Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Covid19

ಪಿಎಂ ಕೇರ್ ಗೆ ಕೊಡುಗೆ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗಾಗಿ ಪ್ರಧಾನ ಮಂತ್ರಿಯವರ ಪಿ.ಎಂ. ಕೇರ್ ನಿಧಿಗೆ ಎಂಆರ್ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕರ ವರ್ಗ 1,94,500 ರೂ. ಕೊಡುಗೆ ನೀಡಿದೆ. ಶಾಲೆಯ ಪ್ರಾಂಶುಪಾಲರು ಹಾಗೂ

Articles By Sportsmail

ಕೆಐಒಸಿ: ಫಿಟ್ನೆಸ್ ಜತೆ ಕ್ರಿಕೆಟಿಗೆ ಮರು ಜೀವ

ಸ್ಪೋರ್ಟ್ಸ್ ಮೇಲ್ ವರದಿ ಕೊರೊನಾದ ನಡುವೆಯೇ ಬದುಕು ನಡೆಸುವ ಅನಿವಾರ್ಯತೆ ಬಂದೊದಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಅನುಮತಿ ನೀಡಿದೆ. ಜುಲೈ 8ರಿಂದ ಪಂದ್ಯಗಳು ಆರಂಭಗೊಳ್ಳಲಿವೆ.

Special Story

ಅಣ್ಣನ ಬದಲಿಗೆ ಹುಡುಗರ ತಂಡದಲ್ಲಿ ಆಡಿ ಸರಣಿಶ್ರೇಷ್ಠಳೆನಿಸಿದ ಶಫಾಲಿ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಈ ಭೂಮಿಯ ಮೇಲೆ ಸಾಧಕಿಯೊಬ್ಬಳ ಜೀವನಗಾಥೆಯನ್ನು ಗಮನಿಸಿದಾ, ನೆನಪಾಗುವುದು ಜಿ.ಎಸ್. ಶಿವರುದ್ರಪ್ಪನರ ಕವಿತೆಯ ಸಾಲು…ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ…..ಈ ಬಾರಿ ಟಿ20 ವಿಶ್ವಕಪ್

Articles By Sportsmail

ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ

ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ  ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ  ಕರೆಯಲ್ಪಡುವ ಪ್ರತಿಷ್ಠಿತ ‘ಲಾರಿಯಸ್ ಪ್ರಶಸ್ತಿ’ಯ  20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.  ಭಾರತದ ಕ್ರಿಕೆಟ್ ದೇವರು ‘ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ’ ದ ಪ್ರಶಸ್ತಿಯನ್ನು ಪಡೆದರೆ, ‘ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’  ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ  ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು.   ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ  ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020  ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್  ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ  ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್‌, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ..  ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ  ‘ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು’  ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್  ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್  ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7  ವಿಶ್ವಾದಾಖಲೆಯನ್ನು  ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ.

Articles By Sportsmail

ಶಾರ್ಜಾದಲ್ಲಿ ಕನ್ನಡಿಗರ ತುಳುನಾಡು ಕ್ರಿಕೆಟ್ ಲೀಗ್ (ಟಿಸಿಎಲ್)

ಸ್ಪೋರ್ಟ್ಸ್ ಮೇಲ್ ವರದಿ ತಾಯ್ನಾಡಿನಲ್ಲಿರುವಾಗ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ ನಂತರವೂ ಅಲ್ಲಿಯೂ ತಮ್ಮದೇ ಆದ ತಂಡಗಳನ್ನು ನಿರ್ಮಿಸಕೊಂಡಿರುವ ಕನ್ನಡಿಗರು ಎರಡನೇ ವರ್ಷದ ತುಳುನಾಡು ಕ್ರಿಕೆಟ್ ಲೀಗ್

Special Story

ಅಥ್ಲೆಟಿಕ್ಸ್ ನಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡಿದ ಉಡುಪಿಯ ಜಾಹೀರ್ ಅಬ್ಬಾಸ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಕಳೆದ ಹತ್ತು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಉಡುಪಿ ಜಿಲ್ಲೆ ತನ್ನದೇ ಆದ ದಾಖಲೆಯನ್ನು ನಿರ್ಮಿಸುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ರಾಜ್ಯ ಮತ್ತು

Special Story

ಧಾರವಾಡದಲ್ಲಿ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ   ಸಾಂಪ್ರದಾಯಿಕ ಕ್ರೀಡೆ ಕುಸ್ತಿಯನ್ನು ಉಸಿರಾಗಿಸಿಕೊಂಡಿರುವ ಧಾರವಾಡದಲ್ಲಿ ಫೆಬ್ರವರಿ 22, 23, 24 ಮತ್ತು 25ರಂದು ಸುಮಾರು 2 ಕೋಟಿ ರೂ, ವೆಚ್ಚದಲ್ಲಿ 2ನೇ ಕರ್ನಾಟಕ ಕುಸ್ತಿ ಹಬ್ಬ ಯುವಸಬಲೀಕರಣ

Other sports

ಕ್ರಿಸ್ತು ಜಯಂತಿ ಕಾಲೇಜು ಟೆಕ್ವಾಂಡೋ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಅಂತರಕಾಲೇಜು ಟೆಕ್ವಾಂಡೋ ಚಾಂಪಿಯನ್ಷಿಪ್ ನಲ್ಲಿ ಆತಿಥೇಯ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೆಬ್ರವರಿ 8ರಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ಚಾಂಪಿಯನ್ಷಿಪ್ ನಲ್ಲಿ

Special Story

ಬೀದಿ ಬದಿಯಲ್ಲಿ ಬಟ್ಟೆ ಮಾರುವ ತಾಯಿ, ಪೋರ್ಚುಗಲ್ ಕ್ಲಬ್ ಪರ ಆಡುವ ಮಗ!

ಸೋಮಶೇಖರ್‌ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ (

Special Story

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್!

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್! ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ಅರು ವರ್ಷಗಳಿಂದ ವೃತ್ತಿಪರ ಮೊಯ್ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ತೊಡಗಿಕೊಂಡಿದ್ದ ವೃತ್ತಿಪರ ಕಿಕ್