Monday, August 8, 2022

ನೆಟ್‌ ಸೆಟ್ಟರ್ಸ್‌ಗೆ ಮಂಗಳಾ ಪ್ರೀಮಿಯರ್‌ ಲೀಗ್‌

ಬೆಂಗಳೂರು: ಮಂಗಳಾ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ ಮಂಗಳಾ ಬ್ಯಾಡ್ಮಿಂಟನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಂತೋಷ್‌ ರವರ ನೆಟ್‌ ಸೆಟ್ಟರ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಜುಲೈ 2 ಮತ್ತು 3 ರಂದು ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸ್ಪೋರ್ಟ್ಸ್‌ ಡೆನ್‌ ಗಣೇಶ್‌ ಕಾಮತ್‌ ಮತ್ತು ಮಾಧವ್‌ ನಾಯಕ್‌ ಆಡಿದ ಐದೂ ಪಂದ್ಯಗಳಲ್ಲಿ ಜಯ ಗಳಿಸಿರುವುದು ಚಾಂಪಿಯನ್‌ಷಿಪ್‌ನ ವಿಶೇಷವಾಗಿತ್ತು. ಫೈನಲ್‌ ಪಂದ್ಯದಲ್ಲಿ...

ಥಾಮಸ್‌ ಕಪ್‌: ಫೈನಲ್‌ ತಲುಪಿ ಇತಿಹಾಸ ಬರೆದ ಭಾರತ

ಬ್ಯಾಂಕಾಕ್‌: ಡೆನ್ಮಾರ್ಕ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 3-2 ಅಂತರದಲ್ಲಿ ಜಯ ಗಳಿಸಿದ ಭಾರತದ ಬ್ಯಾಡ್ಮಿಂಟನ್‌ ತಂಡ ಮೊದಲ ಬಾರಿಗೆ ಥಾಮಸ್‌ ಕಪ್‌ ಫೈನಲ್‌ ತಲುಪಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ 14 ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವ ಇಂಡೋನೇಷ್ಯಾ ವಿರುದ್ಧ ಸೆಣಸಲಿದೆ. ಇದರೊಂದಿಗೆ ಭಾರತ ಐತಿಹಾಸಿಕ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಎಚ್‌.ಎಸ್‌.ಪ್ರಣಾಯ್‌ ನಿರ್ಣಾಯಕ ಸೆಮಿಫೈನಲ್‌ ಪಂದ್ಯದಲ್ಲಿ...

ಸ್ಪೋರ್ಟ್ಸ್‌ ಡೆನ್‌ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್ಷಿಪ್‌

sportsmail             ಹಿರಿಯ ಬ್ಯಾಡ್ಮಿಂಟನ್‌ ತಾರೆ, ಕ್ರೀಡಾ ಪ್ರೋತ್ಸಾಹಕ ಸ್ಪೋರ್ಟ್ಸ್‌ ಡೆನ್‌ನ ಗಣೇಶ್‌ ಕಾಮತ್‌ ಅವರ ಮುಂದಾಳತ್ವದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್‌ ಚಾಂಪಿಯನ್ಷಿಪ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 238ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಚಾಂಪಿಯನ್ಷಿಪ್‌ ಯಶಸ್ವಿಯಾಯಿತು. 2017ರಿಂದ ಮಂಗಳೂರು ವಿಭಾಗದಲ್ಲಿ ಸತತ ಬ್ಯಾಡ್ಮಿಂಟನ್‌ ಟೂರ್ನಿಗಳನ್ನು ಆಯೋಜಿಸಿಕೊಂಡು ಬಂದಿರುವ ಗಣೇಶ್‌ ಕಾಮತ್‌ ಇದುವರೆಗೂ...

ಬ್ಯಾಡ್ಮಿಂಟನ್: ಅಶ್ವಿನಿ, ಸಿಕ್ಕಿ ಜೋಡಿಗೆ ಜಯ

 Sportsmail ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಭಾರತದ ಸ್ಪರ್ಧಿಗಳು ಜಯದ ಆರಂಭ ಕಂಡಿದ್ದಾರೆ. ಪಿವಿ ಸಿಂಧೂ, ಲಕ್ಷ್ಯ ಸೇನ್, ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಎರಡನೇ ಸುತ್ತು ತಲುಪಿದ್ದಾರೆ. ಆದರೆ ಸ್ವಸ್ತಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಲಕ್ಷ್ಯ ಸೇನ್ ವಿಶ್ವದ ನ.10 ಆಟಗಾರ ಜಪಾನಿನ ಸುನೆಯಮಾ ವಿರುದ್ಧ...

ಬ್ಯಾಂಕ್ ಸಿಬ್ಬಂದಿಗಳಿಗೆ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಡೆಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ, ಗೌತಮ್ ಶೆಟ್ಟಿ ಅವರು ತಮ್ಮದೇ ಆದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ  ತಿಂಗಳ 27 ರಂದು ಬ್ಯಾಂಕ್ ಉದ್ಯೋಗಿಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದ್ದಾರೆ. ಹಳೆಯಂಗಡಿಯ ಲೈಟ್ ಹೌಸ್ ನಲ್ಲಿರುವ...

ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು ಸಹಜ ಸಂಭ್ರಮದಲ್ಲಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಸ್ಥಾನ ಪಡೆಯುವುದಕ್ಕಾಗಿ ತಮ್ಮ ಅವಧಿಯನ್ನು ಸಂಪೂರ್ಣವಾಗಿ ಓದುವುದಕ್ಕೇ ಮುಡುಪಾಗಿಟ್ಟಿರುತ್ತಾರೆ. ಆದರೆ ಇನ್ನು ಕೆಲವರು ಓದಿನ ಜತೆಯಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡಿ ಅಲ್ಲಿಯೂ...

ಏಷ್ಯಾ ಚಾಂಪಿಯನ್‌ಶಿಪ್: ಸೈನಾ ಶುಭಾರಂಭ

ವೂಹಾನ್:  ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು 2019ರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯಾನ್ ಯು ಅವರ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು 12-21, 21-11, 21-17 ಅಂತರದಲ್ಲಿ ಚೀನಾ ಆಟಗಾರ್ತಿಯನ್ನು ಸೋಲಿಸಿದರು. ಆ ಮೂಲಕ ಎರಡನೇ ಸುತ್ತಿಗೆ...

ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ ) ಇವರ ವತಿಯಿಂದ ಏಪ್ರಿಲ್ 21ರ ಭಾನುವಾರದಂದು ಲೈಟ್ ಹೌಸ್ ಹಳೆಯಂಗಡಿ ಇಲ್ಲಿ ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ. ಪುರುಷರ ಮುಕ್ತ ಸಿಂಗಲ್ಸ್ಹಾಗೂ ಡಬಲ್ಸ್, ಮಹಿಳಾ ಮುಕ್ತ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತರು ಹಾಗೂ ರನ್ನರ್ ಅಪ್ ಪ್ರಶಸ್ತಿ ಗೆದ್ದವರಿಗೆ  ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪ್ರವೇಶ ಶುಲ್ಕ ಸಿಂಗಲ್ಸ್ ರೂ. 300ಹಾಗೂ ಡಬಲ್ಸ್ ರೂ. 500 ಆಗಿರುತ್ತದೆ ಎಂದು ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ  ಗಣೇಶ್ ಕಾಮತ್ 8884409014 ಹಾಗೂ ಸಂತೋಷ್ 9843077325 ಅವರನ್ನು ಸಂಪರ್ಕಿಸಬಹುದು. ನಾಕೌಟ್ ಮಾದರಿಯಲ್ಲಿ 30 ಅಂಕಗಳ 1 ಸೆಟ್ ಗೇಮ್ ಆಗಿರುತ್ತದೆ.

ಬ್ಯಾಡ್ಮಿಂಟನ್ ಅಂಗಣದಲ್ಲಿ ವಕೀಲರ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಅದೇ ರೀತಿ ವೃತ್ತಿಯ ನಡುವೆ ಕ್ರೀಡೆಯಲ್ಲಿ ಮಿಂಚುವವರೂ ಇದ್ದಾರೆ. ಆದರೆ ಪ್ರತಿಯೊಬ್ಬರಿಗೂ ವೇದಿಕೆ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಕರಾವಳಿಯ ಪ್ರಸಿದ್ಧ ಕ್ರೀಡಾ ಸಂಸ್ಥೆ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಂಥ ಕೆಲಸವನ್ನು ಮಾಡುತ್ತಿದೆ. ಭಾನುವಾರ ಕ್ಲಬ್‌ನ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆದ ಲಾಯರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 72ಕ್ಕೂ ಹೆಚ್ಚು ವಕೀಲರು ಪಾಲ್ಗೊಂಡು...

ತಂದೆ ,ಮಕ್ಕಳ ಶ್ರಮದಲ್ಲಿ ಅರಳಿದ ಅಂತಾರಾಷ್ಟ್ರೀಯ ಕ್ರೀಡಾ ಅಕಾಡೆಮಿ

ಸ್ಪೋರ್ಟ್ಸ್ ಮೇಲ್ ವರದಿ  ತಂದೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ಯುರೇಟರ್, ಮಗ ರಾಜ್ಯ ಕಂಡ ಅತ್ಯುತ್ತಮ ಕ್ರಿಕೆಟ್ ಆಟಗಾರ, ಇನ್ನೊಬ್ಬ ಮಗ ಸಾಫ್ಟ್ವೇರ್ ಎಂಜಿನಿಯರ್. ಮೂವರಲ್ಲೂ ವಿಶೇಷವಾಗಿ ಇರುವ ಅಂಶವೆಂದರೆ ಕ್ರೀಡೆಗೆ ಪ್ರೋತ್ಸಾಹ ನೀಡುವುದು. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಎಂಟು ಕೋರ್ಟ್‌ಗಳನ್ನೊಳಗೊಂಡ ಬ್ಯಾಡ್ಮಿಂಟನ್ ಅಕಾಡೆಮಿಯೊಂದು ಹುಟ್ಟಿಕೊಳ್ಳಲು ಸಾಧ್ಯಯಿತು. ನಾವು ಹೇಳಹೊರಟಿದ್ದು, ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ...
- Advertisement -

LATEST NEWS

MUST READ