ಬ್ಯಾಂಕ್ ಸಿಬ್ಬಂದಿಗಳಿಗೆ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

0
317
ಸ್ಪೋರ್ಟ್ಸ್ ಮೇಲ್ ವರದಿ 
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಡೆಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ, ಗೌತಮ್ ಶೆಟ್ಟಿ ಅವರು ತಮ್ಮದೇ ಆದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ  ತಿಂಗಳ 27 ರಂದು ಬ್ಯಾಂಕ್ ಉದ್ಯೋಗಿಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದ್ದಾರೆ.
ಹಳೆಯಂಗಡಿಯ ಲೈಟ್ ಹೌಸ್ ನಲ್ಲಿರುವ ಟಾರ್ಪೆಡೋಸ್ ಕ್ಲಬ್ ನ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಟ್ರೋಫಿ ನೀದಲಾಗುವುದು.
ಪ್ರವೇಶ ಶುಲ್ಕ ಸಿಂಗಲ್ಸ್ ಗೆ ರೂ. 300 ಹಾಗೂ ಡಬಲ್ಸ್ ಗೆ ರೂ.500 ಆಗಿರುತ್ತದೆ. ಹೆಸರು ನೋಂದಾಯಿಸಲು ಅಕ್ಟೋಬರ್ 25 ಕೊನೆಯ ದಿನಾಂಕವಾಗಿರುತ್ತದೆ. 1 ಸೆಟ್ ನ ಪಂದ್ಯವಾಗಿದ್ದು,30 ಅಂಕಗಳಿಂದ ಕೂಡಿದ್ದು, ನಾಕೌಟ್ ಪದ್ಧತಿಯಲ್ಲಿ ನಡೆಯುತ್ತದೆ. ಸ್ಥಳದಲ್ಲೇ ಪ್ರವೇಶಕ್ಕೆ ಅವಕ್ಕಾಶ ಇರುವುದಿಲ್ಲ.
ಹೆಚ್ಚಿನ ವಿವರಗಳಿಗೆ ಗಣೇಶ್ ಕಾಮತ್,8884409014  ಹಾಗೂ ಸಂತೋಷ್ 9483077325 ಅವರನ್ನು ಸಂಪರ್ಕಿಸಿ