Sunday, September 8, 2024

ಟೂರ್ ಆಫ್ ನೀಲಗಿರೀಸ್‍1ಡಿಸೆಂಬರ್ 8 ರಿಂದ 15ರವರೆಗೆ

ಟಿಎಫ್‍ಎನ್ 2019ರಲ್ಲಿ 60 ಸೈಕ್ಲಿಸ್ಟ್ ಗಳು ಪೆಡಲ್ ಮಾಡಲಿದ್ದಾರೆ. ಏಳು ಮಂದಿ ಮಹಿಳಾ  ಸೈಕ್ಲಿಸ್ಟ್ ಗಳು   ಟಿಎಫ್‍ಎನ್ 2019ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮೈಸೂರಿನಿಂದ ಆರಂಭಿಸಿ 
 ಸೈಕ್ಲಿಸ್ಟ್ ಗಳು   ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ)ಗೆ ತೆರಳಿ ಮೈಸೂರಿಗೆ ಮರಳಲಿದೆ.

ಸ್ಪೋರ್ಟ್ಸ್ ಮೇಲ್ ವರದಿ: ಭಾರತದ ಅತಿದೊಡ್ಡ ಹಾಗೂ ಅತ್ಯಂತ ಜನಪ್ರಿಯ ಬೈಕ್ ಟೂರ್ ಹಾಗೂ ರೈಡ್ ಎ ಸೈಕಲ್ ಫೌಂಡೇಷನ್(ಆರ್‍ಎಸಿ-ಎಫ್)ನ ಪ್ರಮುಖ ಕಾರ್ಯಕ್ರಮವಾಗಿರುವ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) 2019ರ ಆವೃತ್ತಿ ಡಿಸೆಂಬರ್ 8ರಿಂದ 15ರವರೆಗೆ ನಡೆಯಲಿದೆ. ಟಿಎಫ್‍ಎನ್ 2019ರ 12ನೇ ಆವೃತ್ತಿಯಲ್ಲಿ 60 ಮಂದಿ  ಸೈಕ್ಲಿಸ್ಟ್ ಗಳು    ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅಚ್ಚರಿದಾಯಕ ಕಂದರಗಳೂ ಸೇರಿದಂತೆ  850ಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ಇದು ಸವಾರರ ಕೆಚ್ಚು, ಬದ್ಧತೆ, ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ಪರೀಕ್ಷೆ ಎನಿಸಲಿದೆ.

ಮೈಸೂರಿನ ರೆಜೆಂಟಾ ಸೆಂಟ್ರಲ್ ಹೆರಾಲ್ಡ್ ನಿಂದ ಡಿಸೆಂಬರ್ 8ರಂದು ಆರಂಭವಾಗುವ ಸೈಕಲ್ ಸವಾರಿ ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ)ಗೆ ತೆರಳಿ ಮೈಸೂರಿಗೆ ಡಿಸೆಂಬರ್ 15ರಂದು ಆಗಮಿಸುವುದರೊಂದಿಗೆ ಮುಕ್ತಾಯವಾಗಲಿದೆ. ಐದನೇ ದಿನ ಅಂದರೆ ಸುಲ್ತಾನ್‍ ಬತ್ತೇರಿಯಿಂದ ಊಟಿಗೆ ಸೈಕಲ್ ತುಳಿಯುವ ದಿನ ಸೈಕ್ಲಿಸ್ಟ್‍ಗಳು ಕಲ್ಹತ್ತಿ ಘಾಟಿಯನ್ನು ಏರಲಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಠಿಣವಾದ ಸೈಕ್ಲಿಂಗ್ ಆರೋಹಣವಾಗಿದೆ.

ಟಿಎಫ್‍ಎನ್ ನಿರಂತರವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದು, ಪ್ರತಿ ಆವೃತ್ತಿ ಕೂಡಾ ಹೊಸ ಸೈಕ್ಲಿಸ್ಟ್‍ಗಳಿಗೆ ವಿಶೇಷಣೆ ಎನಿಸಿದೆ. ಅದು ಮಾರ್ಗ, ಗಿರಿ ಕಂದಕ, ಭೌಗೋಳಿಕ ಪ್ರದೇಶ ಮತ್ತಿತರ ಅಂಶಗಳ ವಿಶೇಷಣೆಗಳಿಂದ ಕೂಡಿರುತ್ತದೆ. 12ನೇ ಆವೃತ್ತಿಯಲ್ಲಿ 2ನೇ ದಿನ ಸೈಕಲ್ ಸವಾರಿ ಹಾಸನದಿಂದ ಚಿಕ್ಕಮಗಳೂರಿಗೆ ತೆರಳಲಿದೆ. ಇದು ಸವಾರರಿಗೆ ವಿಶಿಷ್ಟ ಮಲೆನಾಡಿನ ಸೊಬಗಿನ ಅಪೂರ್ವ ಅನುಭವವನ್ನು ಉಣಿಸಲಿದೆ. ಟಿಎಫ್‍ಎನ್‍ಗಾಗಿ ಹೊಸ ಮಾರ್ಗವನ್ನು ರೂಪಿಸಲಾಗಿದ್ದು, ಸೈಕ್ಲಿಸ್ಟ್‍ಗಳು ಅತ್ಯಪೂರ್ವ ಪ್ರವಾಸಿ ತಾಣಗಳಾದ, ಹೊಯ್ಸಳ ಯುಗದ ಶಿಲ್ಪಕಲೆ ಮತ್ತು ಐತಿಹಾಸಿಕ ಪರಂಪರೆಗೆ ಹೆಸರಾದ ಬೇಲೂರು, ಹಳೇಬೀಡು ಮತ್ತಿತರ ಪ್ರದೇಶಗಳ ಮೂಲಕ ಕ್ರಮಿಸಲಿದ್ದಾರೆ.

ಟೂರ್ ಆಫ್ ನೀಲಗಿರೀಸ್ ಬಗ್ಗೆ ವಿವರ ನೀಡಿದ ಆರ್‍ಎಸಿ-ಎಫ್‍ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್, “ಸೈಕ್ಲಿಂಗ್ ಅತ್ಯಂತ ಆರೋಗ್ಯದಾಯಕ, ಆರಾಮದಾಯಕ ಹಾಗೂ ಜೀವನಶೈಲಿ ಚಟುವಟಿಕೆಯಾಗಿದ್ದು, ಹಲವು ಮಂದಿಯ ಯೋಚನೆಗಳನ್ನು ಸೆಳೆದಿದೆ. ಈ ಸೈಕ್ಲಿಂಗ್ ಆಸಕ್ತರ ಸಮೂಹ ಅಗಾಧವಾಗಿ ಬೆಳೆಯುತ್ತಿದೆ. ಈ ಸೈಕ್ಲಿಂಗ್‍ನ ರೋಚಕ ಅನುಭವದ ಜತೆ, ನೀಲಗಿರೀಸ್‍ನ ಜೈವಿಕ ವಲಯವು ಪ್ರಖ್ಯಾತವಾದ ವನ್ಯಧಾಮಗಳನ್ನು ಮತ್ತು ನೀಲಗಿರಿ ಜಿಲ್ಲೆಯ ಅಪೂರ್ವ ಹಳ್ಳಿಗಳ ದರ್ಶನ ಮಾಡಿಸಲಿದೆ. ಒಂದೇ ಕೂಟದಲ್ಲಿ ಈ ಎಲ್ಲ ವಿಶೇಷಣಗಳನ್ನು ಟೂರ್ ಆಫ್ ನೀಲಗಿರೀಸ್ ಒಳಗೊಂಡಿದೆ” ಎಂದು ಹೇಳಿದರು.

ಟಿಎಫ್‍ಎನ್, ಹವ್ಯಾಸಿ ಸವಾರರಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಕೂಟವಾಗಿ ಮಾರ್ಪಟ್ಟಿರುವುದು ಮಾತ್ರವಲ್ಲದೇ, ಸೈಕ್ಲಿಂಗ್ ಉತ್ಸಾಹಿಗಳಿಗೆ ಸೈಕ್ಲಿಂಗ್ ಆಹ್ಲಾದದ ಜತೆಗೆ ಸಾಹಸದ ಅಂಶಗಳನ್ನೂ ಒಳಗೊಂಡಿದೆ. ಆರ್‍ಎಸಿ-ಎಫ್ ಪೋಷಿತ ಪ್ರತಿಭೆಗಳಾದ ಕಿರಣ್ ಕುಮಾರ್ ರಾಜು ಅವರು ಪ್ರಸ್ತುತ ಭಾರತೀಯ ಎಂಟಿಬಿ ಚಾಂಪಿಯನ್ ಆಗಿದ್ದು, ಅವರು ಕೂಡಾ ಟಿಎಫ್‍ಎನ್ 2019ರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಟಿಎಫ್‍ಎನ್‍ನ ಇನ್ನೊಂದು ಪ್ರಮುಖ ಆಯಾಮವೆಂದರೆ, ಸವಾರರು ತಮ್ಮ ಸೈಕಲ್ ತುಳಿಯುವ ಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆ ನೀಡಲಿದ್ದು, ಟಿಎಫ್‍ಎನ್‍ನಲ್ಲಿ ದತ್ತಿ ಕಾರ್ಯಕ್ಕಾಗಿ ಸವಾರಿ ಮಾಡಲಿದ್ದಾರೆ. ಈ ವರ್ಷ ಚಾರಿಟಿ ಸವಾರರು, ಕೆನ್ನೆತ್ ಆ್ಯಂಡರ್‍ಸನ್, ನೇಚರ್ ಸೊಸೈಟಿ ಮತ್ತು ಸೀತಾ ಬತೇಜಾ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತಿತರ ಸಂಘ ಸಂಸ್ಥೆಗಳಿಗೆ ಸೇರಿದವರಾಗಿದ್ದು, ತಮ್ಮ ಆಯಾ ಸಾಮಾಜಿಕ ಕಾರಣಕ್ಕಾಗಿ ನೆರವು ನೀಡಲಿದ್ದಾರೆ.

Related Articles