Friday, September 24, 2021

ರಾಜ್ಯ ತಂಡದ ಕದ ತಟ್ಟುತ್ತಿರುವ ತೆಕ್ಕಟ್ಟೆಯ ಸ್ಪಿನ್ ಮಾಂತ್ರಿಕ ಶ್ರೀಶ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಚಿಕ್ಕಂದಿನಲ್ಲಿ ವಾಲಿಬಾಲ್ ಆಡಿಕೊಂಡು, 16 ವರ್ಷ ವಯೋಮಿತಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಲೀಗ್ ಪಂದ್ಯಗಳಲ್ಲಿ ಸ್ಪಿನ್ ಮಾಂತ್ರಿಕನಾಗಿ ಮಿಂಚುತ್ತಿರುವುದು ಸಂತಸದ ವಿಚಾರ. ತೆಕ್ಕಟ್ಟೆಯ ಶ್ರೀಶ ಆಚಾರ್ಯ ಲೆಫ್ಟ್ ಆರ್ಮ್ ಆಫ್ ಸ್ಪಿನ್ನ ಬೌಲರ್ ಆಗಿದ್ದು ಈಗಾಲೇ ಲೀಗ್...

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ. ಲಾ ಲೀಗಾ ಫುಟ್ಬಾಲ್ ಆರಂಭಗೊಂಡಿದೆ. ಕ್ರೀಡಾಪಟುಗಳು ತಮ್ಮ ಅಭ್ಯಾಸವನ್ನು ಆನ್ ಲೈನ್ ಹಾಗೂ ಒಳಾಂಗಣಗಳಲ್ಲಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ...

ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ

ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ  ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ  ಕರೆಯಲ್ಪಡುವ ಪ್ರತಿಷ್ಠಿತ 'ಲಾರಿಯಸ್ ಪ್ರಶಸ್ತಿ'ಯ  20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.  ಭಾರತದ ಕ್ರಿಕೆಟ್ ದೇವರು 'ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ' ದ ಪ್ರಶಸ್ತಿಯನ್ನು ಪಡೆದರೆ, 'ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ  ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು.   ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ  ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020  ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್  ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ  ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್‌, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ..  ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ  'ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್  ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್  ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7  ವಿಶ್ವಾದಾಖಲೆಯನ್ನು  ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ. ಲಾರಿಯಸ್ ಪ್ರಶಸ್ತಿಯ ಇತಿಹಾಸ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಯಿತು. ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು, ಶ್ರೇಷ್ಠ ಮಹಿಳಾ ಕ್ರೀಡಾಪಟು, ಟಿಮ್ ಆಫ್ ದಿ ಇಯರ್, ಕಮ್ ಬ್ಯಾಕ್ ಆಫ್ ದಿ ಇಯರ್ ಹೀಗೆ ಇನ್ನೊಂದಿಷ್ಟು ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.  ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ವಿಶ್ವದಾಖಲೆ ಟೆನಿಸ್ ಲೆಜೆಂಡ್ ರೊಜರ್ ಫೆಡರರ್ ಹೆಸರಲ್ಲಿದೆ. ಅವರು 5 ಬಾರಿ ಮೆನ್ಸ್ ಪ್ಲೆಯರ್ ಆಫ್ ದಿ ಇಯರ್, ಮತ್ತೊಂದು ಬಾರಿ ಕಮ್ ಬ್ಯಾಕ್ ಆಫ್ ದಿ  ಇಯರ್  ಗೆದ್ದಿದ್ದರು. ಮತ್ತುಳಿದಂತೆ ಚಿರತೆ ವೇಗದ ಓಟಗಾರ ಉಸೇನ್ ಬೋಲ್ಟ್ ಮತ್ತು ಟೆನಿಸ್‌ನ ಇನ್ನೊಬ್ಬ  ಲೆಜೆಂಡರಿ ನೊವಾಕ್  ಜೋಕೊವಿಕ್ ನಾಲ್ಕು ಬಾರಿ ಲಾರಿಯಸ್ ಪ್ರಶಸ್ತಿಯನ್ನು ಮುಡಿಗರೆರಿಸಿಕೊಂಡಿದ್ದಾರೆ. ಗಾಲ್ಫ್ ದಿಗ್ಗಜ ಟೈಗರ್ ವುಡ್ಸ್ ಕೂಡ ನಾಲ್ಕು ಬಾರಿ ಗೆದ್ದಿದ್ದಾರೆ. ಸಚಿನ್ ತೆಂಡೂಲ್ಕರ್  ಗೆದ್ದಿದ್ದು ಬಿಟ್ಟರೆ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ 2002ರಲ್ಲಿ ಒಮ್ಮೆ ಟಿಮ್ ಆಫ್ ದಿ ಇಯರ್ ಆಗಿದ್ದೆ ಕ್ರಿಕೆಟ್‌ನ ಸಾಧನೆ...

ಶಾರ್ಜಾದಲ್ಲಿ ಕನ್ನಡಿಗರ ತುಳುನಾಡು ಕ್ರಿಕೆಟ್ ಲೀಗ್ (ಟಿಸಿಎಲ್)

ಸ್ಪೋರ್ಟ್ಸ್ ಮೇಲ್ ವರದಿ ತಾಯ್ನಾಡಿನಲ್ಲಿರುವಾಗ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ ನಂತರವೂ ಅಲ್ಲಿಯೂ ತಮ್ಮದೇ ಆದ ತಂಡಗಳನ್ನು ನಿರ್ಮಿಸಕೊಂಡಿರುವ ಕನ್ನಡಿಗರು ಎರಡನೇ ವರ್ಷದ ತುಳುನಾಡು ಕ್ರಿಕೆಟ್ ಲೀಗ್ (ಟಿಸಿಎಲ್) ಆಯೋಜಿಸಿದ್ದಾರೆ, ಫೆಬ್ರವರಿ 21ರಂದು ಶಾರ್ಜಾದ ಸ್ಕೈಲೈನ್ ಯುನಿವರ್ಸಿಟಿ ಗ್ರೌಂಡ್ ನಲ್ಲಿ ಪಂದ್ಯಗಳು ಅಹರ್ನಿಶಿಯಲ್ಲಿ ನಡೆಯಲಿವೆ. 8 ತಂಡಗಳು, 120 ಆಟಗಾರರು...

ಕರ್ನಾಟಕ ತಂಡ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಕೇರಳದ ವಯನಾಡಿನಲ್ಲಿ ನಡೆದ ಅಂತರ್ ರಾಜ್ಯ ವಿಶೇಷ ಚೇತನರ ಕ್ರಿಕೆಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 148 ರನ್ ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್...

ಆಗಸ್ಟ್ 16 ರಿಂದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ  ಬಹಳ ದಿನಗಳಿಂದ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯು ಆಗಸ್ಟ್ 16 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ ಎಂದು ಶುಕ್ರವಾರ ಪ್ರಕಟಿಸಲಾಯಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಕಾರ್ಯದರ್ಶಿ ಸುಧಾಕರ್ ರಾವ್, ಸಹಾಯಕ ಕಾರ್ಯದರ್ಶಿ ಸಂತೋಶ್ ಮೆನನ್ ಹಾಗೂ ಕೆಎಸ್‌ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ಅವರು...

69 ಎಸೆತಗಳಲ್ಲಿ 237 ರನ್!, ಮಂಗಳೂರಿನ ಯುವಕನ ಅಚ್ಚರಿಯ ಸಾಧನೆ

ಸ್ಪೋರ್ಟ್ಸ್ ಮೇಲ್ ವರದಿ ಕೇವಲ 69 ಎಸೆತ, 18 ಬೌಂಡರಿ,    25 ಸಿಕ್ಸರ್, 237 ರನ್, 343.48 ಸ್ಟ್ರೈಕ್ ರೇಟ್!. ಆರು ಎಸೆತಗಳಿಗೆ ಆರು ಸಿಕ್ಸರ್! ಇದು ಮಂಗಳೂರಿನ 17 ವರ್ಷದ ಆಟಗಾರ ಮೆಕ್‌ನೈಲ್ ನರೋನ್ಹಾ ಬೆಂಗಳೂರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಮಾಡಿದ ಸಾಧನೆ. ಬೆಂಗಳೂರಿನಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಕ್ರಿಕೆಟ್ (ಕೆಐಒಸಿ)ಯ ತಂಡದ ಪರ ಆಡುತ್ತಿರುವ ಮೆಕ್‌ನೈಲ್ ರಘು ಕ್ರಿಕೆಟ್...

ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಕ್ರಿಕೆಟಿಗ ಕೊಹ್ಲಿ

ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2019ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಒಡಂಬಡಿಕೆಗಳಿಂದ 21 ದಶಲಕ್ಷ ಯು ಎಸ್‌ ಡಾಲರ್ ಹಾಗೂ ಸಂಬಳ ಹಾಗೂ ಪಂದ್ಯದ ಪ್ರಶಸ್ತಿಗಳಿಂದ 4 ದಶಲಕ್ಷ ಡಾಲರ್‌ ಸೇರಿದಂತೆ ಒಟ್ಟು 25...

ಯಾರ್ಕ್‌ಶೈರ್‌ ಡೈಮಂಡ್ಸ್‌ಗೆ ಜೆಮಿಮಾ ರೊಡ್ರಿಗಸ್‌

ನವದೆಹಲಿ: ಭಾರತ ಮಹಿಳಾ  ಕ್ರಿಕೆಟ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್‌ ಜೆಮಿಮಾ ರೊಡ್ರಿಗಸ್‌ ಅವರು  ಇಂಗ್ಲೆಂಡ್‌ನ ಯಾರ್ಕ್‌ಶೈರ್‌ ಡೈಮಂಡ್ಸ್‌ 2019ರ ಆವೃತ್ತಿಗೆ ಸಹಿ ಮಾಡಿದ್ದು,  ಇದರೊಂದಿಗೆ ಆಂಗ್ಲರ ನಾಡಿನಲ್ಲಿ ಕಿಯಾ ಸೂಪರ್‌ ಲೀಗ್‌ ಆಡುತ್ತಿರುವ ಭಾರತದ ಮೂರನೇ  ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಈಗಾಗಲೇ ಭಾರತ ತಂಡದ ಸ್ಮೃತಿ ಮಂಧಾನ ಹಾಗೂ  ಹರ್ಮನ್‌ಪ್ರೀತ್‌ ಕೌರ್‌ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ಟಿ-20 ಲೀಗ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಇದೀಗ...

ನಾಲ್ಕನೇ ಸೋಲಿನ ಆತಂಕದಲ್ಲಿ ದಕ್ಷಿಣ ಆಫ್ರಿಕಾ

ಸೌಥ್‌ಹ್ಯಾಮ್ಟನ್‌: ಸತತ ಮೂರು ಪಂದ್ಯಗಳಲ್ಲಿ ಸೋಲಿನಿಂದ ತೀವ್ರ ನಿರಾಸೆಗೆ ಒಳಗಾಗಿರುವ ದಕ್ಷಿಣ ಆಫ್ರಿಕಾ, ಐಸಿಸಿ ವಿಶ್ವಕಪ್‌ನ ಬಲಿಷ್ಠ ಬೌಲಿಂಗ್‌ ಪಡೆ ಎಂದೆನಿಸಿಕೊಂಡಿರುವ ವೆಸ್ಟ್‌ ಇಂಡೀಸ್‌ ವಿರುದ್ಧ ನಾಳೆ ಎದುರಿಸಲು ಸಿದ್ಧವಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಕೇವಲ 15 ರನ್‌ಗಳಿಂದ ಸೋಲು ಒಪ್ಪಿಕೊಂಡಿರುವ ವಿಂಡೀಸ್‌ ಮತ್ತೆ ಗೆಲುವಿನ ಲಯಕ್ಕೆ ಮರಳುವ ಯೋಜನೆಯೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ. ದಕ್ಷಿಣ ಆಫ್ರಿಕಾ...
- Advertisement -

LATEST NEWS

MUST READ