Sunday, May 26, 2024

ಏಷ್ಯನ್‌ ಪ್ಯಾರಾ ಗೇಮ್ಸ್‌: ಭಾರತಕ್ಕೆ ಮೂರು ಚಿನ್ನ

ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ The 4th Asian Para Games Games Hangzhou Indian won 3 Gold ನಲ್ಲಿ ಸೋಮವಾರ ಭಾರತ ಮೂರು ಚಿನ್ನದ ಪದಕಗಳನ್ನು ಗೆದ್ದಿದೆ.

ಕ್ಲಬ್‌ ಥ್ರೋನಲ್ಲಿ ಭಾರತದ ಪ್ರಣವ್‌ ಸೂರ್ಮಾ ಚಿನ್ನದ ಪದಕವನ್ನು ಗೆದ್ದರು. 29 ವರ್ಷದ ಸೂರ್ಮಾ 30.01 ಮೀ ದೂರಕ್ಕೆ ಎಸೆದು ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಧರಂಭೀರ್‌ 28.76 ಮೀ. ದೂರಕ್ಕೆ ಎಸೆದು ಬೆಳ್ಳಿ ಯಾಗೂ ಅಮಿತ್‌ ಕುಮಾರ್‌ 26.93 ಮೀ. ದೂರಕ್ಕೆ ಎಸೆದು ಕಂಚಿನ ಪದಕ ಗೆದ್ದರು.

ಪುರುಷರ ಹೈಜಂಪ್‌ನಲ್ಲೂ ಭಾರತ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕ ತನ್ನದಾಗಿಸಿಕೊಂಡಿತು. T63 ವಿಭಾಗದಲ್ಲಿ ಭಾರತದ ಮೂವರು ಸ್ಪರ್ಧಿಗಳು ಮಾತ್ರ ಪಾಲ್ಗೊಂಡಿದ್ದು, ಏಷ್ಯನ್‌ ಪ್ಯಾರಾಲಿಂಪಿಕ್‌ ಸಮಿತಿಯ ನಿಯಮದಂತೆ ಪದಕಗಳನ್ನು ನೀಡಲಾಯಿತು.

ಶೈಲೇಶ್‌ ಕುಮಾರ್‌ 1.82 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರೆ, ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಮಾರಿಯಪ್ಪನ್‌ 1.80 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಗೆದ್ದರು.

ಪುರುಷರ ಟಿ47 ವಿಭಾಗದ ಹೈಜಂಪ್‌ನಲ್ಲಿ ಭಾರತದ ನಿಷಾದ್‌ ಕುಮಾರ್‌ 2.02ಮೀ ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರು. 10 ಚಿನ್ನದ ಪದಕಗಳನ್ನು ಗೆದ್ದಿರುವ ಭಾರತ ಪದಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ 3 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಗೆದ್ದಿದೆ.

Related Articles