ಮಾದರಿಯಾದ ಮಂಜುನಾಥರ ಮಾಗಡಿ ಕ್ರಿಕೆಟ್ ಅಕಾಡೆಮಿ
ಸೋಮಶೇಖರ್ ಪಡುಕರೆ, ಬೆಂಗಳೂರು:
ಆತ ವೈಎಂಸಿಎ ಕ್ರಿಕೆಟ್ ತಂಡದಲ್ಲಿ ಆರಂಭಿಕ ಆಟಗಾರ, ಆಫ್ ಸ್ಪಿನ್ ಬೌಲರ್. ಕ್ರಿಕೆಟ್ ಬದುಕಿನಲ್ಲಿ ಯಶಸ್ಸು ಕಾಣಬೇಕೆಂದು ಕನಸು ಕಂಡವ. ಆದರೆ ವೃತ್ತಿಪರ ಕ್ರಿಕೆಟ್ನಲ್ಲಿ ಹೆಚ್ಚು ಸಾಧನೆ ಮಾಡಲಾಗಲಿಲ್ಲ. ತನ್ನಿಂದಾಗದ ಸಾಧನೆಯನ್ನು ತನ್ನಂತೆ ಇರುವ ಬಡ ಮಕ್ಕಳಿಂದ ಮಾಡಿಸಬೇಕೆಂಬ ಛಲ ಮಾತ್ರ ದೂರವಾಗಲಿಲ್ಲ, ಇದಕ್ಕಾಗಿಯೇ ಬೆಂಗಳೂರು ಗ್ರಾಮಾಂತರದಲ್ಲಿ ಒಂದಿಷ್ಟು ಮಕ್ಕಳನ್ನು ಒಗ್ಗೂಡಿಸಿ...
ಕುಸ್ತಿಯ ಆಸ್ತಿ ಕನ್ನಡಿಗ ಡಾ. ವಿನೋದ್ ಕುಮಾರ್
ಸೋಮಶೇಖರ್ ಪಡುಕರೆ, ಬೆಂಗಳೂರು:
ಮೈಸೂರಿನಲ್ಲಿ ಕೃಷಿಕ ಕೃಷ್ಣಪ್ಪ ಎಂಬುವರು ನಿತ್ಯವೂ ಕುಸ್ತಿಪಟುವೊಬ್ಬರ ಮನೆಗೆ ಹಾಲನ್ನು ನೀಡುತ್ತಿದ್ದರು. ಅವರು ಮಕ್ಕಳಿಗೆ ಕುಸ್ತಿ ಕಲಿಸುವುದು ಮತ್ತು ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿ ತನ್ನ ಮಗನೂ ಅವರಂತೆ ಕುಸ್ತಿಪಟುವಾಗಲಿ ಎಂದು ಮನದಲ್ಲೇ ಹಾರೈಸುತ್ತಿದ್ದರು. ಹಲವು ಬಾರಿ ಮಗನಲ್ಲಿಯೂ ಈ ವಿಷಯವನ್ನು ಹೇಳಿದ್ದರು. ತಂದೆಯ ಆಸೆಯಂತೆ ಕುಸ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ...
ಕ್ರೀಡಾ ತರಬೇತುದಾರರ ಹುದ್ದೆ ಕಾಯಂ ಅವರ ಸಾವಿನ ಬಳಿಕವೇ?
ಸೋಮಶೇಖರ್ ಪಡುಕರೆ ಬೆಂಗಳೂರು
ಕರ್ನಾಟಕ ರಾಜ್ಯ ಸರಕಾರ ಈ ಬಾರಿ ಕ್ರೀಡಾ ಸಾಧಕರ ಬದುಕಿಗೆ ಭದ್ರತೆ ನೀಡುವ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ. ಆದರೆ ಈ ಕ್ರೀಡಾ ಸಾಧಕರ ಯಶಸ್ಸಿನ ಹಿಂದೆ ಶ್ರಮಿಸುತ್ತಿರುವ ತರಬೇತುದಾರರ ಬದುಕಿನ ಬಗ್ಗೆ ಯೋಚಿಸಿದಂತಿಲ್ಲ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ವಿವಿಧ ತರಬೇತುದಾರರು ದಶಕಗಳಿಂದ ದುಡಿಯುತ್ತಿದ್ದಾರೆ....
ಆಸೀಸ್ನಲ್ಲಿ ಮಂಗಳೂರಿನ ಮಿಂಚು ಅಕ್ಷಯ್ ಬಲ್ಲಾಳ್
ಸೋಮಶೇಖರ್ ಪಡುಕರೆ, ಬೆಂಗಳೂರು
ಮಂಗಳೂರಿನ ಕ್ರಿಕೆಟಿಗರೊಬ್ಬರು “ಯುನಿವರ್ಸಲ್ ಬಾಸ್” ಖ್ಯಾತಿಯ ಆಟಗಾರ ಕ್ರಿಸ್ ಗೇಲ್ ಜೊತೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಅಂಗಣದಲ್ಲಿ ಆಡುತ್ತಿದ್ದಾರೆಂದರೆ ಅದು ಕನ್ನಡಿಗರ ಹೆಮ್ಮೆ. ಅದೊಂದು ಅಪೂರ್ವ ಕ್ಷಣ. ಆ ಗೌರವಕ್ಕೆ ಪಾತ್ರರಾದ ಆಟಗಾರ ಬೇರೆ ಯಾರೂ ಅಲ್ಲ. ಕರ್ನಾಟಕ ಮತ್ತು ಕೇರಳ ಕ್ರಿಕೆಟ್ನಲ್ಲಿ ಮಿಂಚಿದ ಆಲ್ರೌಂಡರ್ ವಿಟ್ಲ ಅರಮನೆ ಮೂಲದ, ಮಂಗಳೂರಿನ ಕದ್ರಿ...
ಅರಬ್ ನಾಡಿನ ಅನುಭವಿ ಅಂಪೈರ್ ಕರ್ನಾಟಕದ ಅರುಣ್ ಡಿʼಸಿಲ್ವಾ
ಸೋಮಶೇಖರ್ ಪಡುಕರೆ, ಬೆಂಗಳೂರು
ಕ್ರೀಡೆ ಒಬ್ಬ ವ್ಯಕ್ತಿಯನ್ನು ಸದಾ ಕ್ರಿಯಾಶೀಲನಾಗಿರುವಂತೆ ಮಾಡುತ್ತದೆ. ಅದು ಬ್ಯಾಡ್ಮಿಂಟನ್ ಆಗಿರಬಹುದು ಇಲ್ಲ ಕ್ರಿಕೆಟ್ ಆಗಿರಬಹುದು. ಚಿಕ್ಕಂದಿನಲ್ಲಿ ಬ್ಯಾಡ್ಮಿಂಟನ್ ಆಡಿಕೊಂಡು, ಜೊತೆಯಲ್ಲಿ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡು. ಆಡುವ ವಯಸ್ಸು ದಾಟಿದರೂ ಅಂಪೈರಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡು ದೂರದ ಸೌಧಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದುಕೊಂಡು ಅಲ್ಲಿ ಕ್ರಿಕೆಟ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ...
ಕುಣಿಗಲ್ನಲ್ಲಿ ಕ್ರೀಡೆಗೆ ಜೀವ ತುಂಬಿದ ಕೃಷಿಕ, ಕ್ರೀಡಾ ಗುರು ರಂಗನಾಥ
ಸೋಮಶೇಖರ್ ಪಡುಕರೆ, ಬೆಂಗಳೂರು:
ಕುಣಿಗಲ್ಗೆ ಕ್ರೀಡೆಯಲ್ಲಿ ಈಗ ರಂಗನಾಥನ ಕೃಪೆ. ಕ್ರಿಕೆಟಿಗನಾಗಿ ತಾನು ಹುಟ್ಟಿದ ಊರಿಗೆ ಕೀರ್ತಿ ತರಬೇಕೆಂದು ಬೆಂಗಳೂರು ಸೇರಿದ ಯುವಕನಿಗೆ ಅಲ್ಲಿ ಸಿಕ್ಕಿದ್ದು ಬರೇ ನಿರಾಸೆ. ನಗರದಲ್ಲಿ ಕೆಲಸ ಮಾಡುತ್ತ ಸಾಮಾನ್ಯನಾಗುವುದಕ್ಕಿಂತ ಹಳ್ಳಿಯಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಿದರೆ ನಾಳೆ ನಮ್ಮ ಹಳ್ಳಿಯಿಂದ ಒಂದು ಮಗು ಜಾಗತಿಕ ಮಟ್ಟದಲ್ಲಿ ಮಿಂಚಿದರೆ ಬದುಕು ಧನ್ಯ...
ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಗೌಡ
ಸೋಮಶೇಖರ್ ಪಡುಕರೆ, ಬೆಂಗಳೂರು
ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಜ ಟ್ರೋಫಿಯಲ್ಲಿ ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಜೆ. ಗೌಡ ಅವರು ಅಂಗಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ, ಎಡಗೈ ಮತ್ತು ಬಲಗೈ ಬೌಲರ್ (ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಬಲ್ಲ ಬೌಲರ್) ಧೀರಜ್ ವೈಯಕ್ತಿಕ ಗರಿಷ್ಠ 219* ರನ್ ಸೇರಿದಂತೆ 7 ಶತಕ...
ಶಾಲೆಯ ನೀರಿನ ಕೊರತೆ ನೀಗಿಸಲು ಓಟ ಆರಂಭಿಸಿದ ಶಿವಾನಂದ ಏಷ್ಯಾಕ್ಕೇ ಚಾಂಪಿಯನ್ ಆದ ಕತೆ
ಸೋಮಶೇಖರ್ ಪಡುಕರೆ, ಬೆಂಗಳೂರು
ನರಗುಂದದ ಬನಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಆ ಪುಟ್ಟ ಬಾಲಕನ ಮನೆ ಇರುವುದು ಊರಿನ ಹೊರ ವಲಯದಲ್ಲಿ. ಶಾಲೆಯಲ್ಲಿ ನೀರು ಇರುತ್ತಿರಲಿಲ್ಲ. ದೂರದ ಹಿರಿಹಳ್ಳ ಕೆರೆಯಿಂದ ನೀರು ತರಬೇಕು, ಶಾಲೆಯಲ್ಲೇ ಮಲಗುತ್ತಿದ್ದರಿಂದ ಆ ಬಾಲಕನೇ ನೀರು ತುಂಬುತ್ತಿದ್ದ. ಹೀಗೆ ಓಡೋಡಿ ನೀರು ತುಂಬುತ್ತಿದ್ದ ಹುಡುಗ ಓಟವನ್ನೇ ತನ್ನ ಬದುಕಾಗಿಸಿಕೊಂಡು ಏಷ್ಯಾ ಮಟ್ಟದಲ್ಲಿ...
ಕ್ರೀಡಾಂಗಣದಲ್ಲಿರುವ ತಾಯಂದಿರಿಗೆ ಸ್ತನ್ಯಪಾನದ ಮಹತ್ವ ತಿಳಿಸಿದ ಡಾ. ರವ್ನೀತ್ ಜೋಶಿ
ಸೋಮಶೇಖರ್ ಪಡುಕರೆ, ಬೆಂಗಳೂರು
ಕ್ರೀಡಾ ಜಗತ್ತಿನಲ್ಲಿ ಹೆಚ್ಚಿನ ಮಹಿಳಾ ಕ್ರೀಡಾಪಟುಗಳು ಮದುವೆಯ ನಂತರ ಅಂಗಣಕ್ಕಿಳಿಯುವುದಿಲ್ಲ. ಮದುವೆ ಆಯಿತೆಂದರೆ ಅವರ ಕ್ರೀಡಾ ಬದುಕೇ ಮುಗಿದಂತೆ. ಆದರೆ ಮದುವೆಯಾಗಿ, ಮಗುವನ್ನು ಪಡೆದು ಕ್ರೀಡಾಂಗಣದಲ್ಲಿ ಮಿಂಚಿದ ತಾಯಂದಿರ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ತಾಯಿಯಾದ ನಂತರವೂ ಕ್ರೀಡಾ ಸಾಧನೆ ಮಾಡಬಹುದು, ಆದರೆ ಮಗುವಿಗೆ ಹಾಲುಣಿಸುವುದು ಅತ್ಯಂತ ಪ್ರಮುಖವಾದುದು. ಆಗಸ್ಟ್...
ಚೆಸ್ ಜಗತ್ತಿನ ಮಾದರಿ ಮಂಡ್ಯದ ಮಾಧುರಿ
ಸೋಮಶೇಖರ್ ಪಡುಕರೆ, ಬೆಂಗಳೂರು
“ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ, ಸಮಾಜ ಮತ್ತು ದೇಶಕ್ಕೇ ನೀಡಿದಂತೆ,” ಈ ಮಾತನ್ನು ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ಬಳಸುವುದು ಸಹಜ. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸಂಬಂಧಿಸಿರುವುದು ಮಾತ್ರವಲ್ಲ. ಪಠ್ಯೇತರ ಮೂಲಕವೂ ಬದುಕನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಗ್ರಾಮದ ಚೆಸ್ ಕ್ವೀನ್ ಮಾಧುರಿ ಚೌಧರಿ.
ಕರ್ನಾಟದಕಲ್ಲಿ...