Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ಡ್ರಾದೊಂದಿಗೆ ಮೂರನೇ ಸ್ಥಾನ ತಲುಪಿದ ನಾರ್ಥ್ ಈಸ್ಟ್
- By Sportsmail Desk
- . February 19, 2021
ಸ್ಪೋರ್ಟ್ಸ್ ಮೇಲ್ ವರದಿ, ಗೋವಾ: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದ ನಾರ್ಥ್ ಈಸ್ಟ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 90 ನೇ ನಿಮಿಷದಲ್ಲಿ
ಮೋಹನ್ ಬಾಗನ್ ವಿರುದ್ಧ ಸೇಡಿಗೆ ಕಾಯುತ್ತಿರುವ ಈಸ್ಟ್ ಬೆಂಗಾಲ್
- By Sportsmail Desk
- . February 19, 2021
ISL ಕೋಲ್ಕತಾ ಡರ್ಬಿಗೆ 100 ವರ್ಷಗಳ ಸಂಭ್ರಮ. ಈ ಹಿಂದೆ ಡರ್ಬಿಯಲ್ಲಿ ಸ್ಪರ್ಧಿಸಿದ್ದ ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್ ಈಗ ಎಟಿಕೆ ಮೋಹನ್ ಬಾಗನ್ ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ರೂಪದಲ್ಲಿ
ಕೋಲ್ಕತಾ ಡರ್ಬಿಯ ಮೊದಲ ಅನುಭವದ ನಿರೀಕ್ಷೆಯಲ್ಲಿ ಜಿಂಗಾನ್
- By Sportsmail Desk
- . November 24, 2020
ಗೋವಾ: ಸದ್ಯ ಭಾರತದ ಫುಟ್ಬಾಲ್ ನಲ್ಲಿ ಪ್ರಮುಖ ಆಟಗಾರರೆನಿಸಿ ಪ್ರಸಿದ್ಧಿಪಡೆದಿರುವ ಆಟಗಾರರೊಬ್ಬರು, “ಕ್ರೀಡಾಂಗಣದಲ್ಲಿ ಕೋಲ್ಕತಾ ಡರ್ಬಿ ಪಂದ್ಯವನ್ನು ಇದುವರೆಗೂ ನೋಡುವ ಅವಕಾಶವನ್ನು ಪಡೆದಿಲ್ಲ,” ಎಂದು ಹೇಳಿಕೆ ನೀಡಿ ಒಪ್ಪಕೊಂಡಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಸಂದೇಶ್ ಜಿಂಗಾನ್
ಅರಿದಾನೆ ಗಳಿಸಿದ ಗೋಲಿನಿಂದ ಹೈದರಾಬಾದ್ ಗೆ ಜಯ
- By Sportsmail Desk
- . November 24, 2020
ಗೋವಾ, ನವೆಂಬರ್, 24, 2020 ಅರಿದಾನೆ ಸ್ಯಾಂಟನಾ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಹೈದರಾಬಾದ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಒಡಿಶಾ ವಿರುದ್ಧ ತಾನು ಆಡಿದ ಮೊದಲ
ಸಮಬಲ ಸಾಧಿಸಿದ ಗೋವಾ, ಬೆಂಗಳೂರು
- By Sportsmail Desk
- . November 23, 2020
ಗೋವಾ, ನವೆಂಬರ್, 23, 2020 ಬೆಂಗಳೂರು ಎಫ್ ಸಿ ಪರ ಕ್ಲೈಟನ್ ಸಿಲ್ವಾ (27ನೇ ನಿಮಿಷ) ಮತ್ತು ಜುವಾನನ್ ಫೆರ್ನಾಂಡೀಸ್ (57ನೇ ನಿಮಿಷ), ಎಫ್ ಸಿ ಗೋವಾ ಪರ ಐಗರ್ ಏಂಗುಲೊ (66 ಮತ್ತು
ಬೆಂಗಳೂರು ಗೆಲ್ಲುವ ಫೇವರಿಟ್
- By Sportsmail Desk
- . November 22, 2020
ಗೋವಾ, ನವೆಂಬರ್, 22, 2020 ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಲೀಗ್ ಇತಿಹಾಸದಲ್ಲೇ ಸ್ಥಿರ ಪ್ರದರ್ಶನ ತೋರುತ್ತ ಬಂದಿರುವ ಎಫ್ ಸಿ ಗೋವಾ ಮತ್ತು ಬೆಂಗಳೂರು ಎಫ್
ಮುಂಬೈ ಸಿಟಿ ವಿರುದ್ಧ ನಾರ್ಥ್ ಈಸ್ಟ್ ದಿ ಬೆಸ್ಟ್
- By Sportsmail Desk
- . November 22, 2020
ಗೋವಾ, ನವೆಂಬರ್, 22, 2020 ಕ್ವಿಸಿ ಅಪ್ಪಿಯ್ಯ (49ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಪ್ರಭುತ್ವ ಸಾಧಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ
ಎಟಿಕೆ ಮೋಹನ್ ಬಾಗನ್ ತಂಡದ ಜಯದ ಆರಂಭ
- By Sportsmail Desk
- . November 21, 2020
ಗೋವಾ, ನವೆಂಬರ್, 20, 2020 ರಾಯ್ ಕೃಷ್ಣ ಅವರು 67ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಅವೃತ್ತಿಯ ಮೊದಲ ಪಂದ್ಯದಲ್ಲಿ ಕೇರಳ
ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ
- By Sportsmail Desk
- . July 1, 2020
ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ.
ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ
- By Sportsmail Desk
- . February 20, 2020
ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ‘ಲಾರಿಯಸ್ ಪ್ರಶಸ್ತಿ’ಯ 20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು. ಭಾರತದ ಕ್ರಿಕೆಟ್ ದೇವರು ‘ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ’ ದ ಪ್ರಶಸ್ತಿಯನ್ನು ಪಡೆದರೆ, ‘ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’ ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು. ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020 ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ.. ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ ‘ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’ ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್ ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7 ವಿಶ್ವಾದಾಖಲೆಯನ್ನು ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ.