Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ಇಂದಿನಿಂದ ಮಹಿಳಾ ಫುಟ್ಬಾಲ್ ಲೀಗ್ ಆರಂಭ

ಸ್ಪೋರ್ಟ್ಸ್ ಮೇಲ್ ವರದಿ ನಾಲ್ಕನೇ ಆವೃತ್ತಿಯ ಹೀರೋ ಇಂಡಿಯನ್ ಮಹಿಳಾ ಫುಟ್ಬಾಲ್ ಲೀಗ್ ಬೆಂಗಳೂರಿನಲ್ಲಿ ಶುಕ್ರವಾರದಿಂದ ನಡೆಯಲಿದ್ದು, 10 ರಾಜ್ಯಗಳ 12 ತಂಡಗಳು ಈ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲಿವೆ.  21 ದಿನಗಳ ಕಾಲ ನಡೆಯುವ

Articles By Sportsmail

ಕರ್ನಾಟಕ ತಂಡ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಕೇರಳದ ವಯನಾಡಿನಲ್ಲಿ ನಡೆದ ಅಂತರ್ ರಾಜ್ಯ ವಿಶೇಷ ಚೇತನರ ಕ್ರಿಕೆಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 148 ರನ್ ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ

Articles By Sportsmail

ಬೆಂಗಳೂರು ಎಫ್ ಸಿ ನನ್ನ ಕ್ರೀಡಾ ಬದುಕಿನ ಹೊಸ ಹೆಜ್ಜೆ: ಆಶಿಕ್

ಆಶಿಕ್ ಕುರುನಿಯನ್ ಎಫ್ ಸಿ ಪುಣೆ ಸಿಟಿ ತೊರೆದು ಬೆಂಗಳೂರು ಎಫ್ ಸಿ ಸೇರಿದ್ದು ಬಹಳಷ್ಟು ಅಚ್ಚರಿಯ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಹೊಸ ತಾರೆಯಾಗಿ ಮೂಡಿಬಂದ, ಸಾಕಷ್ಟು ಪ್ರತಿಭೆಯ ಆಶಿಕ್ ಚಾಂಪಿಯನ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.  ಆಶಿಕ್ ಅವರ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ. ನೀವು ಭಾರತದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ಹೊಸ ತಾರೆ, ರಾಷ್ಟ್ರೀಯ ತಂಡದಲ್ಲಿದ್ದು ನಿಮಗೆ ಹೇಗನಿಸಿತು? ರಾಷ್ಟ್ರೀಯ ತಂಡದಲ್ಲಿ ನನ್ನ ಬದುಕು ಅದ್ಬುತವೆನಿಸಿತ್ತು. ದೇಶಕ್ಕಾಗಿ ಆಡುವುದು ನನಗೆ ಹಾಗೂ ನನ್ನ ಕುಟುಂಭಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಂದು ಪಂದ್ಯದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವುದರಿಂದ ನಾನು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆರಂಭಿಕ ಹನ್ನೊಂದು ಆಟಗಾರರಲ್ಲಿ ನಾನು ಸ್ಥಿರವಾಗಿರಬೇಕೆಂದು ಬಯಸುತ್ತಿದ್ದೆ. ನೀವು ಬೆಂಗಳೂರು ಎಫ್ ಸಿ ತಂಡವನ್ನು ಸೇರಿರುವ ಬಗ್ಗೆಯೂ ಸಾಕಷ್ಟು ಮಾತುಕತೆ ನಡೆಯುತ್ತಿದೆ …. ನಾನು ಬೆಂಗಳೂರು ಎಫ್ ಸಿ ತಂಡವನ್ನು ಸೇರಿಕೊಂಡಿದ್ದು ನನ್ನ ಬದುಕಿನ ತಿರುವು, ಏಕೆಂದರೆ ನಾನು ನಾಲ್ಕು ವರ್ಷಗಳಿಗಾಗಿ ಸಹಿ ಮಾಡಿದ್ದೇನೆ. ಈ ಕ್ಲಬ್ ನಲ್ಲಿ ಹೆಚ್ಚು ಕಾಲ ಇದ್ದರೆ ನನ್ನ ಕ್ರೀಡಾ ಬದುಕಿಗೆ ನೆರವಾಗಬಹುದು ಎಂದು ನಂಬಿರುವೆ. ನೀವು ಕ್ಲಬ್ ನ ಜತೆ ಹಾಗೂ ಆಟಗಾರರೊಂದಿಗೆ ಉತ್ತಮವಾದ ಅನುಬಂಧವನ್ನು ಹೊಂದಿರಬೇಕು. ಅತ್ಯಂತ ವೃತ್ತಿಪರತೆಯಿಂದ ಕೂಡಿರುವ ಬೆಂಗಳೂರು ಎಫ್ ಸಿ ಗಾಗಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ. ನೀವು ಈಗ ರದ್ದಾಗಿರುವ ಎಫ್ ಸಿ ಪುಣೆ ಸಿಟಿಯಲ್ಲಿ  ಕೆಲವು ಕಾಲ ಕಳೆದಿದ್ದೀರಿ, ಬದಲಾವಣೆಗೆ ಯಾಕೆ ಮನಸ್ಸು ಮಾಡಿದಿರಿ? ನನ್ನ ಫುಟ್ಬಾಲ್ ಬದುಕಿನಲ್ಲಿ ಎಫ್ ಸಿ ಪುಣೆ ಸಿಟಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ. ಐದು ವರ್ಷಗಳ ಹಿಂದೆ ಚಿಕ್ಕ ಬಾಲಕನಿದ್ದಾಗ ಪುಣೆಗೆ ಆಗಮಿಸಿದೆ, ಎರಡು ವರ್ಷಗಳ ಕಾಲ ಪುಣೆ ಅಕಾಡೆಮಿಯಲ್ಲಿದ್ದೆ, ನಂತರ ಪುಣೆ ಸಿಟಿ  ತಂಡವನ್ನು ಸೇರಿಕೊಂಡೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ ಪುಣೆ ಸಿಟಿ  ತಂಡದ ಪರ ಆಡಿದೆ, ಅಲ್ಲಿಂದ ರಾಷ್ಟ್ರೀಯ ತಂಡವನ್ನು ಸೇರಿಕೊಂಡೆ, ಆದ್ದರಿಂದ ಪುಣೆ ಸಿಟಿ  ತಂಡ ನನ್ನ ಕ್ರೀಡಾ ಬದುಕಿನ ಪ್ರಮುಖ ಭಾಗ. ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್  ಎಫ್ ಸಿ ನಡುವಿನ ಪ್ರತಿಸ್ಪರ್ಧಿತನ ನಿಮಗೆ ಹೇಗನಿಸುತ್ತದೆ?, ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸುವಾಗ ಹೇಗನಿಸಬಹುದು? ನನಗೆ ಕೇರಳ ಮನೆ. ಅವರಿಗಾಗಿ ಆಡಲು ನನಗೆ ಕಾಲಾವಕಾಶ ಸಿಗಬಹುದೇ? ಯಾರಾದರೂ ಹಾಗೆ ಮಾಡಬಹುದೇನೋ, ನನಗೆ ಗೊತ್ತಿಲ್ಲ, ಮುಂದಿನ ನಾಲ್ಕು ವರ್ಷಗಳ ಕಾಲ ಆಡಲು ನಾನು ಇಲ್ಲಿ ಇದ್ದೇನೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಇದು ಫುಟ್ಬಾಲ್ ಆಟದ ರೀತಿ, ಪರಿಸ್ಥಿತಿ ಹೀಗೆ ಬದಲಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಏನೂ ಆಗಬಹುದು. ಐಎಸ್ ಎಲ್ ನಲ್ಲಿ ಕೇರಳ ತಂಡವೊಂದು ಇರುವುದು ನನಗೆ ಹೆಮ್ಮೆಯ ಸಂಗತಿ. ಏಕೆಂದರೆ ಅದು ಮನೆಯಂಗಣದಲ್ಲಿ ಆಡುವ ಅವಕಾಶವನ್ನು ನೀಡಿದೆ. ಅವರಿಗೆ ಇರುವ ಬೆಂಬಲವನ್ನು ಗಮನಿಸಿದಾಗ ಅಲ್ಲೊಂದು ತಂಡ ಇರುವುದು ಪ್ರಮುಖ, ದೇಶದಲ್ಲಿ ಫುಟ್ಬಾಲ್  ಬೆಳೆಯುತ್ತದೆ, ಮತ್ತು ಆಟಗಾರರು ಆಡಲು ಹೆಚ್ಚು ಮನೋಬಲವನ್ನು ಹೊಂದುತ್ತಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳ ಪಡೆ  ಮಂಜಪ್ಪಾಡ ಹಾಗೂ ಇಲ್ಲಿರುವ ನಮ್ಮ ಅಭಿಮಾನಿಗಳು ವೆಸ್ಟ್ ಬ್ಲಾಕ್ ಬ್ಲೂಸ್ ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇರುವ ಎರಡು ಗುಂಪುಗಳು, ಪಂದ್ಯದ ವೇಳೆ ಈ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಪ್ರೋತ್ಸಾಹದಿಂದ ಸಾಕಷ್ಟು ಬದಲಾವಣೆ ಆಗಬಹುದು. ದೇಶದಲ್ಲಿರುವ ಯುವ ಆಟಗಾರರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಾಗ ಹೇಗನಿಸುತ್ತದೆ?  ಆ ರೀತಿಯಲ್ಲಿ ಯುವ ಆಟಗಾರರ ಬಗ್ಗೆ ಜನ ಉತ್ತಮ ರೀತಿಯಲ್ಲಿ ಮಾತನಾಡುತ್ತಿರುವುದರಿಂದ  ಸಾಕಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆ. ಯುವ ಆಟಗಾರರು ಚೆಂಡಿನಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುತ್ತಿದ್ದಾರೆ, ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ರೀತಿಯ ಹೋರಾಟ ನೀಡುತ್ತಿದ್ದಾರೆ. ಬೆಂಗಳೂರು ಎಫ್ ತಂಡದಲ್ಲಿ ನಾನಿದನ್ನು ಕಾಣುತ್ತಿದ್ದೇನೆ, ನಮ್ಮ ಕಾಯ್ದಿರಿಸಿದ ಆಟಗಾರರು, ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ, ಭಾರತದಲ್ಲಿ ಅನೇಕ ಯುವ ಆಟಗಾರರು ಸಜ್ಜಾಗುತ್ತಿದ್ದಾರೆ. ಹಿರಿಯ ಆಟಗಾರರು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದಾಗ, ಕೋಚ್ ಗಳು ಸಲಹೆ ನೀಡಿದಾಗ ಯಾವ ರೀತಿಯಲ್ಲಿ ಸ್ಫೂರ್ತಿ ಸಿಗಬಹುವುದು ಎಂಬುದನ್ನು ಒಬ್ಬ ಯುವ ಆಟಗಾರನಾಗಿ ಅರ್ಥೈಸಿಕೊಳ್ಳಬಲ್ಲೆ.    

Articles By Sportsmail

ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ: ಎರಿಕ್ ಪಾರ್ಥಲು (8ನೇ ನಿಮಿಷ) ಹಾಗೂ ನಾಯಕ ಸುನಿಲ್ ಛೆಟ್ರಿ (63ನೇ ನಿಮಿಷ) ಗಳಿಸಿದ ಗೋಲುಗಳು ಮತ್ತು ಗುರ್ಪ್ರೀತ್ ಸಿಂಗ್ ಸಂಧೂ ಅವರ ಅದ್ಭುತ ಗೋಲ್ ಕೀಪಿಂಗ್ ನೆರವಿನಿಂದ ಹಾಲಿ ಚಾಂಪಿಯನ್

Special Story

14ರ ವಯಸ್ಸಿನಲ್ಲೇ 41 ಶತಕ ಗಳಿಸಿದ ಶಿವಂ !!

ಸೋಮಶೇಖರ್ ಪಡುಕೆರೆ, ಸ್ಪೋರ್ಟ್ಸ್ ಮೇಲ್  ಆ ಪುಟ್ಟ ಬಾಲಕ ಬ್ಯಾಟ್ ಹಿಡಿದು ಅಂಗಣಕ್ಕಿಳಿದರೆ ಅಲ್ಲೊಂದು ಶತಕ ಕಟ್ಟಿಟ್ಟ ಬುತ್ತಿ. ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ ಹಾಗೂ ವಿಜಯ್ ಭಾರದ್ವಾಜ್ ಅವರಂತ ಹಿರಿಯ ಆಟಗಾರರು ಈ

Other sports

ಟೂರ್ ಆಫ್ ನೀಲಗಿರೀಸ್‍1ಡಿಸೆಂಬರ್ 8 ರಿಂದ 15ರವರೆಗೆ

ಟಿಎಫ್‍ಎನ್ 2019ರಲ್ಲಿ 60 ಸೈಕ್ಲಿಸ್ಟ್ ಗಳು ಪೆಡಲ್ ಮಾಡಲಿದ್ದಾರೆ. ಏಳು ಮಂದಿ ಮಹಿಳಾ  ಸೈಕ್ಲಿಸ್ಟ್ ಗಳು   ಟಿಎಫ್‍ಎನ್ 2019ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನಿಂದ ಆರಂಭಿಸಿ  ಸೈಕ್ಲಿಸ್ಟ್ ಗಳು   ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ)ಗೆ ತೆರಳಿ ಮೈಸೂರಿಗೆ ಮರಳಲಿದೆ. ಸ್ಪೋರ್ಟ್ಸ್ ಮೇಲ್ ವರದಿ: ಭಾರತದ ಅತಿದೊಡ್ಡ ಹಾಗೂ

Special Story

ಮುಖ್ಯ ಮಂತ್ರಿಗಳೇ ನಿಮ್ಮ ಹೃದಯ ಈ ಸಾಧಕಿಗಾಗಿ ಮಿಡಿಯಲಿ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲ ಮಾರುತ್ತಿರುವ (ಈಗ ನಿಷೇಧದ ಕಾರಣ ಮಾರುತ್ತಿಲ್ಲ) ಅಂತಾರಾಷ್ಟ್ರೀಯ ಮಾಜಿ ಪವರ್ ಲಿಫ್ಟರ್ ಗೀತಾ ಭಾಯಿ ಬಗ್ಗೆ ಇನ್ನು ಮುಂದೆ ಬರೆಯ ಬಾರದು

Articles By Sportsmail

ಬ್ಯಾಂಕ್ ಸಿಬ್ಬಂದಿಗಳಿಗೆ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಡೆಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ, ಗೌತಮ್ ಶೆಟ್ಟಿ ಅವರು ತಮ್ಮದೇ ಆದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್

Special Story

ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಅಕಾಡೆಮಿ ಬೆಂಗಳೂರಿನ ಕೆಐಒಸಿ

ಸ್ಪೋರ್ಟ್ಸ್ ಮೇಲ್ ವರದಿ ಕ್ರಿಕೆಟ್ ನಲ್ಲಿ ವೃತ್ತಿಪರತೆಯನ್ನು ಕಂಡುಕೊಳ್ಳಬೇಕಾದರೆ ಉತ್ತಮ ತರಬೇತಿಯ ಅನಿವಾರ್ಯವಿರುತ್ತದೆ. ಒಂದೇ ಅಕಾಡೆಮಿಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ತರಬೇತುದಾರಿದ್ದರೆ ಆ ಅಕಾಡೆಮಿ ಯಾವ ರೀತಿಯಲ್ಲಿ ತರಬೇತಿ ನೀಡಬಹುದು ಎಂಬ ಅಚ್ಚರಿ ಕಾಡುವುದು

Special Story

ಹಾಕಿ ಅಂಗಣದಲ್ಲಿ ಏರ್‌ಕ್ರಾಫ್ಟ್ ಎಂಜಿನಿಯರ್ ಕನ್ನಡಿಗ ರಘುಪ್ರಸಾದ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಬೆಂಗಳೂರಿನ ರಘುಪ್ರಸಾದ್ ಆರ್.ವಿ. ಏರ್‌ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರ್ ಆಗಿರುತ್ತಿದ್ದರೆ ಅವರು ಉತ್ತಮ ಕೆಲಸಗಾರನಾಗಿ ಯಾರ ಗಮನಕ್ಕೂ ಬಾರದೆ ಇರುತ್ತಿದ್ದರೋ ಏನೋ. ಆದರೆ ಹಾಕಿ ಅಂಗಣದಲ್ಲಿ ಅಂಪೈರ್ ಆದ ಕಾರಣ