ಗೋವಾ, ನವೆಂಬರ್, 24, 2020
ಅರಿದಾನೆ ಸ್ಯಾಂಟನಾ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಹೈದರಾಬಾದ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಒಡಿಶಾ ವಿರುದ್ಧ ತಾನು ಆಡಿದ ಮೊದಲ ಪಂದ್ಯದಲ್ಲಿ 1-0 ಗೋಲಿನಿಂದ ಜಯ ಗಳಿಸಿ ಶುಭ ಆರಂಭ ಕಂಡಿದೆ. ಒಡಿಶಾದ ಡಿಫೆನ್ಸ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿರುವುದು ದಿಟ್ಟ ಹೋರಾಟದ ನಡುವೆ ಗೋಲು ಗಳಿಸುವಲ್ಲಿ ವಿಫಲವಾಗಲು ಪ್ರಮುಖ ಕಾರಣವಾಯಿತು.
ಹೈದರಾಬಾದ್ ಗೆ ಮುನ್ನಡೆ
ಅರಿದಾನೆ 34ನೇ ನಿಮಿಷದಲ್ಲಿ ಗಳಿಸಿದ ಪೆನಾಲ್ಟಿ ಗೋಲಿನಿಂದ ಹೈದರಾಬದ್ ತಂಡ ಇಲ್ಲಿ ನಡೆಯುತ್ತಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಒಡಿಶಾ ವಿರುದ್ಧ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು.
ಆರಂಭದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಹೈದರಾಬಾದ್ ತಂಡಕ್ಕೆ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಲಭಿಸಿತ್ತು ಆದರೆ ಚೆಂಡು ಗೋಲ್ ಬಾಕ್ಸ್ ನಿಂದ ಹೊರ ಸಾಗಿದ ಕಾರಣ ಹೈದರಾಬಾದ್ ಗೆ ಆರಂಭಿಕ ಮುನ್ನಡೆ ಸಿಗಲಿಲ್ಲ.
ಒಡಿಶಾ ಎಫ್ ಸಿ ತಂಡದ ಡಿಫೆನ್ಸ್ ವಿಭಾಗ ಈ ಬಾರಿಯೂ ಸುಧಾರಣೆ ಆದಂತೆ ಕಾಣಲಿಲ್ಲ. 34ನೇ ನಿಮಿಷದಲ್ಲಿ ಒಡಿಶಾದ ಸ್ಟೀವನ್ ವಿನ್ಸೆಂಟ್ ಅವರ ಕೈಗೆ ಚೆಂಡು ತಗಲಿದ ಕಾರಣ ಹೈದರಾಬಾದ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು, ಅರಿದಾನೆ ಸ್ಯಾಂಟನಾ ಯಾವುದೇ ಪ್ರಮಾದ ಎಸಗದೆ ಅರ್ಶ್ ದೀಪ್ ಸಿಂಗ್ ಅವರನ್ನು ವಂಚಿಸಿ ತಂಡಕ್ಕೆ ಅಮೂಲ್ಯ ಮುನ್ನಡೆ ತಂದುಕೊಟ್ಟರು.
ಹೊಸ ಹೋರಾಟ:
ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವ ಒಡಿಶಾ ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ತಂಡಗಳು ಹಿಂದಿನ ಸಾಧನೆಗಳನ್ನು ಮರೆತು ಅಂಗಣಕ್ಕಿಳಿಯಬೇಕಾಯಿತು. ಏಕೆಂದರೆ ಅಲ್ಲಿ ಸೋಲಿನ ಕತೆಗಳೇ ಹೆಚ್ಚು
ಹೈದರಾಬಾದ್ ತಂಡ ತಾನು ಆಡಿರುವ ಪಂದ್ಯಗಳಲ್ಲಿ 12 ಪಂದ್ಯಗಳನ್ನು ಸೋತಿದ್ದು, ಎದುರಾಳಿ ತಂಡಕ್ಕೆ 39 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ.ಒಡಿಶಾ ಕೂಡ ಎದುರಾಳಿ ತಂಡದಂತೆ ಉತ್ತಮ ಪ್ರದರ್ಶನ ನೀಡದೆ 31 ಗೋಲುಗಳನ್ನು ಗಳಿಸುವ ಅವಕಾಶ ಕಲ್ಪಿಸಿತ್ತು.ಆದರೆ ಒಡಿಶಾ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಹಿಂದಿನ ಲೆಕ್ಕಾಚಾರಗಳ ಬಗ್ಗೆ ಗಮನ ಹರಿಸದೆ ಈಗ ಗೆಲ್ಲುವುದು ಮುಖ್ಯ ಎಂದಿದ್ದಾರೆ.
ಲಕ್ಸ್ಟರ್ ಅವರಿಗೆ ಅಟ್ಯಾಕ್ ವಿಭಾಗದಲ್ಲಿ ಉತ್ತಮ ಆಯ್ಕೆ ಇದೆ. ಬ್ರೆಜಿಲ್ ಮೂಲಕ ಸ್ಟ್ರೈಕರ್ ಡಿಗೋ ಮೌರಿಸಿಯೊ ಮತ್ತು ಹೈದರಾಬಾದ್ ತಂಡದಲ್ಲಿ ಆಡಡಿದ್ದ ಮಾರ್ಸೆಲಿನೊ ಇಬ್ಬರೂ ತಂಡಕ್ಕೆ ತಿರುವು ನೀಡಬಲ್ಲ ಆಟಗಾರರು.
ಕಳೆದ ಋತುವಿನಲ್ಲಿ ಹೈದರಾಬಾದ್ ಕೊನೆಯ ಸ್ಥಾನ ಗಳಿಸಿತ್ತು.ಹೊಸ ಕೋಚ್ ಮಾನ್ವೆಲ್ ಮಾರ್ಕ್ವೆಜ್ ರೊಕಾ ಹೊಸ ಆರಂಭದ ಅಗತ್ಯ ಇದೆ ಎಂದಿದ್ದಾರೆ. ರೋಹಿಲ್ ದಾನು, ಲಿಸ್ಟನ್ ಕೊಲಾಕೊ ಮತ್ತು ಆಕಾಶ್ ಮಿಶ್ರಾ ಅವರು ಉತ್ತಮ ಯುವ ಆಟಗಾರರು. ಪುಟಿದೆದ್ದರೆ ಹೈದರಾಬಾದ್ ಜಯದ ಹೆಜ್ಜೆ ಇಟ್ಟೀತು.ಕಳೆದ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದ್ದ ಒಡಿಶಾ ಎಫ್ ಸಿ ಹಾಗೂ ಹೈದರಾಬಾದ್ ತಂಡಗಳು ಹೊಸ ಉಲ್ಲಾಸ ಮತ್ತು ಹುಮ್ಮಸ್ಸಿನೊಂದಿಗೆ ಋತುವಿನ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು.