ಲಾ ಲೀಗಾ ಫುಟ್ಬಾಲ್‌ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ

0
356

ಮುಂಬೈ: ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌  ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್‌ 5ರವರೆಗೆ ಪ್ರಥಮ ದರ್ಜೆ ಕ್ಲಬ್‌ ಆದ ಸಿಡಿ ಲೆಗನೆಸ್ ಕ್ಲಬ್‌ನಲ್ಲಿ ಈ ನಾಲ್ವರು ಆಟಗಾರರು ತರಬೇತಿ ಪಡೆಯಲಿದ್ದಾರೆ.

2018/19ನೇ ಸಾಲಿನಲ್ಲಿ ಬೆಂಗಳೂರಿನಿಂದ ಇಶಾನ್‌ ಮುರಳಿ ಮತ್ತು ವಿದ್ವತ್‌ ಶೆಟ್ಟಿ ಹಾಗೂ ಮುಂಬೈನಿಂದ ರಿಯಾನ್‌ ಕಟೋಚ್‌ ಮತ್ತು ಆಸಿಕ್‌ ಶೈಖ್‌ ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಭಾರತದಲ್ಲಿರುವ ಸ್ಪೇನ್‌ ರಾಯಭಾರಿ ಸಹಯೋಗದಲ್ಲಿ ದೇಶದಲ್ಲಿರುವ ಪ್ರತಿಭಾವಂತ ಯುವ ಫುಟ್ಬಾಲ್‌ ಆಟಗಾರರನ್ನು ಪೋಷಿಸಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಈ ಬಾರಿಯು ಆಯ್ಕೆ ಮಾಡಲಾಗಿದೆ.
ಸ್ಕೌಟಿಂಗ್‌ ಪ್ರಕ್ರಿಯೆ ಮೂಲಕ ಒಟ್ಟು 32 ವಿದ್ಯಾರ್ಥಿಗಳನ್ನು ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌ಗೆ ಅಂತಿಮಗೊಳಿಸಲಾಗಿದೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸ್ಟೇನ್‌ನಲ್ಲಿ ಲಾ ಲೀಗಾ ಯಾವುದಾದರೂ ಒಂದು ಕ್ಲಬ್‌ನಲ್ಲಿ ತರಬೇತಿ ನೀಡಲಾಗುತ್ತದೆ.

“ಭಾರತದಿಂದ ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳು ಲಾ ಲಿಗಾ ಫುಟ್ಬಾಲ್ ಶಾಲೆಗಳಲ್ಲಿ ತಮ್ಮ ಸಮಯದ ಉದ್ದಕ್ಕೂ ಅನುಕರಣೀಯ ತಾಂತ್ರಿಕ ಕೌಶಲ್ಯಗಳನ್ನು ಮತ್ತು ಕ್ರೀಡಾ ಮೌಲ್ಯಗಳನ್ನು ಪ್ರದರ್ಶಿಸಿದರು. ಜಾಗತಿಕ ಫುಟ್ಬಾಲ್‌ನಲ್ಲಿ ಬಲಿಷ್ಠವಾಗಿ ಬೆಳೆಯಲು ಭಾರತವು ಪ್ರಬಲ ಸಾಮರ್ಥ್ಯ ಹೊಂದಿದೆಯೆಂದು ನಾವು ಬಲವಾಗಿ ನಂಬಿದ್ದೇವೆ ” ಎಂದು ಲಾ ಲಿಗಾ ಭಾರತದ ವ್ಯವಸ್ಥಾಪಕ ನಿರ್ದೇಶಕ ಜೋಸ್ ಆಂಟೋನಿಯೊ ಕಚಾಝಾ ಹೇಳಿದರು.