ಸ್ಪೇನ್ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್ ಕಪ್
ವೆಲೆನ್ಸಿಯಾ:
ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್ಐಎಚ್ ನೇಷನ್ಸ್ ಕಪ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್ಗೆ ಅರ್ಹತೆ ಪಡೆಇದಿದೆ.
ಗುರ್ಜಿತ್ ಕೌರ್ 5ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚಾಂಪಿಯನ್ ಪಟ್ಟ ಗೆದ್ದ ಭಾರತ ವಿಶ್ವಕಪ್ನಲ್ಲಿ ಅನುಭವಿಸಿದ ಸೋಲಿನ...
ಗೋಲುಗಳ ಸರದಾರ ಹಾಕಿಯ ಹರೀಶ್ ಮುಟಗಾರ್
ಸೋಮಶೇಖರ್ ಪಡುಕರೆ, ಬೆಂಗಳೂರು
ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್ಷಿಪ್ನಲ್ಲಿ ಡಿವೈಇಎಸ್ ಎ ತಂಡ ಪೋಸ್ಟಲ್ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್ ಮುಟಗಾರ್ ವೈಯಕ್ತಿಕ 7 ಗೋಲುಗಳನ್ನು ಗಳಿಸಿ ಅಚ್ಚರಿ ಮೂಡಿಸಿದರು. ಇತ್ತೀಚಿಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ 9 ಗೋಲುಗಳನ್ನು...
ಒಂದೇ ಮನೆಯಲ್ಲಿ ಮೂವರು ಹಾಕಿ ಚಾಂಪಿಯನ್ನರು!
ಸೋಮಶೇಖರ್ ಪಡುಕರೆ, ಬೆಂಗಳೂರು:
ಮೊಹಮ್ಮದ್ ನಾಸಿರುದ್ದೀನ್ ಕರ್ನಾಟಕದ ರಾಷ್ಟ್ರೀಯ ಹಾಕಿ ಆಟಗಾರ, ಅವರ ಹಿರಿಯ ಮಗ ಮೊಹಮ್ಮದ್ ನೈನುದ್ದೀನ್ ರಾಷ್ಟ್ರೀಯ ಚಾಂಪಿಯನ್ ಹಾಕಿ ಆಟಗಾರ, ಕಿರಿಯ ಮಗ ರಾಹೀಲ್ ಮೊಹಮ್ಮದ್ ರಾಷ್ಟ್ರೀಯ ಆಟಗಾರ..ಹೀಗೆ ಬೆಂಗಳೂರಿನ ಬಾಣಸವಾಡಿಯಲ್ಲಿರುವ ಮನೆಯೊಂದು ಹಾಕಿ ಚಾಂಪಿಯನ್ನರಿಂದ ಶ್ರೀಮಂತಗೊಂಡಿದೆ.
ಇತ್ತೀಚಿಗೆ ಸ್ವಿಜರ್ಲೆಂಡ್ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) 5s ಹಾಕಿ ಲೀಗ್ನಲ್ಲಿ...
ಏಷ್ಯಾಕಪ್ ಹಾಕಿ: ಭಾರತ-ಮಲೇಷ್ಯಾ ಪಂದ್ಯ 3-3ರಲ್ಲಿ ಡ್ರಾ
ಜಕಾರ್ತ: ಕೊನೆಯ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡುವ ತನ್ನ ಹಳೆ ಅಭ್ಯಾಸವನ್ನು ಮುಂದುವರಿಸಿದುದರ ಪರಿಣಾಮ ಭಾರತ ತಂಡ ಏಷ್ಯಾ ಕಪ್ ಹಾಕಿ ಚಾಂಪಿಯನ್ಷಿಪ್ನ ಎರಡನೇ ಸೂಪರ್ 4 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಡ್ರಾ ಸಾಧಿಸಿದೆ.
ಈ ಫಲಿತಾಂಶದ ಮೂಲಕ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು...
ಹಾಕಿ ಏಷ್ಯಾಕಪ್: ಜಪಾನ್ಗೆ ಸೋಲುಣಿಸಿದ ಭಾರತ
ಜಕಾರ್ತ: ಹಾಕಿ ಏಷ್ಯಾ ಕಪ್ ಸೂಪರ್ 4 ಮೊದಲ ಪಂದ್ಯದಲ್ಲಿ ಜಪಾನಿಗೆ 2-1 ಗೋಲುಗಳ ಅಂತರದಲ್ಲಿ ಸೋಲುಣಿಸಿದ ಭಾರತ ಟೂರ್ನಿಯ ಆರಂಭದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡಿದೆ.
ಹಾಲಿ ಚಾಂಪಿಯನ್ ಭಾರತ ಲೀಗ್ ಹಂತದ ಪಂದ್ಯದಲ್ಲಿ ಜಪಾನ್ ವಿರುದ್ಧ 2-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು, ಆದರೆ ಶನಿವಾರದ ಪಂದ್ಯದಲ್ಲಿ ಮಂಜೀತ್ ಸಿಂಗ್ (8ನೇ ನಿಮಿಷ) ಮತ್ತು...
ರಾಜ್ಯಕ್ಕೆ ಕೀರ್ತಿ ತಂದ ಹಾಕಿ ಕೋಚ್ ಸುಂದರೇಶ್
ಸೋಮಶೇಖರ್ ಪಡುಕರೆ ಬೆಂಗಳೂರು:
ಸರಕಾರದ ಕ್ರೀಡಾ ಶಾಲೆಗಳಲ್ಲಿ ಓದಿ, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕ್ರೀಡಾ ಬದುಕಿನ ಆಗು ಹೋಗುಗಳ ಬಗ್ಗೆ ಅಪಾರ ಅನುಭವವಿರುತ್ತದೆ. ಹೀಗೆ ಕ್ರೀಡಾ ಹಾಸ್ಟೆಲ್ನಲ್ಲಿ ಓದಿ ಕ್ರೀಡೆಯಲ್ಲಿ ಸಾಧನೆ ಮಾಡಿ, ತರಬೇತುದಾರರಾಗಿ, ತನ್ನಂತೆಯೇ ಇತರ ಕ್ರೀಡಾಪಟುಗಳ ಸಾಧನೆಗೆ ಶ್ರಮಿಸುತ್ತಿರುವ ಹಾಕಿ ಕೋಚ್ ಸುಂದರೇಶ್ ಮೈಸೂರು ಕ್ರೀಡಾ ಹಾಸ್ಟೆಲ್ನಲ್ಲಿ ಹೊಸ ಅಧ್ಯಯಾಯವನ್ನೇ ಬರೆದಿದ್ದಾರೆ.
ಇತ್ತೀಚಿಗೆ...
ಹಾಕಿ: ಸಾಧಕ ತಂಡಗಳಿಗೆ ಅಭಿನಂದನೆ
ಬೆಂಗಳೂರು: ಭೋಪಾಲದಲ್ಲಿ ನಡೆದ 12ನೇ ಹಾಕಿ ಇಂಡಿಯಾ ಸೀನಿಯನ್ ಮಹಿಳಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ಮಹಿಳಾ ಹಾಕಿ ತಂಡ ಮತ್ತು ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯರನ್ನು ಗುರುವಾರ ಅತ್ಯಂತ ಗೌರವದಿಂದ ಸ್ವಾಗತಿಸಿ, ಗೌರವಿಸಲಾಯಿತು.
ಹಾಕಿ ಕರ್ನಾಟಕ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ...
33 ವರ್ಷಗಳ ನಂತರ ಐತಿಹಾಸಿಕ ಬೆಳ್ಳಿ ಗೆದ್ದ ಕರ್ನಾಟಕ ಮಹಿಳಾ ಹಾಕಿ ತಂಡ
ಸೋಮಶೇಖರ್ ಪಡುಕರೆ ಬೆಂಗಳೂರು
ಭೋಪಾಲದಲ್ಲಿ ನಡೆದ 12ನೇ ಹಾಕಿ ಇಂಡಿಯಾ ಸೀನಿಯನ್ ಮಹಿಳಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕರ್ನಾಟಕ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ.
ಮೈಸೂರಿನ ಕ್ರೀಡಾ ಹಾಸ್ಟೆಲ್ ಆಟಗಾರರಿಂದ ಕೂಡಿರುವ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಒಡಿಶಾ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿ ಬೆಳ್ಳಿ ಪದಕ ಗೆದ್ದಿದೆ. 33...
ಹಾಕಿ: ಸೆಮಿಫೈನಲ್ಗೆ ಕರ್ನಾಟಕ ಪೊಲೀಸ್
sportsmail:
ಜಾರ್ಖಂಡ್ ಪೊಲೀಸ್ ತಂಡವನ್ನು ರೋಚಕ 1-0 ಗೋಲಿನ ಅಂತರದಲ್ಲಿ ಮಣಿಸಿದ ಕರ್ನಾಟಕ ಪೊಲೀಸ್ ತಂಡ ಬೆಂಗಳೂರು ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್ಷಿಪ್ನ ಫೈನಲ್ ತಲುಪಿದೆ.
ಉಮೇಶ್ ಆರ್. ಮಟೆಗಾರ್ ಅವರು 54ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಕರ್ನಾಟಕ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು, ಸೆಮಿಫೈನಲ್ನಲ್ಲಿ ರಾಜ್ಯ ತಂಡ ಐಟಿಬಿಪಿ...
ರಾಷ್ಟ್ರೀಯ ಪೊಲೀಸ್ ಹಾಕಿಗೆ, ಕರ್ನಾಟಕ ಆತಿಥ್ಯ
sportsmail
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆತಿಥ್ಯದಲ್ಲಿ ಡಿಸೆಂಬರ್ 2 ರಿಂದ 11ರವರೆಗೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಅಂಗಣದಲ್ಲಿ 70ನೇ ರಾಷ್ಟ್ರೀಯ ಪೊಲೀಸ್ ಹಾಕಿ ಚಾಂಪಿಯನ್ಷಿಪ್ ನಡೆಯಲಿದೆ.
ಉದ್ಘಾಟನಾ ಸಮಾರಂಭವನ್ನು ರಾಜ್ಯ ಗೃಹ ಸವಿವ ಅರಗ ಜ್ಞಾನೇಂದ್ರ ನೆರವೇರಿಸುವರು, ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡೆದಸಿಕೊಡುವರು,
19 ರಾಜ್ಯಗಳ...