Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
bfc
ಬೆಂಗಳೂರು ಎಫ್‌ಸಿ ಡುರಾಂಡ್ ಕಪ್ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . September 18, 2022
ಕೋಲ್ಕೊತಾ, ಸೆಪ್ಟಂಬರ್ 18: ಮುಂಬೈ ಸಿಟಿ ಎಫ್‌ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ತಂಡ ಮೊದಲ ಬಾರಿಗೆ ಡುರಾಂಡ್ ಕಪ್ ಫುಟ್ಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇಲ್ಲಿನ ಸಾಲ್ಟ್ ಲೇಕ್
ಉಡುಗೊರೆ ಗೋಲು, ಡುರಾಂಡ್ ಕಪ್ ಫೈನಲ್‌ಗೆ ಬೆಂಗಳೂರು
- By ಸೋಮಶೇಖರ ಪಡುಕರೆ | Somashekar Padukare
- . September 15, 2022
ಕೋಲ್ಕೊತಾ, ಸೆಪ್ಟಂಬರ್ 15: ಉತ್ತಮ ಪೈಪೋಟಿಯಿಂದ ಕೂಡಿದ ಸೆಮಿಫೈನಲ್ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಆಟಗಾರ ಒಡೈ ಒನೈಂಡಿಯಾ (30ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ 1-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ
ಉಡುಪಿಯಲ್ಲಿ ಫುಟ್ಬಾಲ್‌ಗೆ ಜೀವ ತುಂಬಿದ ಕ್ಲೈವ್, ಮಿಲನ
- By ಸೋಮಶೇಖರ ಪಡುಕರೆ | Somashekar Padukare
- . July 6, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಫುಟ್ಬಾಲ್ ಕ್ರೀಡೆ ಅಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್‌ಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ
ಒಡಿಶಾ ದಾಳಿಗೆ ಬೆಂಗಳೂರು ಉಡೀಸ್
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail #ANewDawn ಎಂದೇ ಕರೆಯಿಸಿಕೊಂಡು, ಹೊಸ ಉತ್ಸಾಹದೊಂದಿಗೆ ಅಂಗಣಕ್ಕಿಳಿದ ಒಡಿಶಾ ಎಫ್‌ಸಿ ಬಲಿಷ್ಠ ಬೆಂಗಳೂರು ಎಫ್‌ಸಿಗೆ 3-1 ಗೋಲುಗಳ ಅಂತರದಲ್ಲಿ ಸೋಲುಣಿಸಿ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಿಬ್ಬೆರಗುಗೊಳಿಸುವ ಫಲಿತಾಂಶ ನೀಡಿದೆ. ಕಳೆದ ಋತುವಿನಲ್ಲಿ
ಅರಿದಾನೆ ಗಳಿಸಿದ ಗೋಲಿನಿಂದ ಹೈದರಾಬಾದ್ ಗೆ ಜಯ
- By Sportsmail Desk
- . November 24, 2020
ಗೋವಾ, ನವೆಂಬರ್, 24, 2020 ಅರಿದಾನೆ ಸ್ಯಾಂಟನಾ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಹೈದರಾಬಾದ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಒಡಿಶಾ ವಿರುದ್ಧ ತಾನು ಆಡಿದ ಮೊದಲ
ಬೆಂಗಳೂರು ಗೆಲ್ಲುವ ಫೇವರಿಟ್
- By Sportsmail Desk
- . November 22, 2020
ಗೋವಾ, ನವೆಂಬರ್, 22, 2020 ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಲೀಗ್ ಇತಿಹಾಸದಲ್ಲೇ ಸ್ಥಿರ ಪ್ರದರ್ಶನ ತೋರುತ್ತ ಬಂದಿರುವ ಎಫ್ ಸಿ ಗೋವಾ ಮತ್ತು ಬೆಂಗಳೂರು ಎಫ್
ಮುಂಬೈ ಸಿಟಿ ವಿರುದ್ಧ ನಾರ್ಥ್ ಈಸ್ಟ್ ದಿ ಬೆಸ್ಟ್
- By Sportsmail Desk
- . November 22, 2020
ಗೋವಾ, ನವೆಂಬರ್, 22, 2020 ಕ್ವಿಸಿ ಅಪ್ಪಿಯ್ಯ (49ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಪ್ರಭುತ್ವ ಸಾಧಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ
ಬೀದಿ ಬದಿಯಲ್ಲಿ ಬಟ್ಟೆ ಮಾರುವ ತಾಯಿ, ಪೋರ್ಚುಗಲ್ ಕ್ಲಬ್ ಪರ ಆಡುವ ಮಗ!
- By Sportsmail Desk
- . February 12, 2020
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ (
ಬೆಂಗಳೂರು ಎಫ್ ಸಿ ನನ್ನ ಕ್ರೀಡಾ ಬದುಕಿನ ಹೊಸ ಹೆಜ್ಜೆ: ಆಶಿಕ್
- By Sportsmail Desk
- . January 24, 2020
ಆಶಿಕ್ ಕುರುನಿಯನ್ ಎಫ್ ಸಿ ಪುಣೆ ಸಿಟಿ ತೊರೆದು ಬೆಂಗಳೂರು ಎಫ್ ಸಿ ಸೇರಿದ್ದು ಬಹಳಷ್ಟು ಅಚ್ಚರಿಯ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಹೊಸ ತಾರೆಯಾಗಿ ಮೂಡಿಬಂದ, ಸಾಕಷ್ಟು ಪ್ರತಿಭೆಯ ಆಶಿಕ್ ಚಾಂಪಿಯನ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಆಶಿಕ್ ಅವರ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ. ನೀವು ಭಾರತದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ಹೊಸ ತಾರೆ, ರಾಷ್ಟ್ರೀಯ ತಂಡದಲ್ಲಿದ್ದು ನಿಮಗೆ ಹೇಗನಿಸಿತು? ರಾಷ್ಟ್ರೀಯ ತಂಡದಲ್ಲಿ ನನ್ನ ಬದುಕು ಅದ್ಬುತವೆನಿಸಿತ್ತು. ದೇಶಕ್ಕಾಗಿ ಆಡುವುದು ನನಗೆ ಹಾಗೂ ನನ್ನ ಕುಟುಂಭಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಂದು ಪಂದ್ಯದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವುದರಿಂದ ನಾನು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆರಂಭಿಕ ಹನ್ನೊಂದು ಆಟಗಾರರಲ್ಲಿ ನಾನು ಸ್ಥಿರವಾಗಿರಬೇಕೆಂದು ಬಯಸುತ್ತಿದ್ದೆ. ನೀವು ಬೆಂಗಳೂರು ಎಫ್ ಸಿ ತಂಡವನ್ನು ಸೇರಿರುವ ಬಗ್ಗೆಯೂ ಸಾಕಷ್ಟು ಮಾತುಕತೆ ನಡೆಯುತ್ತಿದೆ …. ನಾನು ಬೆಂಗಳೂರು ಎಫ್ ಸಿ ತಂಡವನ್ನು ಸೇರಿಕೊಂಡಿದ್ದು ನನ್ನ ಬದುಕಿನ ತಿರುವು, ಏಕೆಂದರೆ ನಾನು ನಾಲ್ಕು ವರ್ಷಗಳಿಗಾಗಿ ಸಹಿ ಮಾಡಿದ್ದೇನೆ. ಈ ಕ್ಲಬ್ ನಲ್ಲಿ ಹೆಚ್ಚು ಕಾಲ ಇದ್ದರೆ ನನ್ನ ಕ್ರೀಡಾ ಬದುಕಿಗೆ ನೆರವಾಗಬಹುದು ಎಂದು ನಂಬಿರುವೆ. ನೀವು ಕ್ಲಬ್ ನ ಜತೆ ಹಾಗೂ ಆಟಗಾರರೊಂದಿಗೆ ಉತ್ತಮವಾದ ಅನುಬಂಧವನ್ನು ಹೊಂದಿರಬೇಕು. ಅತ್ಯಂತ ವೃತ್ತಿಪರತೆಯಿಂದ ಕೂಡಿರುವ ಬೆಂಗಳೂರು ಎಫ್ ಸಿ ಗಾಗಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ. ನೀವು ಈಗ ರದ್ದಾಗಿರುವ ಎಫ್ ಸಿ ಪುಣೆ ಸಿಟಿಯಲ್ಲಿ ಕೆಲವು ಕಾಲ ಕಳೆದಿದ್ದೀರಿ, ಬದಲಾವಣೆಗೆ ಯಾಕೆ ಮನಸ್ಸು ಮಾಡಿದಿರಿ? ನನ್ನ ಫುಟ್ಬಾಲ್ ಬದುಕಿನಲ್ಲಿ ಎಫ್ ಸಿ ಪುಣೆ ಸಿಟಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ. ಐದು ವರ್ಷಗಳ ಹಿಂದೆ ಚಿಕ್ಕ ಬಾಲಕನಿದ್ದಾಗ ಪುಣೆಗೆ ಆಗಮಿಸಿದೆ, ಎರಡು ವರ್ಷಗಳ ಕಾಲ ಪುಣೆ ಅಕಾಡೆಮಿಯಲ್ಲಿದ್ದೆ, ನಂತರ ಪುಣೆ ಸಿಟಿ ತಂಡವನ್ನು ಸೇರಿಕೊಂಡೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ ಪುಣೆ ಸಿಟಿ ತಂಡದ ಪರ ಆಡಿದೆ, ಅಲ್ಲಿಂದ ರಾಷ್ಟ್ರೀಯ ತಂಡವನ್ನು ಸೇರಿಕೊಂಡೆ, ಆದ್ದರಿಂದ ಪುಣೆ ಸಿಟಿ ತಂಡ ನನ್ನ ಕ್ರೀಡಾ ಬದುಕಿನ ಪ್ರಮುಖ ಭಾಗ. ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ನಡುವಿನ ಪ್ರತಿಸ್ಪರ್ಧಿತನ ನಿಮಗೆ ಹೇಗನಿಸುತ್ತದೆ?, ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸುವಾಗ ಹೇಗನಿಸಬಹುದು? ನನಗೆ ಕೇರಳ ಮನೆ. ಅವರಿಗಾಗಿ ಆಡಲು ನನಗೆ ಕಾಲಾವಕಾಶ ಸಿಗಬಹುದೇ? ಯಾರಾದರೂ ಹಾಗೆ ಮಾಡಬಹುದೇನೋ, ನನಗೆ ಗೊತ್ತಿಲ್ಲ, ಮುಂದಿನ ನಾಲ್ಕು ವರ್ಷಗಳ ಕಾಲ ಆಡಲು ನಾನು ಇಲ್ಲಿ ಇದ್ದೇನೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಇದು ಫುಟ್ಬಾಲ್ ಆಟದ ರೀತಿ, ಪರಿಸ್ಥಿತಿ ಹೀಗೆ ಬದಲಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಏನೂ ಆಗಬಹುದು. ಐಎಸ್ ಎಲ್ ನಲ್ಲಿ ಕೇರಳ ತಂಡವೊಂದು ಇರುವುದು ನನಗೆ ಹೆಮ್ಮೆಯ ಸಂಗತಿ. ಏಕೆಂದರೆ ಅದು ಮನೆಯಂಗಣದಲ್ಲಿ ಆಡುವ ಅವಕಾಶವನ್ನು ನೀಡಿದೆ. ಅವರಿಗೆ ಇರುವ ಬೆಂಬಲವನ್ನು ಗಮನಿಸಿದಾಗ ಅಲ್ಲೊಂದು ತಂಡ ಇರುವುದು ಪ್ರಮುಖ, ದೇಶದಲ್ಲಿ ಫುಟ್ಬಾಲ್ ಬೆಳೆಯುತ್ತದೆ, ಮತ್ತು ಆಟಗಾರರು ಆಡಲು ಹೆಚ್ಚು ಮನೋಬಲವನ್ನು ಹೊಂದುತ್ತಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳ ಪಡೆ ಮಂಜಪ್ಪಾಡ ಹಾಗೂ ಇಲ್ಲಿರುವ ನಮ್ಮ ಅಭಿಮಾನಿಗಳು ವೆಸ್ಟ್ ಬ್ಲಾಕ್ ಬ್ಲೂಸ್ ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇರುವ ಎರಡು ಗುಂಪುಗಳು, ಪಂದ್ಯದ ವೇಳೆ ಈ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಪ್ರೋತ್ಸಾಹದಿಂದ ಸಾಕಷ್ಟು ಬದಲಾವಣೆ ಆಗಬಹುದು. ದೇಶದಲ್ಲಿರುವ ಯುವ ಆಟಗಾರರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಾಗ ಹೇಗನಿಸುತ್ತದೆ? ಆ ರೀತಿಯಲ್ಲಿ ಯುವ ಆಟಗಾರರ ಬಗ್ಗೆ ಜನ ಉತ್ತಮ ರೀತಿಯಲ್ಲಿ ಮಾತನಾಡುತ್ತಿರುವುದರಿಂದ ಸಾಕಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆ. ಯುವ ಆಟಗಾರರು ಚೆಂಡಿನಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುತ್ತಿದ್ದಾರೆ, ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ರೀತಿಯ ಹೋರಾಟ ನೀಡುತ್ತಿದ್ದಾರೆ. ಬೆಂಗಳೂರು ಎಫ್ ತಂಡದಲ್ಲಿ ನಾನಿದನ್ನು ಕಾಣುತ್ತಿದ್ದೇನೆ, ನಮ್ಮ ಕಾಯ್ದಿರಿಸಿದ ಆಟಗಾರರು, ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ, ಭಾರತದಲ್ಲಿ ಅನೇಕ ಯುವ ಆಟಗಾರರು ಸಜ್ಜಾಗುತ್ತಿದ್ದಾರೆ. ಹಿರಿಯ ಆಟಗಾರರು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದಾಗ, ಕೋಚ್ ಗಳು ಸಲಹೆ ನೀಡಿದಾಗ ಯಾವ ರೀತಿಯಲ್ಲಿ ಸ್ಫೂರ್ತಿ ಸಿಗಬಹುವುದು ಎಂಬುದನ್ನು ಒಬ್ಬ ಯುವ ಆಟಗಾರನಾಗಿ ಅರ್ಥೈಸಿಕೊಳ್ಳಬಲ್ಲೆ.
ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರಿಗೆ ಜಯ
- By Sportsmail Desk
- . January 10, 2020
ಸ್ಪೋರ್ಟ್ಸ್ ಮೇಲ್ ವರದಿ: ಎರಿಕ್ ಪಾರ್ಥಲು (8ನೇ ನಿಮಿಷ) ಹಾಗೂ ನಾಯಕ ಸುನಿಲ್ ಛೆಟ್ರಿ (63ನೇ ನಿಮಿಷ) ಗಳಿಸಿದ ಗೋಲುಗಳು ಮತ್ತು ಗುರ್ಪ್ರೀತ್ ಸಿಂಗ್ ಸಂಧೂ ಅವರ ಅದ್ಭುತ ಗೋಲ್ ಕೀಪಿಂಗ್ ನೆರವಿನಿಂದ ಹಾಲಿ ಚಾಂಪಿಯನ್