Friday, September 24, 2021

ಟಾರ್ಪೆಡೊಸ್ ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್

ಉಡುಪಿ: ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇವರು ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್ ಆಯೋಜಿಸಿದ್ದು ಟೂರ್ನಿಯು ಒಟ್ಟು 50,000 ರೂ.ಗಳ ನಗದು ಬಹುಮಾನದಿಂದ ಕೂಡಿರುತ್ತದೆ ಎಂದು ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 3-10-2021 ರಂದು ನಡೆಯಲಿರುವ ಈ ಟೂರ್ನಿಯು ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್...

ವಾಲಿಬಾಲ್ ಸಡಗರಕೆ ಪ್ರೈಮ್ ವಾಲಿಬಾಲ್ ಲೀಗ್

ಹೈದರಾಬಾದ್: ಪ್ರೈಮ್ ವಾಲಿಬಾಲ್ ಲೀಗ್ ಗೆ ಚಾಲನೆ ದೊರೆಯುವುದರೊಂದಿಗೆ ಎರಡು ವರ್ಷಗಳಿಂದ ಭಾರತದಲ್ಲಿ ಸ್ಥಗಿತಗೊಂಡಿದ್ದ ವಾಲಿಬಾಲ್ ಚಟುವಟಿಕೆಗೆ ಮತ್ತೆ ಚಾಲನೆ ದೊರೆಯಲಿದೆ. ಪ್ರೈಮ್ ವಾಲಿಬಾಲ್ ಲೀಗ್ ಸಾಂಪ್ರದಾಯಿಕ ವಾಲಿಬಾಲ್ ನಿಂದ ಫ್ರಾಂಚೈಸಿ ಆಧಾರಿತ ಲೀಗ್ ಆಗಿ ರೂಪುಗೊಂಡು ದೇಶದಲ್ಲಿ ಹೊಸ ವಾಲಿಬಾಲ್ ಕ್ರಾಂತಿಯನ್ನುಂಟುಮಾಡಲಿದೆ. ಎನ್.ಬಿಎ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಲೀಗ್ ನಲ್ಲಿ ಫ್ರಾಂಚೈಸಿ ಮಾಲೀಕರು ಕೂಡ ಲೀಗನ್ನು...

ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗೌತಮ್ ಶೆಟ್ಟಿ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಆಟಗಾರ, ಕ್ರೀಡಾ ಪ್ರೋತ್ಸಾಹಕ, ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಕುಂದಾಪುರ ಅವರು ಆಯ್ಕೆಯಾಗಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಆಯೋಜಿಸಿ ಕ್ರೀಡೆಗೆ ತನ್ನದೇ ಆದ ಪ್ರೋತ್ಸಾಹ ನೀಡುತ್ತಿರುವ ಗೌತಮ್ ಶೆಟ್ಟಿ ಅವರು ಹಿಂದೆ ಜಿಲ್ಲೆಯ ಪ್ರತಿಷ್ಠಿತ...

ಬಾಯಿಯಲ್ಲೇ ಟೇಬಲ್ ಟೆನಿಸ್ ಆಡುವ ಇಬ್ರಾಹಿಂ

ಟೋಕಿಯೋ: ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ಅಲ್ಲಿ ಯಾರು ಚಿನ್ನ ಗೆಲ್ತಾರೆ, ಯಾರು ಸೋಲ್ತಾರೆ ಎಂಬುದು ಮುಖ್ಯವಲ್ಲ. ಅಲ್ಲಿ ಎಲ್ಲರೂ ಬದುಕನ್ನೇ ಗೆದ್ದವರು. ಅದರ ಮುಂದೆ ಈ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳೆಲ್ಲ ಗೌಣ. ಟೋಕಿಯೋ ದಲ್ಲಿ ಮೊದಲ ದಿನ ನಡೆದದ್ದು ಟೇಬಲ್ ಟೆನಿಸ್ ಸ್ಪರ್ಧೆ. ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಇಡೀ ಜಗತ್ತಿನ ಹೃದಯ...

ಟೋಕಿಯೋ ಒಲಿಂಪಿಕ್ಸ್ ಹಾಕಿ-ಭಾರತಕ್ಕೆ ಕಂಚು

ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ ಸೋಲಿಸಿ ಕಂಚಿನ ಪದಕ ಪಡೆಯಿತು. 1980ರ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್​ನಲ್ಲಿ ಗಿಟ್ಟಿಸಿರುವ ಮೊದಲ...

ಡಾ. ಕುಮಾರನ್ ಸಂಪತ್; ಓಟವೇ ಇವರ ಸಂಪತ್ತು

ಸೋಮಶೇಖರ್ ಪಡುಕರೆ, ಬೆಂಗಳೂರು   If you want to run, run a mile. If you want to experience a different life, run a marathon. Emil Zatopek ಅಕ್ಟೋಬರ್ 10ರಂದು ಅಮೆರಿಕದ ಚಿಕಾಗೋದಲ್ಲಿ ನಡೆಯಲಿರುವ ಜಗತ್ತಿನ ಪ್ರಮುಖ ಮ್ಯಾರಥಾನ್ ಗಳಲ್ಲಿ ಒಂದಾದ ಚಿಕಾಗೋ ಮ್ಯಾರಥಾನ್ ಗೆ ಬೆಂಗಳೂರಿನ ಡಾ. ಕುಮಾರನ್ ಸಂಪತ್ ಆಯ್ಕೆಯಾಗಿದ್ದಾರೆ....

ಬಿಎಂಎಸ್ ತಾಂತ್ರಿಕ ವಿವಿಯಲ್ಲಿ ಕ್ರೀಡಾ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಬಿ.ಎಸ್. ನಾರಾಯಣ್ ಸ್ಮಾರಕ ಅಂತರಕಾಲೇಜು ಕ್ರೀಡಾಕೂಟವನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ  ಡಾ. ಎ. ಶ್ರೀನಿವಾಸನ್ ಅವರು 19 ಫೆಬ್ರವರಿ 2021 ರಂದು ಉದ್ಘಾಟಿಸಿದರು ಹಾಗೂ   ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು, ಡಾ. ಎಸ್. ಮುರಳೀಧರ, ಉಪಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಶಿವರಾಮ ರೆಡ್ಡಿ ಅವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು. ಕ್ರೀಡೆಗಳು: ಥ್ರೋಬಾಲ್ (ಮಹಿಳೆಯರು), ವಾಲಿಬಾಲ್ (ಪುರುಷರು), ಬ್ಯಾಡ್ಮಿಂಟನ್ (ಮಹಿಳೆಯರು), ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಕಡಿಮೆ) ಮತ್ತು ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಮೇಲ್ಪಟ್ಟವರು) ಈ ಪಂದ್ಯಾವಳಿಯಲ್ಲಿ ಸುಮಾರು 42 ತಂಡಗಳು ಭಾಗವಹಿಸಿದ್ದವು. .20 ಫೆಬ್ರವರಿ  2021  ರಂದು ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ  ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಜಿ.ಆರ್. ಶ್ರೀನಿವಾಸ, ಮಾಜಿ ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು ಮತ್ತು ಡಾ.ಎಂ.ಶಿವರಾಮ ರೆಡ್ಡಿ ಅವರು, ನಿರ್ದೇಶಕರು, ದೈಹಿಕ ಶಿಕ್ಷಣ  ವಿಭಾಗ ಉಪಸ್ಥಿತರಿದ್ದರು. ಕೀಡಾಕೂಟದ ಪಲಿತಾಂಶ ಕ್ರೀಡೆಗಳು:  ಥ್ರೋಬಾಲ್(ಮಹಿಳೆಯರು), ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸೇಂಟ್ ಜೋಸೆಫ್ ಕಾಲೇಜು ವಾಲಿಬಾಲ್(ಪುರುಷರು) ಪ್ರಥಮ :ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ದ್ವಿತೀಯ: ಏಟ್ರಿಯ ತಾಂತ್ರಿಕ ಮಹಾವಿದ್ಯಾಲಯ ಬ್ಯಾಡ್ಮಿಂಟನ್(ಮಹಿಳೆಯರು)  ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸಿಂಧಿ ಕಾಲೇಜು, ಹೆಬ್ಬಾಳ ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಕಡಿಮೆ) ಪ್ರಥಮ : ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯ ದ್ವಿತೀಯ: ಪಿ ಇ ಎಸ್ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಮೇಲ್ಪಟ್ಟವರು) ಪ್ರಥಮ  : ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಎ ತಂಡ ದ್ವಿತೀಯ: ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಬಿ ತಂಡ.

ರಿಶಿ ರೆಡ್ಡಿಗೆ ಚಾಂಪಿಯನ್ ಪಟ್ಟ

ಪಿಬಿಐ-ಸಿಎಸ್ಇ ಟೆನಿಸ್ ಅಕಾಡೆಮಿ, ಪಡುಕೋಣೆ –ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್  ಆಶ್ರಯದಲ್ಲಿ ನಡೆದ 1 ಲಕ್ಷ ರೂ. ಬಹುಮಾನ ಮೊತ್ತದ ಎಐಟಿಎ ಪುರುಷರ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ರಿಶಿ ರೆಡ್ಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಗುಜರಾತಿನ ಮಾಧ್ವಿನ್ ಕಾಮತ್ ವಿರುದ್ಧ 6-3, 6-2 ಅಂತರದಲ್ಲಿ ಗೆದ್ದ ರಿಶಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. “ಕಳೆದ...

ಕಿಕ್ ಬಾಕ್ಸಿಂಗ್ ಗೆ ಸಜ್ಜಾದ ಸಾಫ್ಟ್ ವೇರ್ ಎಂಜಿನಿಯರ್ ಹರಿಕೃಷ್ಣ

ಸ್ಪೋರ್ಟ್ಸ್ ಮೇಲ್ ವರದಿ ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕಾಲೇಜು ದಿನಗಳಿಂದ ಕ್ರೀಡೆಯನ್ನು ಉಸಿರಾಗಿಸಕೊಂಡವ. ಉತ್ತಮ ದೇಹದಾರ್ಢ್ಯ ಪಟುವಾಗಿರುವ ಹರಿಕೃಷ್ಣನ್ ಶ್ರೀರಾಮನ್ ಈಗ ಬೆಂಗಳೂರಿನಲ್ಲಿ ಎಲ್ಲರ ನೆಚ್ಚಿನ ಮುವಾಥಾಯ್ ಕಿಕ್ ಬಾಕ್ಸರ್. ಕಾಲೇಜು ಮುಗಿದ ನಂತರ ಈ ಬಾಡಿಬಿಲ್ಡಿಂಗ್ ಕೆಲಸಕ್ಕೆ ಬರೊಲ್ಲ ಎಂದು ಗೆಳೆಯರು ತಮಾಷೆ ಮಾಡುತ್ತಿದ್ದರು. ಆದರೆ ಕಾಲೇಜು...

ಕ್ರಿಸ್ತು ಜಯಂತಿ ಕಾಲೇಜು ಟೆಕ್ವಾಂಡೋ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಅಂತರಕಾಲೇಜು ಟೆಕ್ವಾಂಡೋ ಚಾಂಪಿಯನ್ಷಿಪ್ ನಲ್ಲಿ ಆತಿಥೇಯ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೆಬ್ರವರಿ 8ರಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ಚಾಂಪಿಯನ್ಷಿಪ್ ನಲ್ಲಿ 16 ಕಾಲೇಜುಗಳು ಪಾಲ್ಗೊಂಡಿದ್ದವು. 58, 68, 80 ಕೆಜಿಯೊಳಗಿನ ಮತ್ತು 80 ಕೆಜಿಗೆ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕ್ರಿಸ್ತು ಜಯಂತಿ...

MOST COMMENTED

ರಾಂಚಿಯಲ್ಲಿ ಭಾರತಕ್ಕೆ ಫಿಂಚ್ ಪಡೆಯಿಂದ ಸೋಲಿನ ಪಂಚ್

ಏಜೆನ್ಸೀಸ್ ರಾಂಚಿ ವಿರಾಟ್ ಕೊಹ್ಲಿ (123) ಅವರ ಶತಕದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  32 ರನ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಆದರೂ ಐದು ಪಂದ್ಯಗಳ ಸರಣಿಯಲ್ಲಿ ‘ಭಾರತ 2-1ರ...

HOT NEWS