ಕುಸ್ತಿ ಸಂಸ್ಥೆಯಲ್ಲಿ ಬ್ರಿಜ್ ಸೆಕ್ಸ್… ಗೋವಿಂದಾ ಗೋವಿಂದಾ!!
ಸೋಮಶೇಖರ್ ಪಡುಕರೆ, ಬೆಂಗಳೂರು
ರಾಜಕಾರಣಿಗಳ ಕೈಗೆ ಸಿಲುಕಿ ಕ್ರೀಡಾ ಸಂಸ್ಥೆಗಳು ನಲುಗಿ ಹೋಗಿವೆ. ದೆಹಲಿಯಲ್ಲಿ ಒಲಿಂಪಿಯನ್ ವಿನೇಶ್ ಫೊಗತ್ಗೆ ನ್ಯಾಯ ಒದಗಿಸುವಂತೆ ದೇಶದ 31 ಅಂತಾರಾಷ್ಟ್ರೀಯ ಕುಸ್ತಿಪಟುಗಳ ಜೊತೆ ಸೇರಿ ಮುಷ್ಕರ ನಿರತರಾಗಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬರೇ ಮೋದಿ ಭಜನೆ ಮಾಡಿಕೊಂಡು ಅಲ್ಲಿಲ್ಲಿ ಅಲೆಯುತ್ತಿದ್ದಾರೆ. ಗುರುವಾರ ರಾತ್ರಿ ಹತ್ತು ಗಂಟೆಯವರೆಗೂ ಅವರು ಈ...
ಕುಸ್ತಿಯಲ್ಲಿ ಇತಿಹಾಸ ಬರೆದ ಕರ್ನಾಟಕ
ಬೆಂಗಳೂರು:
ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಸಂದೀಪ್ ಹಲಾದುಕರ್ ಮತ್ತು ದಾರೆಪ್ಪ ಆರ್. ಹೊಸಮನಿ ಅವರು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕುಸ್ತಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಭಾರತೀಯ ಕುಸ್ತಿ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ಷಿಪ್ನ ಎರಡನೇ ದಿನದಲ್ಲಿ ಕರ್ನಾಟಕದ ಸಂದೀಪ್ ಹಲಾದುಕರ್ 67ಕೆಜಿ ಗ್ರೀಕೋ ರೋಮನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ದಾರೆಪ್ಪ...
ಸ್ಪೇನ್ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್ ಕಪ್
ವೆಲೆನ್ಸಿಯಾ:
ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್ಐಎಚ್ ನೇಷನ್ಸ್ ಕಪ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್ಗೆ ಅರ್ಹತೆ ಪಡೆಇದಿದೆ.
ಗುರ್ಜಿತ್ ಕೌರ್ 5ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚಾಂಪಿಯನ್ ಪಟ್ಟ ಗೆದ್ದ ಭಾರತ ವಿಶ್ವಕಪ್ನಲ್ಲಿ ಅನುಭವಿಸಿದ ಸೋಲಿನ...
ಚಾಂಪಿಯನ್ನರ ತಾಣ ಬಿಎಂಎಸ್ ಮಹಿಳಾ ಕಾಲೇಜಿಗೆ ಕ್ರೀಡಾ ಪೋಷಕ ಪ್ರಶಸ್ತಿ
ಬೆಂಗಳೂರು:
ಶೇಕಡಾ ನೂರು ಫಲಿತಾಂಶಕ್ಕಾಗಿ ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕಟ್ಟಿ ಹಾಕಿ, ಅವರ ದೈಹಿಕ ಶಿಕ್ಷಣವನ್ನು ನಾಶ ಮಾಡುವ ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈಗಿನ ಕಾಲಮಾನದಲ್ಲಿ ಶಿಕ್ಷಣದ ಜೊತೆಯಲ್ಲಿ ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿ ಅದರಲ್ಲಿಯೂ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಿದೆ ಎಂದು ತೋರಿಸಿಕೊಟ್ಟ ಬೆಂಗಳೂರಿನ ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ಬಿಎಂಎಸ್ ಮಹಿಳಾ ಕಾಲೇಜಿಗೆ ಕರ್ನಾಟಕ...
ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ
ಬೆಂಗಳೂರು: ಇಂದು ಕರ್ನಾಟಕ ಕುಸ್ತಿ ಆಸೋಸಿಯೇಷನ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರರವರು ರಿಟರ್ನಿಂಗ್ ಆಫೀಸರ್ ಆಗಿ ನೇಮಕರಾಗಿ ಅಡಾಕ್ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರೆಸ್ಲಿಂಗ್ ಆಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅವಿರೋಧವಾಗಿ ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡಿದರು.
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿರವರು ಕರ್ನಾಟಕ ಕುಸ್ತಿ ಆಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದರು. ಕರ್ನಾಟಕ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು, ಸಂಸ್ಥೆಯ...
ಗಾಂಧೀ ಜಯಂತಿಯಂದು ದೋಹಾದ ಐಸಿಸಿಯಿಂದ ರಸಪ್ರಶ್ನೆ ಕಾರ್ಯಕ್ರಮ
ದೋಹಾ:
ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡು ಬಂದಿರುವ ಇಂಡಿಯನ್ ಕಲ್ಚರ್ ಸೆಂಟರ್ (ಐಸಿಸಿ) ಸಾತಂತ್ರ್ಯ ಸಂಭ್ರಮದ ಅಮೃತಮಹೋತ್ಸವದ ಅಂಗವಾಗಿ 12 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನೂರಕ್ಕೂ ಹೆಚ್ಚು ಸ್ಪರ್ಧಿಗಳು ಹೆಸರು ನೋಂದಾವಣೆ ಮಾಡಿಕೊಂಡ ಕಾರಣ ಇಬ್ಬರು ಸ್ಪರ್ಧಿಗಳ ಗುಂಪುಗಳನ್ನಾಗಿ ಮಾಡಿ ಸ್ಪರ್ಧೆಯನ್ನು ನಡೆಸಲಾಯಿತು.
ಅಕ್ಟೋಬರ್ 1 ರಂದು ನಡೆದ ಈ...
ರಾಷ್ಟ್ರೀಯ ಕ್ರೀಡಾಕೂಟ: ಸ್ಕೇಟಿಂಗ್ನಲ್ಲಿ ಕರ್ನಾಟಕದ ಮಹೀನ್ಗೆ ಚಿನ್ನ
ಅಹಮದಾಬಾದ್:
36ನೇ ರಾಷ್ಟ್ರೀಯ ಕ್ರಿಡಾಕೂಟದ ಸ್ಕೇಟಿಂಗ್ನಲ್ಲಿ ಕರ್ನಾಟಕದ ಮಹೀನ್ ಟಂಡನ್ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಆರ್ಟಿಸ್ಟಿಕ್ ಸ್ಕೇಟಿಂಗ್ನಲ್ಲಿ ಮಹೀನ್ ಅಗ್ರ ಸ್ಥಾನ ಪಡೆದು ಐತಿಹಾಸಿಕ ಚಿನ್ನದ ಪದಕ ಗೆದ್ದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಸ್ಕೇಟಿಂಗ್ ಕ್ರೀಡೆಗೆ ಅವಕಾಶ ಕಲ್ಪಿಸಲಾಗಿದೆ.
ಆರ್ಟಿಸ್ಟಿಕ್ ಸ್ಕೇಟಿಂಗ್ನಲ್ಲಿ ರಾಜ್ಯದ ಕಿರಣ್ ಕುಮಾರ್ ಕಂಚಿನ ಪದಕ ಗೆದ್ದು ಸಾಧನೆ...
ರಾಷ್ಟ್ರೀಯ ಕ್ರೀಡಾಕೂಟ: ನೆಟ್ಬಾಲ್ನಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ
ಅಹಮದಾಬಾದ್:
ಬಿಹಾರ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಮಬಲ ಸಾಧಿಸಿ ಕರ್ನಾಟಕ ವನಿತೆಯರ ನೆಟ್ಬಾಲ್ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.
ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಇತ್ತಂಡಗಳು 57-57 ಅಂಕಗಳಿಂದ ಸಮಬಲ ಸಾಧಿಸಿದವು. ಅಂತಿಮವಾಗಿ ಸಮಯದ ಅಭಾವದಿಂದ ತಾಂತ್ರಿಕ ಸಮಿತಿ ಹಾಗೂ ಸ್ಪರ್ಧೆಯ ಮ್ಯಾನೇಜರ್ ಇತ್ತಂಡಗಳಿಗೂ ಕಂಚಿನ ಪದಕ ನೀಡುವ ತೀರ್ಮಾನ ಕೈಗೊಂಡರು.
ಪಂದ್ಯದ...
ಶೂಟಿಂಗ್ನಲ್ಲಿ ಕರ್ನಾಟಕದ ತಿಲೋತ್ತಮಗೆ ಬೆಳ್ಳಿ ಪದಕ
ಅಹಮದಾಬಾದ್:
ಉತ್ತಮ ಪೈಪೋಟಿಯಿಂದ ಕೂಡಿದ ಫೈನಲ್ ಸುತ್ತಿನಲ್ಲಿ ಗುಜರಾತಿನ ಎಲಾವಿನಿಲ್ ವಲಾವಿರನ್ ವಿರುದ್ಧ 16-10 ಅಂತರದಲ್ಲಿ ಸೋಲನುಭವಿಸಿದ ಕರ್ನಾಟಕದ ತಿಲೋತ್ತಮ ಸೇನ್ 36ನೇ ರಾಷ್ಟ್ರೀಯ ಕ್ರೀಡಾಕೂಟದ ವನಿತೆಯರ 10ಮೀ ಏರ್ ರೈಫಲ್ ಶೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ 633.6 ಅಂಕಗಳನ್ನು ಗಳಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದ ತಿಲೋತ್ತಮ...
ವಿಶ್ವ ಶೂಟಿಂಗ್ಗೆ ಕರ್ನಾಟಕದ ಶಾಲಾ ಬಾಲಕಿ ತಿಲೋತ್ತಮ
ಸೋಮಶೇಖರ್ ಪಡುಕರೆ, ಬೆಂಗಳೂರು
ಅಕ್ಟೋಬರ್ 15 ರಿಂದ 23 ರವರೆಗೆ ಕೈರೋದಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ 14 ವರ್ಷದ ಬಾಲಕಿ ತಿಲೋತ್ತಮ ಸೇನ್ (Tilottama Sujit Sen) ಆಯ್ಕೆಯಾಗಿದ್ದಾರೆ.
ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚಾಂಪಿಯನ್ಷಿಪ್ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ತಿಲೋತ್ತಮ ಈಗ ವಿಶ್ವದಲ್ಲಿ ರ್ಯಾಂಕಿನಲ್ಲಿ 42ನೇ ಸ್ಥಾನ ಹೊಂದಿರುವುದು ವಿಶೇಷ. ರಾಷ್ಟ್ರೀಯ ಮಟ್ಟದ...