೂರ್ ಮನೆಗೆ ಬಂದು ಚಿನ್ನವನ್ನು ತಂದೆಗೆ ತೋರಿಸಬೇಕೆನ್ನುವಷ್ಟರಲ್ಲಿ ಅವರು ಇಹವನ್ನೇ ತ್ಯಜಿಸಿದರು. ತಂದೆ ಕರಮ್ ಸಿಂಗ್ ಕ್ಯಾನ್ಸರ್ನಿಂದ ಬಳಲುತ್ತಿರುವ ವಿಷಯವನ್ನು ತೇಜಿಂದರ್ ದಾಖಲೆಯೊಂದಿಗೆ ಚಿನ್ನ ಗೆದ್ದ ನಂತರ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಆದರೆ ಕ್ಯಾನ್ಸರ್ ಇಷ್ಟು ಬೇಗನೆ ತಂದೆಯವರ ಬದುಕನ್ನು ಕಸಿದುಕೊಳ್ಳುತ್ತದೆ ಎಂದು...
ಸಡಗರದ ಗೇಮ್ಸ್ಗೆ ಸಂಭ್ರಮದ ತೆರೆ
ಏಜೆನ್ಸೀಸ್ ಜಕಾರ್ತ
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ 69 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. ಹದಿನೈದು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿತು.
ಕೊನೆಯ ದಿನದಲ್ಲಿ ಭಾರತಕ್ಕೆ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇದ್ದಿರಲಿಲ್ಲ. ಪುರುಷರ ಟ್ರಯಥ್ಲಾನ್ ಮಾತ್ರ ಕೊನೆಯ ದಿನದ ಸ್ಪರ್ಧೆಯಾಗಿತ್ತು. ಭಾರತ ಹಾಕಿ ತಂಡದ ನಾಯಕಿ...
ಏಷ್ಯನ್ ಗೇಮ್ಸ್ನಲ್ಲಿ ದಾಖಲೆ ಬರೆದ ಭಾರತ
ಏಜೆನ್ಸೀಸ್ ಜಕಾರ್ತ
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ಅತಿ ಹೆಚ್ಚು ಪದಕ ಗೆದ್ದು ದಾಖಲೆ ಬರೆದಿದೆ. 2010ರಲ್ಲಿ ಭಾರತ 65 ಪದಕಗಳನ್ನು ಗೆದ್ದಿತ್ತು, ಆದರೆ ಜಕಾರ್ತದಲ್ಲಿ ಕೊನೆಯ ದಿನದ ವೇಳೆ 69 ಪದಕಗಳನ್ನು ಗೆದ್ದು ಇದುವರೆಗಿನ ದಾಖಲೆಯನ್ನು ಮುರಿದಿದೆ.
14ನೇ ದಿನದಲ್ಲಿ ಭಾರತ ಬಾಕ್ಸಿಂಗ್ ಮತ್ತು ಬ್ರಿಡ್ಜ್ನಲ್ಲಿ ಚಿನ್ನ ಗೆದ್ದರೆ, ಮಹಿಳಾ ಸ್ಕ್ವಾಷ್ನಲ್ಲಿ ಬೆಳ್ಳಿ ಹಾಗೂ ಪುರುಷರ...
ಬೆಳ್ಳಿಗೆ ತೃಪ್ತಿಪಟ್ಟ ಭಾರತ ವನಿತೆಯರು
ಏಜೆನ್ಸೀಸ್ ಜಕಾರ್ತ
ಏಷ್ಯನ್ ಗೇಮ್ಸ್ನಲ್ಲಿ ೩೬ ವರ್ಷಗಳ ನಂತರ ಚಿನ್ನ ಗೆದ್ದು ಟೋಕಿಯೋ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆಯಬೇಕೆಂಬ ಭಾರತ ವನಿತೆಯರ ಹಾಕಿ ತಂಡದ ಗುರಿ ಕೊನೆಗೂ ಇಡೇರಲಿಲ್ಲ.
ಶುಕ್ರವಾರ ನಡೆದ ಜಪಾನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ೧-೨ ಗೋಲುಗಳ ಅಂತರದಲ್ಲಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿತು. ಭಾರತದ ಪರ ನೇಹಾ ಗೋಯಲ್ ೨೧ನೇ ನಿಮಿಷದಲ್ಲಿ ಗಳಿಸಿದ...
ಜಾನ್ಸನ್ಗೆ ಚಿನ್ನ, ರಿಲೇಯಲ್ಲಿ ಬಂಗಾರ, ಹಾಕಿಯಲ್ಲಿ ಶಾಕ್
ಏಜೆನ್ಸೀಸ್ ಜಕಾರ್ತ
೧೮ನೇ ಏಷ್ಯನ್ ಕ್ರೀಡಾಕೂಟದ ೧೨ನೇ ದಿನದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾ‘ನೆ ತೋರಿದ್ದಾರೆ. ಅಥ್ಲೀಟ್ಗಳು ಚಿನ್ನ ಗೆದ್ದರೆ, ಪುರುಷರ ಹಾಕಿಯಲ್ಲಿ ಭಾರತ ಫೈನಲ್ ತಲಪುವಲ್ಲಿ ವಿಫಲವಾಯಿತು.
೧೫೦೦ ಮೀ. ಓಟದಲ್ಲಿ ಭಾರತ ಮೊದಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಜಿನ್ಸನ್ ಜಾನ್ಸನ್ ೩ ನಿಮಿಷ ೪೪.೭೨ ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಮನ್ಜೀತ್ ಸಿಂಗ್...
ಕಾಲಲ್ಲಿ 12 ಬೆರಳು, ಮನೆಗೆ ಆಕೆಯೇ ನೆರಳು
ಸ್ಪೋರ್ಟ್ಸ್ ಮೇಲ್ ವರದಿ
ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಹೆಪ್ಟಾಥ್ಲಾನ್ನಲ್ಲಿ ಚಿನ್ನ ಗೆದ್ದಿರುವ ಭಾರತದ ಸ್ವಪ್ನಾ ಬರ್ಮನ್ ನಿತ್ಯವೂ ನೋವು ನುಂಗಿಕೊಂಡು ಪದಕ ಗೆದ್ದವರು. ಮನೆಯ ಆರ್ಥಿಕ ಪರಿಸ್ಥಿತಿ ಮನಸ್ಸಿನ ನೋವಾದರೆ,ಎರಡು ಕಾಲುಗಳಲ್ಲಿ ೧೨ ಬೆರಳುಗಳಿರುವುದು ಮತ್ತೊಂದು. ಕಾಲಿಗೆ ಸರಿಯಾದ ಶೂ ಸಿಗದೆ, ೫ ಬೆರಳಿಗೆ ಸಿದ್ಧಪಡಿಸಿರುವ ಶೂ ಧರಿಸಿಯೇ ಸ್ಪರ್ಧಿಸಬೇಕಾಗಿರುವುದು ಅನಿವಾರ್ಯ.
ಇದರಿಂದಾಗಿ ಬರ್ಮನ್ ಯಾವಾಗಲೂ ನೋವು...
ಓಟದಲ್ಲಿ ಮಂಜೀತ್ಗೆ ಚಿನ್ನ, ಜಾನ್ಸನ್ಗೆ ಬೆಳ್ಳಿ
ಏಜೆನ್ಸೀಸ್ ಜಕಾರ್ತ
ಏಷ್ಯನ್ ಗೇಮ್ಸ್ನ ೧೦ನೇ ದಿನದಲ್ಲಿ ಭಾರತದ ಸ್ಪರ್ಧಿಗಳು ತೃಪ್ತಿಕರ ಪ್ರದರ್ಶನ ನೀಡಿದ್ದಾರೆ. ೮೦೦ ಮೀ. ಓಟದಲ್ಲಿ ಮಂಜೀತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಗೆದ್ದಿರುವುದ ೧೦ನೇ ದಿನದ ಸಂಭ್ರಮ.
ಮಂಜೀತ್ ೧ ನಿಮಿಷ ೪೬.೧೫ ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಜಿನ್ಸನ್ ಜಾನ್ಸನ್ ೧ ನಿಮಿಷ ೪೬.೩೫ ಸೆಕೆಂಡುಗಳಲ್ಲಿ...
ದಾರುಣ್ಗೆ ಬೆಳ್ಳಿ, ಆಳ್ವಾಸ್ನಲ್ಲಿ ಸಂಭ್ರಮ
ಸ್ಪೋರ್ಟ್ಸ್ ಮೇಲ್ ವರದಿ
ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಆಳ್ವಾಸ್ ಮೂರನೇ ಬಿಎಚ್ಆರ್ಡಿ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ೪೦೦ ಮೀಟರ್ ಹರ್ಡಲ್ಸ್ನಲ್ಲಿ ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಸಾಧನೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ದಾಖಲೆಯೂ ಆಗಿದೆ.
ಪ್ರಸ್ತುತ ಆಳ್ವಾಸ್ನ ವಿದ್ಯಾರ್ಥಿಯಾಗಿರುವ ಧಾರುಣ್ ೨೦೧೬ರ ರಿಯೋ ಒಲಿಂಪಿಕ್ಸ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು...
ನೀರಜ್ಗೆ ಚಿನ್ನ, ನೀನಾಗೆ ಬೆಳ್ಳಿ
ಏಜೆನ್ಸೀಸ್ ಜಕಾರ್ತ
ಏಷ್ಯನ್ ಚಾಂಪಿಯನ್ ನೀರಜ್ ಚೋಪ್ರಾ ಏಷ್ಯನ್ ಕ್ರೀಡಾಕೂಟದ ೯ನೇ ದಿನದಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದಾರೆ. ಮೂರನೇ ಎಸೆತದಲ್ಲಿ ೮೮.೦೬ ಮೀ. ದೂರಕ್ಕೆ ಎಸೆದ ನೀರಜ್ ಚಿನ್ನಕ್ಕೆ ಮುತ್ತಿಟ್ಟರು.
ವನಿತೆಯರ ಲಾಂಗ್ಜಂಪ್ನಲ್ಲಿ ನೀನಾ ವರಾಕಿಲ್, ೬.೫೧ ಮೀ. ದೂರಕ್ಕೆ ಜಿಗಿದು ಬೆಳ್ಳಿ ಗೆದ್ದರು. ವನಿತೆಯರ ೩೦೦೦ ಮೀ. ಸ್ಟೀಪಲ್ಚೇಸ್ನಲ್ಲಿ...