Sunday, December 10, 2023

ಒಂದೇ ಎಸೆತಕ್ಕೆ ಮೂರು ದಾಖಲೆ ಮುರಿದ ಸುಮಿತ್‌!!!

ಹೊಸದಿಲ್ಲಿ: ಈಗಾಗಲೇ ವಿಶ್ವದಾಖಲೆಯನ್ನು ಹೊಂದಿರುವ ಭಾರತದದ ಪ್ಯಾರಾ ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ 4ನೇ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಒಂದೇ ಎಸೆತಕ್ಕೆ ಮೂರು ದಾಖಲೆಗಳನ್ನು ಬರೆದಿದ್ದಾರೆ. Sumit Antil creates world record in Asian Para Games

ಭಾರತದ ಇನ್ನೋರ್ವ ಸ್ಪರ್ಧಿ ಪುಷ್ಪೇಂದ್ರ ಸಿಂಗ್‌ ಕಂಚಿನ ಪದಕ ಗೆದ್ದಿದ್ದಾರೆ.

73.29 ಮೀ. ದೂರಕ್ಕೆ ಎಸೆದ ಒಲಿಂಪಿಕ್ಸ್‌ ಚಾಂಪಿಯನ್‌ ಸುಮಿತ್‌, ಏಷ್ಯನ್‌  ಪ್ಯಾರಾ ಗೇಮ್ಸ್‌ ದಾಖಲೆ, ವಿಶ್ವದಾಖಲೆ ಮತ್ತು ಏಷ್ಯನ್‌ ದಾಖಲೆ ಮುರಿದು ಹೊಸ ಇತಿಹಾಸ ಬರೆದರು.

ಕುಸ್ತಿ ಅಭ್ಯಾಸ ಮಾಡಿಕೊಂಡು ಮನೆಗೆ ಪ್ರಯಾಣಿಸುತ್ತಿದ್ದ ಸುಮಿತ್‌ ಅವರು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಆದರೆ ಆ ಮೂಲಕವೇ ಹೊಸ ಕ್ರೀಡಾ ಬದುಕಿಗೆ ಕಾಲಿಟ್ಟರು. ಈಗ ವಿಶ್ವದ ನಂಬರ್‌ ಒನ್‌ ಜಾವೆಲಿನ್‌ ಎಸೆತಗಾರರಾಗಿರುವ ಸುಮಿತ್‌ ಈಗಾಗಲೇ ವಿಶ್ವಚಾಂಪಿಯನ್‌ಷಿಪ್‌, ಒಲಿಂಪಿಕ್ಸ್‌ ಸೇರಿದಂತೆ ಪ್ರತಿಯೊಂದು ಕ್ರೀಡಾಕೂಟಗಳಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ.

ಸುಮಿತ್‌ ಅವರ ಈ ಸಾಧನೆಯೊಂದಿಗೆ ಭಾರತ 36 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 10 ಚಿನ್ನ, 12  ಬೆಳ್ಳಿ ಹಾಗೂ 14 ಕಂಚಿನ ಪದಕಗಳನ್ನು ಭಾರತ ಇದುವರೆಗೂ ಗೆದ್ದಿದೆ.

Related Articles