ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಪ್ಪನ ದಾಖಲೆ ಮುರಿದ ಮಗ
ಗ್ಲಾಸ್ಗೋ: ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಪೂರ್ವ ಘಟನೆಯೊಂದು ನಡೆಯಿತು. ಭಾರತದ ಅಜಯ್ ಬಾಬು ವೆಲ್ಲೂರಿ ತನ್ನ ತಂದೆ 16 ವರ್ಷಗಳ ಹಿಂದೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದಕ್ಕೆ ಬದಲಾಗಿ ಬೆಳ್ಳಿ ಗೆದ್ದರು. ಮಲೇಷ್ಯಾದ ಹೆರ್ರಿ ಹಿದಾಯತ್ ತನ್ನ ತಂದೆ ಹಿದಾಯತ್ ಹಮಿದಾನ್ ಅವರಂತೆ ಚಿನ್ನ ಗೆದ್ದರು. Father-son medal bond at Commonwealth Games, a unique moment in the world of sports
2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೆಲಗಡದ ಶ್ರೀನಿವಾಸ ರಾವ್ ಪುರುಷರ 56ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆಗ ಅಜರ್ಗೆ 6 ವರ್ಷ. 16 ವರ್ಷಗಳ ಬಳಿಕ ಶ್ರೀನಿವಾಸ್ ಅವರ ಮಗ ಅಜಯ್ ಬಾಬು ವೆಲ್ಲುರಿ ಗ್ಲಾಸ್ಗೋದಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದರು, ಆದರೆ 1 ಕೆಜಿ ಕಡಿಮೆ ಭಾರವೆತ್ತಿ ಬೆಳ್ಳಿಗೆ ತೃಪ್ತಿಪಟ್ಟರು.

ಅಜಯ್ ವೆಲ್ಲೂರಿ ಅವರಿಗಿಂತ 1 ಕೆಜಿ ಹೆಚ್ಚು ಭಾರ ಎತ್ತಿದ ಮಲೇಷ್ಯಾದ ವೇಟ್ಲಿಫ್ಟರ್ ಎರ್ರಿ ಹಿದಾಯತ್ 79 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ತನ್ನ ತಂದೆಯ ಸಾಧನೆಯನ್ನು ಸರಿಗಟ್ಟಿದರು. ಎರ್ರಿ ಅವರ ತಂದೆ ಹಿದಾಯತ್ ಹಮಿದಾನ್ 1988ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು.

