ಬೂಸ್ಟ್ ಬಿಎಫ್ಸಿ ಫುಟ್ಬಾಲ್ ಶೀಲ್ಡ್‌ಗೆ 80 ತಂಡಗಳು

0
180
ಸ್ಪೋರ್ಟ್ಸ್ ಮೇಲ್ ವರದಿ

ಬೂಸ್ಟ್ ಬಿಎಫ್ಸಿ ಅಂತರ್ ಶಾಲಾ ಫುಟ್ಬಾಲ್ ಚಾಂಪಿಯನ್‌ಷಿಪ್ ಎರಡನೇ ಆವೃತ್ತಿ ಜನವರಿ 15 ರಿಂದ ಬೆಂಗಳೂರಿನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ ಎಂದು ಕ್ಲಬ್ ಪ್ರಕಟಿಸಿದೆ.

ಕಳೆದ ವರ್ಷಕ್ಕಿಂತ ದೊಡ್ಡ ಪ್ರಮಾಣದಲ್ಲಿ ಟೂರ್ನಿ ನಡೆಯಲಿದೆ. ಈ ಬಾರಿ ಬೆಂಗಳೂರು ನಗರದಾದ್ಯಂತ 80 ತಂಡಗಳು ಪಾಲ್ಗೊಳ್ಳಲಿವೆ. 1000ಕ್ಕೂ ಹೆಚ್ಚು ಮಕ್ಕಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 8, 10, 12 ಹಾಗೂ 14 ವರ್ಷ ವಯೋಮಿತಿಯಲ್ಲಿ ಟೂರ್ನಿ ನಡೆಯಲಿದೆ. ಮೊದಲ ಬಾರಿಗೆ 8, 10 ಮತ್ತು 12 ವರ್ಷ ವಯೋಮಿತಿಯ ಬಾಲಕಿಯರ ತಂಡ ಪಾಲ್ಗೊಳ್ಳುತ್ತಿದೆ.
ತಳಮಟ್ಟದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಬ್ಲೂಸ್ ಅಕಾಡೆಮಿಯ ಬಲವನ್ನು ಹೆಚ್ಚಿಸುವುದು  ಈ ಟೂರ್ನಿಯ ಉದ್ದೇಶವಾಗಿದೆ. ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಳ್ಳಾರಿಯಲ್ಲಿರುವ ಇನ್‌ಸ್ಟಿಟ್ಯೂಟ್ ಆ್ ಸ್ಪೋರ್ಟ್ಸ್‌ನಲ್ಲಿ ಉನ್ನತ ಪ್ರದರ್ಶನ ಶಿಬಿರದಲ್ಲಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗುವುದು. ಐಐಎಸ್ ಬೆಂಗಳೂರು ಎಫ್ಸಿಯ ರೆಸಿಡೆಂಟಲ್ ಅಕಾಡೆಮಿ ಕೂಡ ಆಗಿದೆ.  ಟೂರ್ನಿಯ ವಿಜೇತರಿಗೆ ಬೆಂಗಳೂರು ಎ್‌ಸಿ ುಟ್ಬಾಲ್ ಶಾಲೆಯಲ್ಲಿ ವಿದ್ಯಾರ್ಥಿ ವೇತನ ಸಿಗಲಿದೆ. ಬೆಂಗಳೂರು ಎಫ್ಸಿ ಬಿ ತಂಡದಲ್ಲಿ ಆಡುವ ಆವಕಾಶವನ್ನೂ ಪಡೆಯಲಿದ್ದಾರೆ. ಇದೇ ವೇಳೆ ಸ್ಥಿರ ಪ್ರದರ್ಶನ ತೋರಿದವರಿಗೆ ತಂಡದಲ್ಲಿ ಮುಂದುವರಿಯುವ ಅವಕಾಶ ಸಿಗಲಿದೆ.
ಡಿಪಿಎಸ್ ಈಸ್ಟ್ ಶಾಲೆಯ 13 ವರ್ಷದ ಗೌತಮ್ ರಾಜೇಶ್ ಸ್ಕೂಲ್ ಶೀಲ್ಡ್ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರಲ್ಲಿ ಒಬ್ಬರಾಗಿದ್ದಾರೆ. 2018ರ ಆವೃತ್ತಿಯಲ್ಲಿ ಬೆಳಕಿಗೆ ಬಂದ ಗೌತಮ್ ರಾಜೇಶ್ ಇದೀಗ ಕ್ಲಬ್‌ನ 13 ವರ್ಷದೊಳಗಿನವರ ತಂಡದಲ್ಲಿದ್ದಾರೆ. ಯುವ ಮಿಡ್‌ಫೀಲ್ಡರ್ 2018ರ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ 14 ವರ್ಷ ವಯೋಮಿತಿಯ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.