Monday, June 24, 2024

ಏಷ್ಯನ್ ಪ್ಯಾರಾ ಗೇಮ್ಸ್‌: ಇತಿಹಾಸ ಬರೆದ ಭಾರತ

ಹೊಸದಿಲ್ಲಿ: ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ನಾಲ್ಕನೇ ದಿನದಲ್ಲಿ ಒಟ್ಟು 80 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕ್ರೀಡಾಪಟುಗಳು ಇತಿಹಾಸ ನಿರ್ಮಿಸಿದ್ದಾರೆ. Indian para-athletes created history on Thursday as they surpassed previous records to win 80 medals.

2018ರಲ್ಲಿ ಭಾರತ ತಂಡ 72 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆಯಾಗಿತ್ತು. ಕ್ರೀಡಾಕೂಟ ಮುಕ್ತಾಯಗೊಳ್ಳಲು ಇನ್ನೂ ಎರಡು ದಿನ ಬಾಕಿ ಉಳಿದಿದ್ದು ಭಾರತ 100 ಪದಕಗಳ ಗುರಿ ತಲುಪುವ ಸಾಧಧ್ಯತೆ ಇದೆ. ಭಾರತ 18 ಚಿನ್ನ, 23 ಬೆಳ್ಳಿ ಹಾಗೂ 39 ಕಂಚಿನ ಪದಕಗಳನ್ನು ಗೆದ್ದಿದೆ. ಆರ್ಚರಿ ಕಂಪೌಂಡ್‌ ಮಿಶ್ರ ವಿಭಾಗದಲ್ಲಿ ಎರಡೂ ಕೈಗಳಿಲ್ಲದ ಶೀತಲ್‌ ದೇವಿ ಕಾಲಿನಲ್ಲಿ ಗುರಿ ಇಟ್ಟು ರಾಕೇಶ್‌ ಕುಮಾರ್‌ ಅವರೊಂದಿಗೆ ಚಿನ್ನ ಗೆದ್ದಿರುವುದು ದಿನದ ವಿಶೇಷವಾಗಿತ್ತು. ಶಾಟ್‌ಪಟ್‌ನಲ್ಲಿ ಸಚಿನ್‌ ಸರ್ಜೆರಾವ್‌ ದಿನದ ಆರಂಭದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು. ಪ್ಯಾರಾ ಶೂಟರ್‌ ಸಿದ್ಧಾರ್ಥ ಬಾಬು ದಿನದ ಮತ್ತೊಂದು ಚಿನ್ನ ಗೆದ್ದರು. 247.7 ಅಂಕ ಗಳಿಸಿದ ಸಿದ್ಧಾರ್ಥ್‌ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ನೂತನ ದಾಖಲೆ ಬರೆದರು. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಸುಹಾಸ್‌ ಎಲ್‌ ವೈ ಅವರು ಬ್ಯಾಡ್ಮಿಂಟನ್‌ನಲ್ಲಿ ಫೈನಲ್‌ ತಲುಪಿದ್ದು ಭಾರತಕ್ಕೆ ಚಿನ್ನ ಅಥವಾ ಬೆಳ್ಳಿಪ ಪದಕವನ್ನು ಖಚಿತಪಡಿಸಿದ್ದಾರೆ.

Related Articles