Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
bfc
ಬೆಂಗಳೂರು ಎಫ್ ಸಿ ನನ್ನ ಕ್ರೀಡಾ ಬದುಕಿನ ಹೊಸ ಹೆಜ್ಜೆ: ಆಶಿಕ್
- By Sportsmail Desk
- . January 24, 2020
ಆಶಿಕ್ ಕುರುನಿಯನ್ ಎಫ್ ಸಿ ಪುಣೆ ಸಿಟಿ ತೊರೆದು ಬೆಂಗಳೂರು ಎಫ್ ಸಿ ಸೇರಿದ್ದು ಬಹಳಷ್ಟು ಅಚ್ಚರಿಯ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಹೊಸ ತಾರೆಯಾಗಿ ಮೂಡಿಬಂದ, ಸಾಕಷ್ಟು ಪ್ರತಿಭೆಯ ಆಶಿಕ್ ಚಾಂಪಿಯನ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಆಶಿಕ್ ಅವರ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ. ನೀವು ಭಾರತದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ಹೊಸ ತಾರೆ, ರಾಷ್ಟ್ರೀಯ ತಂಡದಲ್ಲಿದ್ದು ನಿಮಗೆ ಹೇಗನಿಸಿತು? ರಾಷ್ಟ್ರೀಯ ತಂಡದಲ್ಲಿ ನನ್ನ ಬದುಕು ಅದ್ಬುತವೆನಿಸಿತ್ತು. ದೇಶಕ್ಕಾಗಿ ಆಡುವುದು ನನಗೆ ಹಾಗೂ ನನ್ನ ಕುಟುಂಭಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಂದು ಪಂದ್ಯದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವುದರಿಂದ ನಾನು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆರಂಭಿಕ ಹನ್ನೊಂದು ಆಟಗಾರರಲ್ಲಿ ನಾನು ಸ್ಥಿರವಾಗಿರಬೇಕೆಂದು ಬಯಸುತ್ತಿದ್ದೆ. ನೀವು ಬೆಂಗಳೂರು ಎಫ್ ಸಿ ತಂಡವನ್ನು ಸೇರಿರುವ ಬಗ್ಗೆಯೂ ಸಾಕಷ್ಟು ಮಾತುಕತೆ ನಡೆಯುತ್ತಿದೆ …. ನಾನು ಬೆಂಗಳೂರು ಎಫ್ ಸಿ ತಂಡವನ್ನು ಸೇರಿಕೊಂಡಿದ್ದು ನನ್ನ ಬದುಕಿನ ತಿರುವು, ಏಕೆಂದರೆ ನಾನು ನಾಲ್ಕು ವರ್ಷಗಳಿಗಾಗಿ ಸಹಿ ಮಾಡಿದ್ದೇನೆ. ಈ ಕ್ಲಬ್ ನಲ್ಲಿ ಹೆಚ್ಚು ಕಾಲ ಇದ್ದರೆ ನನ್ನ ಕ್ರೀಡಾ ಬದುಕಿಗೆ ನೆರವಾಗಬಹುದು ಎಂದು ನಂಬಿರುವೆ. ನೀವು ಕ್ಲಬ್ ನ ಜತೆ ಹಾಗೂ ಆಟಗಾರರೊಂದಿಗೆ ಉತ್ತಮವಾದ ಅನುಬಂಧವನ್ನು ಹೊಂದಿರಬೇಕು. ಅತ್ಯಂತ ವೃತ್ತಿಪರತೆಯಿಂದ ಕೂಡಿರುವ ಬೆಂಗಳೂರು ಎಫ್ ಸಿ ಗಾಗಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ. ನೀವು ಈಗ ರದ್ದಾಗಿರುವ ಎಫ್ ಸಿ ಪುಣೆ ಸಿಟಿಯಲ್ಲಿ ಕೆಲವು ಕಾಲ ಕಳೆದಿದ್ದೀರಿ, ಬದಲಾವಣೆಗೆ ಯಾಕೆ ಮನಸ್ಸು ಮಾಡಿದಿರಿ? ನನ್ನ ಫುಟ್ಬಾಲ್ ಬದುಕಿನಲ್ಲಿ ಎಫ್ ಸಿ ಪುಣೆ ಸಿಟಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ. ಐದು ವರ್ಷಗಳ ಹಿಂದೆ ಚಿಕ್ಕ ಬಾಲಕನಿದ್ದಾಗ ಪುಣೆಗೆ ಆಗಮಿಸಿದೆ, ಎರಡು ವರ್ಷಗಳ ಕಾಲ ಪುಣೆ ಅಕಾಡೆಮಿಯಲ್ಲಿದ್ದೆ, ನಂತರ ಪುಣೆ ಸಿಟಿ ತಂಡವನ್ನು ಸೇರಿಕೊಂಡೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ ಪುಣೆ ಸಿಟಿ ತಂಡದ ಪರ ಆಡಿದೆ, ಅಲ್ಲಿಂದ ರಾಷ್ಟ್ರೀಯ ತಂಡವನ್ನು ಸೇರಿಕೊಂಡೆ, ಆದ್ದರಿಂದ ಪುಣೆ ಸಿಟಿ ತಂಡ ನನ್ನ ಕ್ರೀಡಾ ಬದುಕಿನ ಪ್ರಮುಖ ಭಾಗ. ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ನಡುವಿನ ಪ್ರತಿಸ್ಪರ್ಧಿತನ ನಿಮಗೆ ಹೇಗನಿಸುತ್ತದೆ?, ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸುವಾಗ ಹೇಗನಿಸಬಹುದು? ನನಗೆ ಕೇರಳ ಮನೆ. ಅವರಿಗಾಗಿ ಆಡಲು ನನಗೆ ಕಾಲಾವಕಾಶ ಸಿಗಬಹುದೇ? ಯಾರಾದರೂ ಹಾಗೆ ಮಾಡಬಹುದೇನೋ, ನನಗೆ ಗೊತ್ತಿಲ್ಲ, ಮುಂದಿನ ನಾಲ್ಕು ವರ್ಷಗಳ ಕಾಲ ಆಡಲು ನಾನು ಇಲ್ಲಿ ಇದ್ದೇನೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಇದು ಫುಟ್ಬಾಲ್ ಆಟದ ರೀತಿ, ಪರಿಸ್ಥಿತಿ ಹೀಗೆ ಬದಲಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಏನೂ ಆಗಬಹುದು. ಐಎಸ್ ಎಲ್ ನಲ್ಲಿ ಕೇರಳ ತಂಡವೊಂದು ಇರುವುದು ನನಗೆ ಹೆಮ್ಮೆಯ ಸಂಗತಿ. ಏಕೆಂದರೆ ಅದು ಮನೆಯಂಗಣದಲ್ಲಿ ಆಡುವ ಅವಕಾಶವನ್ನು ನೀಡಿದೆ. ಅವರಿಗೆ ಇರುವ ಬೆಂಬಲವನ್ನು ಗಮನಿಸಿದಾಗ ಅಲ್ಲೊಂದು ತಂಡ ಇರುವುದು ಪ್ರಮುಖ, ದೇಶದಲ್ಲಿ ಫುಟ್ಬಾಲ್ ಬೆಳೆಯುತ್ತದೆ, ಮತ್ತು ಆಟಗಾರರು ಆಡಲು ಹೆಚ್ಚು ಮನೋಬಲವನ್ನು ಹೊಂದುತ್ತಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳ ಪಡೆ ಮಂಜಪ್ಪಾಡ ಹಾಗೂ ಇಲ್ಲಿರುವ ನಮ್ಮ ಅಭಿಮಾನಿಗಳು ವೆಸ್ಟ್ ಬ್ಲಾಕ್ ಬ್ಲೂಸ್ ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇರುವ ಎರಡು ಗುಂಪುಗಳು, ಪಂದ್ಯದ ವೇಳೆ ಈ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಪ್ರೋತ್ಸಾಹದಿಂದ ಸಾಕಷ್ಟು ಬದಲಾವಣೆ ಆಗಬಹುದು. ದೇಶದಲ್ಲಿರುವ ಯುವ ಆಟಗಾರರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಾಗ ಹೇಗನಿಸುತ್ತದೆ? ಆ ರೀತಿಯಲ್ಲಿ ಯುವ ಆಟಗಾರರ ಬಗ್ಗೆ ಜನ ಉತ್ತಮ ರೀತಿಯಲ್ಲಿ ಮಾತನಾಡುತ್ತಿರುವುದರಿಂದ ಸಾಕಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆ. ಯುವ ಆಟಗಾರರು ಚೆಂಡಿನಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುತ್ತಿದ್ದಾರೆ, ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ರೀತಿಯ ಹೋರಾಟ ನೀಡುತ್ತಿದ್ದಾರೆ. ಬೆಂಗಳೂರು ಎಫ್ ತಂಡದಲ್ಲಿ ನಾನಿದನ್ನು ಕಾಣುತ್ತಿದ್ದೇನೆ, ನಮ್ಮ ಕಾಯ್ದಿರಿಸಿದ ಆಟಗಾರರು, ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ, ಭಾರತದಲ್ಲಿ ಅನೇಕ ಯುವ ಆಟಗಾರರು ಸಜ್ಜಾಗುತ್ತಿದ್ದಾರೆ. ಹಿರಿಯ ಆಟಗಾರರು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದಾಗ, ಕೋಚ್ ಗಳು ಸಲಹೆ ನೀಡಿದಾಗ ಯಾವ ರೀತಿಯಲ್ಲಿ ಸ್ಫೂರ್ತಿ ಸಿಗಬಹುವುದು ಎಂಬುದನ್ನು ಒಬ್ಬ ಯುವ ಆಟಗಾರನಾಗಿ ಅರ್ಥೈಸಿಕೊಳ್ಳಬಲ್ಲೆ.
ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರಿಗೆ ಜಯ
- By Sportsmail Desk
- . January 10, 2020
ಸ್ಪೋರ್ಟ್ಸ್ ಮೇಲ್ ವರದಿ: ಎರಿಕ್ ಪಾರ್ಥಲು (8ನೇ ನಿಮಿಷ) ಹಾಗೂ ನಾಯಕ ಸುನಿಲ್ ಛೆಟ್ರಿ (63ನೇ ನಿಮಿಷ) ಗಳಿಸಿದ ಗೋಲುಗಳು ಮತ್ತು ಗುರ್ಪ್ರೀತ್ ಸಿಂಗ್ ಸಂಧೂ ಅವರ ಅದ್ಭುತ ಗೋಲ್ ಕೀಪಿಂಗ್ ನೆರವಿನಿಂದ ಹಾಲಿ ಚಾಂಪಿಯನ್
ಲಾ ಲೀಗಾ ಫುಟ್ಬಾಲ್ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ
- By Sportsmail Desk
- . May 16, 2019
ಮುಂಬೈ: ಲಾ ಲೀಗಾ ಫುಟ್ಬಾಲ್ ಸ್ಕೂಲ್ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್ 5ರವರೆಗೆ ಪ್ರಥಮ ದರ್ಜೆ ಕ್ಲಬ್ ಆದ
ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು
- By Sportsmail Desk
- . March 12, 2019
ಸ್ಪೋರ್ಟ್ಸ್ ಮೇಲ್ ವರದಿ 72ನೇ ನಿಮಿಷದಲ್ಲಿ ಮಿಕು, 87ನೇ ನಿಮಿಷದಲ್ಲಿ ದಿಮಾಸ್ ಡೇಲ್ಗಾಡೋ ಹಾಗೂ 90ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ ಗಳಿಸಿದ ಗೋಲುಗಳ ನೆರವಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು 3-0 ( ಸರಾಸರಿ
ಬೆಂಗಳೂರಿಗೆ ಆಘಾತ ನೀಡಿದ ನಾರ್ತ್ ಈಸ್ಟ್ ಯುನೈಟೆಡ್
- By Sportsmail Desk
- . March 8, 2019
ಸ್ಪೋರ್ಟ್ಸ್ ಮೇಲ್ ವರದಿ ರೆದೀಮ್ ತಾಂಗ್ (20ನೇ ನಿಮಿಷ) ಹಾಗೂ ಜುವಾನ್ ಮಾಸ್ಕಿಯ (90ನೇ ನಿಮಿಷ ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್ ನ ಮೊದಲ ಹಂತದ
ಮೊದಲ ಸ್ಥಾನಕ್ಕೆ ಕೊನೆಯ ಹೋರಾಟ
- By Sportsmail Desk
- . February 21, 2019
ಸ್ಪೋರ್ಟ್ಸ್ ಮೇಲ್ ವರದಿ ಎಫ್ ಸಿ ಗೋವಾ ತಂಡ ಸದ್ಯ ಇಂಡಿಯನ್ ಸೂಪರ್ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿರಬಹುದು, ಆದರೆ ಈ ಅಗ್ರ ಸ್ಥಾನ ಎಷ್ಟು ಶಾಶ್ವತ ಎಂಬುದು ಗುರುವಾರ ಕಂಠೀರವ
ಚೆನ್ನೈ ಗೆ ಗೆದ್ದರೂ ಫಲವಿಲ್ಲ, ಬೆಂಗಳೂರಿಗೆ ಸೋತರೂ ನಷ್ಟವಿಲ್ಲ
- By Sportsmail Desk
- . February 10, 2019
ಚೆನ್ನೈ, ಫೆಬ್ರವರಿ 10 ಜೆಜೆ ಲಾಲ್‌ಪೆಲ್ಖುವಾ (32ನೇ ನಿಮಿಷ) ಹಾಗೂ ಗ್ರೆಗೋರಿ ನೆಲ್ಸ್ (43ನೇ ನಿಮಿಷ) ಅವರು ಪ್ರಥಮಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡವನ್ನು 2-1 ಅಂತರದಲ್ಲಿ ಮಣಿಸಿ ಇಂಡಿಯನ್
ಸುನಿಲ್ ಛೆಟ್ರಿ, ಗೌತಮ್ ಗಂಭೀರ್‌ಗೆ ಪದ್ಮಶ್ರೀ
- By Sportsmail Desk
- . January 26, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಸೇರಿದಂತೆ ಕ್ರೀಡಾ ಜಗತ್ತಿನ ಎಂಟು ಸಾಧಕರಿಗೆ ಪದ್ಮಶ್ರೀ ಹಾಗೂ ಮೌಂಟ್ ಎವರೆಸ್ಟ್ ಶಿಖರವನ್ನೇರಿದ
ಬೂಸ್ಟ್ ಬಿಎಫ್ಸಿ ಫುಟ್ಬಾಲ್ ಶೀಲ್ಡ್‌ಗೆ 80 ತಂಡಗಳು
- By Sportsmail Desk
- . January 13, 2019
ಸ್ಪೋರ್ಟ್ಸ್ ಮೇಲ್ ವರದಿ ಬೂಸ್ಟ್ ಬಿಎಫ್ಸಿ ಅಂತರ್ ಶಾಲಾ ಫುಟ್ಬಾಲ್ ಚಾಂಪಿಯನ್‌ಷಿಪ್ ಎರಡನೇ ಆವೃತ್ತಿ ಜನವರಿ 15 ರಿಂದ ಬೆಂಗಳೂರಿನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ ಎಂದು ಕ್ಲಬ್ ಪ್ರಕಟಿಸಿದೆ. ಕಳೆದ ವರ್ಷಕ್ಕಿಂತ ದೊಡ್ಡ ಪ್ರಮಾಣದಲ್ಲಿ
ದಾಖಲೆಯ ಗುರಿಯಲ್ಲಿ ಬೆಂಗಳೂರು, ಮುಂಬೈ
- By Sportsmail Desk
- . December 9, 2018
ಬೆಂಗಳೂರು, ಡಿಸೆಂಬರ್, 8 ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ ತಂಡ ಸೋಲರಿಯದ ಸರದಾರನಾಗಿ ದಾಖಲೆ ಬರೆಯಲು ಮುಂದಾಗಿದ್ದರೆ, ಮುಂಬೈ ಕೂಡ ಅದೇ ಗುರಿಯೊಂದಿಗೆ ಬೆಂಗಳೂರಿನಲ್ಲಿ ಸೆಣಸಲಿದೆ. ಫಟೋರ್ಡಾದಲ್ಲಿ ನಡೆದ