Thursday, October 10, 2024

ಕೋಲ್ಕತಾ ಡರ್ಬಿಯ ಮೊದಲ ಅನುಭವದ ನಿರೀಕ್ಷೆಯಲ್ಲಿ ಜಿಂಗಾನ್

ಗೋವಾ:   ಸದ್ಯ ಭಾರತದ ಫುಟ್ಬಾಲ್ ನಲ್ಲಿ ಪ್ರಮುಖ ಆಟಗಾರರೆನಿಸಿ ಪ್ರಸಿದ್ಧಿಪಡೆದಿರುವ ಆಟಗಾರರೊಬ್ಬರು, “ಕ್ರೀಡಾಂಗಣದಲ್ಲಿ ಕೋಲ್ಕತಾ ಡರ್ಬಿ ಪಂದ್ಯವನ್ನು ಇದುವರೆಗೂ ನೋಡುವ ಅವಕಾಶವನ್ನು ಪಡೆದಿಲ್ಲ,” ಎಂದು ಹೇಳಿಕೆ ನೀಡಿ ಒಪ್ಪಕೊಂಡಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಸಂದೇಶ್ ಜಿಂಗಾನ್ ಹೇಳಿದ್ದಾರೆ.

ಶುಕ್ರವಾರ ನಡೆಯುವ ಪಂದ್ಯದಲ್ಲಿ ಜಿಂಗಾನ್ ಕೇವಲ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುವುದು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದನ್ನು ಮಾಡಬೇಕಾಗಿದೆ. ಎಟಿಕೆ ಮೋಹನ್ ಬಾಗನ್ ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಡೆಯುವ ಮೊದಲ ಕೋಲ್ಕೊತಾ ಡರ್ಬಿಯಲ್ಲಿ ಮುಖಾಮುಖಿಯಾಗಲಿದ್ದು ಸಂದೇಶ್ ಈ ಐತಿಹಾಸಿಕ ಪಂದ್ಯದ ಕೇಂದ್ರವೆನಿಸಲಿದ್ದಾರೆ.

ಕೇರಳ ಬ್ಲಾಸ್ಟರ್ಸ್ ತಂಡದಲ್ಲಿ ಆರು ಋತುಗಳನ್ನು ಕಳೆದ ಜಿಂಗಾನ್, ಈ ಬೇಸಿಗೆಯ ಆರಂಭದಲ್ಲಿ ಕೊಚ್ಚಿ ಮೂಲದ ತಂಡವನ್ನು ತೊರೆಯಲು ನಿರ್ಧರಿಸಿದರು. ಅಲ್ಲಿಂದ ವಿಲೀನಗೊಂಡಿರುವ ಎಟಿಕೆ ಮೋಬನ್ ಬಾಗನ್ ತಂಡವನ್ನು ಐದು ವರ್ಷಗಳ ಅವದಿಗೆ ಸೇರಿದರು. ಕೋಚ್ ಆಂಟೊನಿಯೋ ಲೊಪೆಜ್ ಹಬ್ಬಾಸ್ 27 ವರ್ಷದ ಡಿಫೆಂಡರ್ ಎಟಿಕೆಎಂಬಿಯ ವ್ಯವಸ್ಥೆಯಲ್ಲಿ ಐದು ನಾಯಕರಲ್ಲಿ ಒಬ್ಬರೆನಿಸಿದರು.

ಮರಿನರ್ಸ್ ಎಂದೇ ಖ್ಯಾತಿ ಪಡೆದಿರುವ ಎಟಿಕೆಎಂಬಿಯ ಎರಡನೇ ಪಂದ್ಯದಲ್ಲೆ ಜಿಂಗಾನ್ ಅವರು ಡರ್ಬಿಯ ಅನುಭವ ಪಡೆಯಲಿದ್ದಾರೆ. ಆದರೆ ಅವರು ಅದು ಇತರ ಪಂದ್ಯಗಳಂತೆ ಮತ್ತೊಂದು ಪಂದ್ಯ ಎಂದು ಹೇಳಿದ್ದಾರೆ. “ಇದು ಜಗತ್ತಿನಲ್ಲಿ ನಡೆಯುವ ಪ್ರಮುಖ ಡರ್ಬಿಗಳಲ್ಲಿ ಒಂದು.’’ ಎಂದು ಜಿಂಗಾನ್ ಹೇಳಿದ್ದು, “ಒಬ್ಬ ಫುಟ್ಬಾಲರ್ ಆಗಿ ನೀವು ಇಂಥ ಪ್ರಮುಖ ವೇದಿಕೆಗಳಲ್ಲಿ ಇಂಥ ಪ್ರಮುಖ ಪಂದ್ಯಗಳ ಭಾಗವಾಗಬೇಕು. ಅದಕ್ಕಾಗಿ ನಾನು ಉತ್ಸುಕನಾಗಿದ್ದೇನೆ, ಈ ಪಂದ್ಯದ ಸೆಳೆತದ ಆಳವನ್ನು ಅರಿಯಲು ನಾನು ಮನಸ್ಸು ಮಾಡುವುದಿಲ್ಲ. ಅದು ಕೋಲ್ಕತಾ ಡರ್ಬಿಯಾಗಿರಬಹುದು ಅಥವಾ ಬೇರೆ ಯಾವುದೇ ಪಂದ್ಯವಾಗಿರಬಹುದು. ಎಲ್ಲವೂ ಒಂದೆ. ಎಲ್ಲವೂ ಪ್ರಮುಖವಾದುದು, ಆದ್ದರಿಂದ ಭಾವುಕತೆ ನನ್ನನ್ನು ಆವರಿಸದಂತೆ ನೋಡಿಕೊಳ್ಳುತ್ತೇನೆ. ತರಬೇತುದಾರರು ಮತ್ತು ಇತರ ಸಿಬ್ಬಂದಿ ಇದನ್ನು ಫುಟ್ಬಾಲ್ ಆಟವೆಂದು ಪರಿಗಣಿಸುತ್ತಾರೆ,’’ ಎಂದರು.

ಇದರರ್ಥ ಜಿಂಗಾನ್, ಎರಡೂ ಕ್ಲಬ್ ಗಳ ಅಭಿಮಾನಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದಲ್ಲ. ಅವರಿಗೆ ತಮ್ಮ ತಂಡ ಮುಂದಿನ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸುವುದು ಪ್ರಮುಖವಾಗಿದೆ. , ‘’ ಡರ್ಬಿಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ. ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಇದರ ಬೇರು ಸಾಕಷ್ಟು ಆಳದಲ್ಲಿದೆ,’’ ಎಂದು ಹೇಳಿರುವ ಜಿಂಗಾಣ್, ‘’ಈಗ ಅದರ ಭಾಗವಾಗಿದ್ದೇನೆ ಎಂದೆನಿಸುತ್ತಿದೆ. ಭಾರತದ ಫುಟ್ಬಾಲ್ ಹಾಗೂ ಇಲ್ಲಿಯ ಅಭಿಮಾನಿಗಳಿಗೆ  ಕೋಲ್ಕೊತಾ ಡರ್ಬಿ ಬಹಳ ಮುಖ್ಯವಾದುದು, ಆದರೆ ಸದ್ಯದ ಸ್ಥಿತಿಯಲ್ಲಿ ನಮಗೆ ಇತರ ತಂಡಗಳಂತೆ ಕ್ಲೀನ್ ಶೀಟ್ ಮೂಲಕ ಮೂರು ಅಂಕ ಗಳಿಸುವುದು ಮುಖ್ಯವಾಗಿದೆ,’’ ಎಂದರು.

ಜಿಂಗಾನ್ ಗೆ ಈ ರೀತಿಯ ದೊಡ್ಡ ಪಂದ್ಯಗಳು ಅಪರಿಚಿತವಲ್ಲ. ಅವರು ಐಎಸ್ ಎಲ್ ನಲ್ಲಿ ಎರಡು ಫೈನಲ್ ಸೇರಿದಂತೆ, ಭಾರತ ತಂಡದ ಪರ ಹಲವಾರು ಪಂದ್ಯಗಳನ್ನು ಆಡಿದ್ದಾರೆ. ಒತ್ತಡಗಳನ್ನು ನಿಭಾಯಿಸುವುದು ಅವರಿಗೆ ಹೊಸತಲ್ಲ. ಅದೇ ರೀತಿ ಕೋಲ್ಕೊತಾ ಡರ್ಬಿ ಇತರ ಪಂದ್ಯಗಳಿಗಿಂತ ಭಿನ್ನವಾಗಿರುತ್ತದೆ ಎಂದು ಅವರು ಗ್ರಹಿಸುವುದಿಲ್ಲ. “ಚಾಂಪಿಯನ್ ತಂಡದ ಭಾಗವಾಗಿರುವುದು ಹೆಚ್ಚು ಒತ್ತಡವನ್ನು ನಿರ್ಮಾಣಮಾಡುಚುದು ಸಹಜ. ಆದರೆ ನಾನು ಜಾವಾಬ್ದಾರಿಯನ್ನು ನಿಭಾಯಿಸುವುದನ್ನು ಇಷ್ಟಪಡುತ್ತೇನೆ. ಇದು ನಿಮ್ಮಲ್ಲಿ ಏನೋ ಇದೆ ಎಂಬುದನ್ನು ಹೇಳುತ್ತದೆ. ಇದರಿಂದಾಗಿ ಜನರು ನಿಮ್ಮಿಂದ ಏನನ್ನೋ ನಿರೀಕ್ಷಿಸುತ್ತಾರೆ, ಆಗ ನೀವು ಅದಕ್ಕೆ ಪೂರಕವಾಗಿ ಆಡಬಹುದು,’’ ಎಂದು ಜಿಂಗಾನ್ ಹೇಳಿದರು.

ಕೇರಳ ಬ್ಲಾಸ್ಟರ್ಸ್ ವಿರುದ್ಧ ಕಳೆದ ಶುಕ್ರವಾರ ನಡೆದ ಪಂದ್ಯದಲ್ಲಿ ಎಟಿಕೆಎಂಬಿ 1-0 ಗೋಲಿನಿಂದ ಜಯ ಗಳಿಸಿ ತನ್ನ ಜಯದ ಅಭಿಯಾನ ಆರಂಭಿಸಿತ್ತು. ಲಿವಪ್ ಪೂಲ್ ತಂಡದ ಮಾಜಿ ಆಟಗಾರ  ರಾಬ್ಬಿ ಫ್ಲವರ್ ಅವರ ನಾಯಕತ್ವ ಹೊಂದಿರುವ ಈಸ್ಟ್ ಬೆಂಗಾಲ್ ಜಯ ಗಳಿಸಲು ಬಹಳ ಉತ್ಸುಕವಾಗಿದ್ದು, ಮರಿನರ್ಸ್ ವಿರುದ್ಧ ಅಭಿಯಾನಕ್ಕೆ ಸಜ್ಜಾಗಿದೆ.

ಕೆಂಪು ಮತ್ತು ಸ್ವರ್ಣ ವರ್ಣದ ತಂಡ ಅನುಭವಿ ದೇಶೀಯ ಹಾಗೂ ವಿದೇಶಿ ಆಟಗಾರರಿಂದ ಕೂಡಿದ್ದು, ಲೀಗ್ ನಲ್ಲಿ ಬೃಹತ್ ಶಕ್ತಿಯಾಗಿ ರೂಪುಗೊಳ್ಳಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಎಟಿಕೆಎಂಬಿ ಫೇವರಿಟ್ ತಂಡವಾಗಿದ್ದು, ಆದರೆ ಜಿಂಗಾನ್, ಇನ್ನೂ ಆಡದ ಈಸ್ಟ್ ಬೆಂಗಾಲ್ ತಂಡವನ್ನು ಊಹಿಸುವುದು ಕಷ್ಟ ಎಂದಿದ್ದಾರೆ.

“ನಮ್ಮದು ಉತ್ತಮ ರೀತಿಯಲ್ಲಿ ಸ್ಥಿರಗೊಂಡಿರುವ ತಂಡ, ಆದ್ದರಿಂದ ಅವರಿಗೆ ನಮ್ಮ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಹೇಳಿಕೊಳ್ಳಬಹುದು,’’ ಎಂದಿರು ಜಿಂಗಾನ್, “ಅವರದ್ದು ಹೊಸ ತಂಡ, ಅವರನ್ನು ಊಹಿಸುವುದ ಕಷ್ಟ, ಅವರು ಯಾವ ರೀತಿಯ ಪ್ರದರ್ಶನ ನೀಡುವರು ಎಂಬುದರ ಬಗ್ಗೆ ನಮಗೆ ಅರಿವಿಲ್ಲ. ನಾವು ನಮ್ಮ ಆಟದ ರೀತಿ ಮತ್ತು ಕೋಚ್ ಮೇಲೆ ನಂಬಿಕೆ ಇಟ್ಟಿದ್ದೇವೆ. ಈ ಪಂದ್ಯಕ್ಕಾಗಿ ನಮ್ಮಲ್ಲಿ ಸೂಕ್ತವಾದ ಯೋಜನೆ ಇದೆ,’’ ಎಂದರು.

Related Articles