Sunday, September 8, 2024

ದಾಖಲೆಯ ಗುರಿಯಲ್ಲಿ ಬೆಂಗಳೂರು, ಮುಂಬೈ

ಬೆಂಗಳೂರು, ಡಿಸೆಂಬರ್,  8

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ ತಂಡ ಸೋಲರಿಯದ ಸರದಾರನಾಗಿ ದಾಖಲೆ ಬರೆಯಲು ಮುಂದಾಗಿದ್ದರೆ, ಮುಂಬೈ ಕೂಡ ಅದೇ ಗುರಿಯೊಂದಿಗೆ ಬೆಂಗಳೂರಿನಲ್ಲಿ ಸೆಣಸಲಿದೆ.

ಫಟೋರ್ಡಾದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ 0-5 ಅಂತರದಲ್ಲಿ ಸೋಲನುಭವಿಸಿದ ನಂತರ ನಿರಂತರ ಜಯದೊಂದಿಗೆ ಲೀಗ್ ನಲ್ಲಿ ಪ್ರಭುತ್ವ ಸಾಧಿಸಿತ್ತು.
ಸತತ ಆರು ಪಂದ್ಯಗಳಗಲಿ ಮುಂಬೈ ಸೋಲರಿಯದೆ ಸರದಾರನೆನಿಸಿತು. ಅದರಲ್ಲಿ ಐದು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಸಾಧನೆ ತಂಡವನ್ನು ಎರಡನೇ ಸ್ಥಾನಕ್ಕೆ ಕೊಂಡೊಯ್ದಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರಿಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರುವ ಗುರಿ ಮುಂಬೈ ತಂಡದ ಮುಂದಿದೆ.

ಆದರೆ ಬೆಂಗಳೂರು ವಿರುದ್ಧ ಜಯಗಳಿಸುವುದು ಅಷ್ಟು ಸುಲಭವಲ್ಲ. ಬೆಂಗಳೂರು ತಂಡ ಐಎಸ್ ಎಲ್ ನಲ್ಲಿ ಎಲ್ಲ ತಂಡಗಳ ವಿರುದ್ಧ ಆಡಿದರೆ. ಜತೆಯಲ್ಲೇ ಅಜೇಯ ಎಂಬುದನ್ನು ಸಾಬೀತುಪಡಿಸಿದೆ. ಇದು ಲೀಗ್ ನಲ್ಲೇ ಒಂದು ಅಪೂರ್ವ ಸಾಧನೆ.
“ಹಲವಾರು ಬಾರಿ ಎರಡನೆಯ ಸ್ಥಾನ ತಲುಪಿದ್ದ ತಂಡದ ವಿರುದ್ಧ ನಾವು ಆಡಬೇಕಿದೆ. ಇದು ನಮ್ಮ ಪಾಲಿಗೆ ಸವಾಲಿನ ಸಂಗತಿ. ಇತರ ತಂಡಗಳು ಕೂಡ ಇದನ್ನು ಸವಾಲು ಎಂದು ಸ್ವೀಕರಿಸಿರುವು ಸಂತಸದ ವಿಚಾರ. ನಾಳೆ ನಾವು ಉತ್ತಮ ಪಂದ್ಯವೊಂದರ ನಿರೀಕ್ಷೆಯಲ್ಲಿದ್ದೇವೆ “ಎಂದು ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.
ಮಿಕು ಅವರ ಅನುಪಸ್ಥಿತಿಯಲ್ಲಿ ಬೆಂಗಳೂರು ತಂಡ ಗೋಲು ಗಳಿಸಲು ಕಷ್ಟಪಟ್ಟಿತ್ತು. ಆದರೆ ಸುನಿಲ್ ಛೆಟ್ರಿ ಹಾಗೂ ಉದಾಂತ್ ಸಿಂಗ್ ಅವರು ಮಿಲಿ ಅವರ ಗೈರನ್ನು ತುಂಬಿದ್ದಾರೆ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಚೆಂಕೊ ಗೈಲ್ ಶೇನ್ ಅದ್ಭುತ ಗೋಲು ಗಳಿಸಿ ಸೋಲುತ್ತಿರುವ ತಂಡಕ್ಕೆ ಆಧಾರವಾಗಿದ್ದರು.
75 ನಿಮಿಷಗಳ ಆಟದ ನಂತರ ಬೆಂಗಳೂರು ತಂಡ ಇದುವರೆಗೂ ಒಟ್ಟು ಆರು ಗೋಲುಗಳನ್ನು ಗಳಿಸಿದೆ. ಇದು ತಂಡದ ಅಟ್ಯಾಕ್ ವಿಭಾಗದ ಸಾಮರ್ಥ್ಯವನ್ನು ತಿಳಿಸುತ್ತದೆ. ಡೆಲ್ಲಿ ಡೈನಮೋಸ್ ಹಾಗೂ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ಇದೇ ರೀತಿಯ ಸಾಮರ್ಥ್ಯವನ್ನು ತೋರಿತ್ತು. ಜಾರ್ಜ್ ಕೋಸ್ಟಾ ಪಡೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.  ಅಂತಿಮ ಕ್ಷಣದ ವರೆಗೂ ಪಂದ್ಯದ ಮೇಲೆ ನಿಗಾವಹಿಸಬೇಕಾಗುತ್ತದೆ.

“ನಾಳೆ ಏನು ಮಾಡಬೇಕೆಂಬುದೇ ಬಗ್ಗೆ ಅರಿವಿದೆ. ಬೆಂಗಳೂರು ತಂಡದಲ್ಲಿ ನನಗೆ ಯಾವುದೇ ನ್ಯೂನ್ಯತೆ ಕಂಡು ಬಂದಿಲ್ಲ.ತಂಡವಾಗಿ ಹಾಗೂ ವೈಯಕ್ತಿಕವಾಗಿ ಅದೊಂದು ಉತ್ತಮ ಪಡೆ. ಇದೆಲ್ಲದರ ಜತೆಯಲ್ಲೇ ನಾಳೆ ನಾನು ಮೂರು ಅಂಕಗಳೊಂದಿಗೆ ಮನೆಗೆ ಹಿಂದಿರುಗುತ್ತೇನೆ. “ಎಂದು ಮುಂಬೈ ಸಿಟಿ ತಂಡದ ಕೋಚ್ ಜಾರ್ಜ್  ಕೋಸ್ಟಾ ಹೇಳಿದ್ದಾರೆ.
ಜಾಯ್ನರ್ ಲೌರೆಂಕೊ ಮುಂಬೈ ಸಿಟಿ ತಂಡದ ಯಶಸ್ಸಿನ ಬೆನ್ನೆಲುಬು. ಅವರು ಕ್ಲಬ್ ಸೇರಿದಾಗಿನಿಂದ ಮುಂಬೈ ತಂಡ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಜಯ ಗಳಿಸಿದೆ.

Related Articles