Tuesday, November 12, 2024

ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ

72ನೇ ನಿಮಿಷದಲ್ಲಿ ಮಿಕು, 87ನೇ ನಿಮಿಷದಲ್ಲಿ  ದಿಮಾಸ್ ಡೇಲ್ಗಾಡೋ ಹಾಗೂ 90ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ  ಗಳಿಸಿದ ಗೋಲುಗಳ ನೆರವಿನಿಂದ  ನಾರ್ತ್ ಈಸ್ಟ್ ಯುನೈಟೆಡ್  ತಂಡವನ್ನು 3-0 ( ಸರಾಸರಿ 4-2) ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ ಸತತ ಎರಡನೇ ಬಾರಿಗೆ ಹೀರೋ ಇಂಡಿಯನ್  ಸೂಪರ್ ಲೀಗ್ ನ ಫೈನಲ್ ಪ್ರವೇಶಿಸಿದೆ. ಪ್ರಥಮಾರ್ಧದಲ್ಲಿ ಮೂರು ಅವಕಾಶಗಳು ಕೈ ತಪ್ಪಿದರೂ ದ್ವಿತೀಯಾರ್ಧದಲ್ಲಿ ಮೂರು ಗೋಲು ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.

ಕೈ ಚೆಲ್ಲಿದ ಅವಕಾಶ
ಪ್ರಥಮಾರ್ಧದಲ್ಲಿ ಬೆಂಗಳೂರು ಗೋಲು ಗಳಿಸದಿರುವುದು ಅಚ್ಚರಿಯ ಸಂಗತಿ. ಮಿಕು ಸೇರಿದಂತೆ ಇತರ ಆಟಗಾರರು ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಲರಾಗಿರುವುದು ಬೆಂಗಳೂರಿನ ಪಾಲಿಗೆ ಆತಂಕವೇ ಎನ್ನಬಹುದು,. ಮಿಕು ಮಿಂಚದರಿವುದೇ ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ ಕಾಣುವಲ್ಲಿ ವಿಫಲವಾಯಿತು. ಮೊದಲ 45 ನಿಮಿಷಗಳ  ಆಟದಲ್ಲಿ ಮಿಕು ಅವರಿಗೆ ಹ್ಯಾಟ್ರಿಕ್ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಅದು ಹಾಗಾಗಲಿಲ್ಲ. ಜುವಾನ್ ಮಾಸ್ಕಿಯಾ ಅವರಿಗೆ  ಗೋಲು ಗಳಿಸುವ ಅವಕಾಶ ಮೊದಲು ಸಿಕ್ಕಿತ್ತು. ನೇರವಾಗಿ ಗೋಲ್‌ಕೀಪರ್ ಕೈಗೆ ತಲಪುವಂತೆ ಚೆಂಡನ್ನು ತುಳಿದ ಕಾರಣ ಆ ಅವಕಾಶ ಕೈ ಚೆಲ್ಲಿತು. ಆ ನಂತರ ಮಿಕು ಅವರಿಗೆ ಸತತ ಮೂರು ಬಾರಿ ಅವಕಾಶ ಸಿಕ್ಕಿತು. 23ನೇ ನಿಮಿಷದಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್‌ನಿಂದ ಹೊರಕ್ಕೆ ಚಿಮ್ಮಿತ್ತು. 25 ನಿಮಿಷದಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್‌ನ ಮೇಲಿಂದ ಸಾಗಿತ್ತು. 33ನೇ ನಿಮಿಷದಲ್ಲಿ ತುಳಿದ ಚೆಂಡು ಕೂಡ ಗೋಲ್‌ಕೀಪರ್ ಅವರ ಕೈ ಸೇರಿತ್ತು. ಬೆಂಗಳೂರಿಗೆ ಒಂದು ಗೋಲಿನ ಅಗತ್ಯವಿದೆ, ಆದರೆ ನಾರ್ತ್ ಈಸ್ಟ್ ಅದಕ್ಕೆ ವಿರೋಧ  ಒಡ್ಡುತ್ತಿದೆ.  ಕೇವಲ ಒಂದು ಗೋಲಾಗಿರುವ ಕಾರಣ ಹೇಗಾದರೂ ಗಳಿಸಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಬೆಂಗಳೂರು ತಂಡಕ್ಕೆ ಮುಳುವಾದರೆ ಅಚ್ಚರಿಪಡಬೇಕಾಗಿಲ್ಲ. ನಾರ್ತ್ ಈಸ್ಟ್ ಸಾಗಿ ಬಂದ ಹಾದಿ ಅಷ್ಟು ಸುಲಭವಾಗಿಲ್ಲ. ಆ ತಂಡ ಸುಲಭವಾಗಿ ಬೆಂಗಳೂರಿಗೆ ಗೋಲು ನೀಡುವ ಸ್ಥಿತಿಯಲ್ಲಿಲ್ಲ ಎಂಬುದು ಸ್ಪಷ್ಟ. ಗೋಲ್‌ಕೀಪರ್ ಪವನ್ ಕುಮಾರ್ ಬೆಂಗಳೂರು ತಂಡದ ಗೋಲಿಗೆ ಹಲವು ಬಾರಿ ಅಡ್ಡಿಯಾಗಿರುವುದು ಸ್ಪಷ್ಟ.
ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ನಾರ್ತ್ ಈಸ್ಟ್ ವಿರುದ್ಧ ಸೋತಿರುವ ಬೆಂಗಳೂರು ತಂಡಕ್ಕೆ ಇಲ್ಲಿ ಜಯ ಮಾತ್ರವಲ್ಲ, ಗೋಲಿನ ಮುನ್ನಡೆಯೊಂದಿಗೆ ಯಶಸ್ಸು ಕಾಣಬೇಕಾದ ಅಗತ್ಯವಿದೆ. ನಾರ್ತ್ ಈಸ್ಟ್ ಈಗಾಗಲೇ ಒಂದು ಗೋಲಿನ ಮುನ್ನಡೆ ಕಂಡಿದೆ. ಆದರೆ ಬೆಂಗಳೂರು ಮನೆಯಂಗಣದಲ್ಲಿ ಬಲಿಷ್ಠ ತಂಡವಾಗಿದೆ. ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವ ಸಾಮರ್ಥ್ಯ ಹೊಂದಿರುವ ತಂಡ. ಅದೇ ರೀತಿ ನಾರ್ತ್ ಈಸ್ಟ್ ಯುನೈಟೆಡ್ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವ ತಂಡವಲ್ಲ. ಮೊದಲ ಬಾರಿಗೆ ಪ್ಲೇ ಆಫ್  ಹಂತ ತಲುಪಿರುವ ನಾರ್ತ್ ಈಸ್ಟ್‌ಗೆ ಫೈನಲ್ ತಲಪುವ ಹಾದಿ ಸುಗಮವಾಗಿದೆ. ಬೆಂಗಳೂರು ತಂಡ ಒಂದು ಗೋಲು ಗಳಿಸಿದರೂ ಬೆಂಗಳೂರು ಫೈನಲ್‌ಗೆ ಲಗ್ಗೆ ಇಡಲಿದೆ. ನಾರ್ತ್ ಈಸ್ಟ್ ತಂಡ ಫೈನಲ್ ತಲುಪಲು ಬೇಕಾಗಿರುವ ವೇದಿಕೆ ನಿರ್ಮಿಸಿಕೊಏಡಿದೆ.

Related Articles