Wednesday, November 13, 2024

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ

ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ. ಲಾ ಲೀಗಾ ಫುಟ್ಬಾಲ್ ಆರಂಭಗೊಂಡಿದೆ. ಕ್ರೀಡಾಪಟುಗಳು ತಮ್ಮ ಅಭ್ಯಾಸವನ್ನು ಆನ್ ಲೈನ್ ಹಾಗೂ ಒಳಾಂಗಣಗಳಲ್ಲಿ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ತರಬೇತಿ ಕೇಂದ್ರವೆನಿಸಿರುವ ಕರ್ನಾಟಕ ಇನ್ಸಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ನಲ್ಲಿ ಆರೋಗ್ಯ ಕ್ರಮಗಳನ್ನು ಅನುಸರಿಸಿ ಕ್ರಿಕೆಟಿಗರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ 36 ನೆಟ್ ಇರುವುದರಿಂದ ಸದ್ಯ 123 ಕ್ರಿಕೆಟಿಗರಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ. ಇದಕ್ಕೂ ಮೊದಲು ಕೆಐಒಸಿ ಆನ್ ಲೈನ್ ನಲ್ಲಿ ತರಬೇತಿ ನೀಡುತ್ತಿತ್ತು.

ಈ ಕುರಿತು ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕೆಐಒಸಿ ಪ್ರಧಾನ ಕೋಚ್ ಇರ್ಫಾನ್ ಸೇಠ್, ‘’ಜಗತ್ತೇ ಸಂಕಷ್ಟದಲ್ಲಿದೆ, ಕ್ರೀಡಾ ಚಟುವಟಿಕೆಗಳು ಅಲ್ಲಲ್ಲಿ ಆರಂಭಗೊಂಡಿದೆ. ನಾವು ಸರಕಾರದ ಆರೋಗ್ಯ ನಿಯಮಗಳನ್ನು ಪಾಲಿಸಿ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದೇವೆ. ತೆರೆದ ಅಂಗಣದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆಟಗಾರರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕ್ರಿಕೆಟ್ ತರಬೇತಿ ನೆಟ್ ನಲ್ಲಿ ನಡೆಯುವುದರಿಂದ ಸಂಪರ್ಕಕ್ಕೆ ಅವಕಾಶ ಇರುವುದಿಲ್ಲ. ಅಂಗಣಕ್ಕೆ ಆಟಗಾರರನ್ನು ಬರಮಾಡಿಕೊಳ್ಳುವಾಗ ಸ್ಯಾನಿಟೈಸರ್, ಮಾಸ್ಕ್ ಸೇರಿಂದಂತೆ ಪ್ರತಿಯೊಂದು ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಹೊರರಾಜ್ಯದ ಕ್ರಿಕೆಟಿಗರಿಗೆ ಇನ್ನೂ ಅವಕಾಶ ಕಲ್ಪಿಸಲಿಲ್ಲ. ಸಮೀಪದವರು ಮಾತ್ರ ಅಭ್ಯಾಸಕ್ಕೆ ಬರುತ್ತಿದ್ದಾರೆ,’’ ಎಂದು ಹೇಳಿದರು.

ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡಾ ಮುಚ್ಚಿದ ಅಂಗಣದಲ್ಲಿ ನಡೆಯಲಿದೆ, ಅದಕ್ಕೆ ಸರಕಾರ ಒಪ್ಪಿಗೆ ನೀಡಿದರೂ ಇನ್ನೂ ವೇಳಾಪಟ್ಟಿಯ ಬಗ್ಗೆ ಅಂತಿಮ ತೀರ್ಮಾನವನ್ನು ಬಿಸಿಸಿಐ ಕೈಗೊಂಡಿಲ್ಲ.

Related Articles