ಸ್ಪೋರ್ಟ್ಸ್ ಮೇಲ್ ವರದಿ
ತಾಯ್ನಾಡಿನಲ್ಲಿರುವಾಗ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ ನಂತರವೂ ಅಲ್ಲಿಯೂ ತಮ್ಮದೇ ಆದ ತಂಡಗಳನ್ನು ನಿರ್ಮಿಸಕೊಂಡಿರುವ ಕನ್ನಡಿಗರು ಎರಡನೇ ವರ್ಷದ ತುಳುನಾಡು ಕ್ರಿಕೆಟ್ ಲೀಗ್ (ಟಿಸಿಎಲ್) ಆಯೋಜಿಸಿದ್ದಾರೆ, ಫೆಬ್ರವರಿ 21ರಂದು ಶಾರ್ಜಾದ ಸ್ಕೈಲೈನ್ ಯುನಿವರ್ಸಿಟಿ ಗ್ರೌಂಡ್ ನಲ್ಲಿ ಪಂದ್ಯಗಳು ಅಹರ್ನಿಶಿಯಲ್ಲಿ ನಡೆಯಲಿವೆ.
8 ತಂಡಗಳು, 120 ಆಟಗಾರರು ಪಾಲ್ಗೊಳ್ಳುತ್ತಿರುವ ಈ ಟೂರ್ನಿಯು 16 ಪಂದ್ಯಗಳಿಂದ ಕೂಡಿರುತ್ತದೆ. ಎಲಿಗೆಂಟ್ ಹೋಮ್ಸ್ ಟೂರ್ನಿಯ ಪ್ರಧಾನ ಪ್ರಾಯೋಜಕರಾಗಿರುತ್ತಾರೆ. ಈ ಬಾರಿ ಗ್ಲಾಡಿಯೇಟರ್ಸ್ ಕ್ರಿಕೆಟ್ ಕ್ಲಬ್ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.
ಸಂಘಟಕರು: ಅವಿನಾಶ್ ರಾವ್, ಮೊಹಮ್ಮದ್ ಜಿಯಾದ್, ಸರ್ಫರಾಜ್ ಮಲಿಕ್, ನವಾಲ್, ಖಾದರ್ ಹಾಗೂ ರಿಜ್ವಾನ್ ಕೋಡಿ.
ಸದಸ್ಯರು: ಸುನಿಲ್ ಶೆಟ್ಟಿ, ಮೊಹಮ್ಮದ್ ಅಲಿ, ಅನಿಲ್ ಡೊನಾಲ್ಡ್, ನಾಸಿರ್ ಉಚ್ಚಿಲ, ಶಖೀರ್ ಶೇಕ್, ಅಮೀಮ್ ಎಂ,ಎಚ್. ಗಂಗೊಳ್ಳಿ, ಅಮೀರ್ ಹಸನ್, ಆತೀಫ್ ಎಂ.ಎಚ್, ಗಂಗೊಳ್ಳಿ, ಅಫ್ನಾಬ್, ರೇನೊಲ್.
ಕೇವಲ ಕನ್ನಡಿಗರಿಂದಲೇ ಕೂಡಿರುವ ಈ ಕ್ರಿಕೆಟ್ ಲೀಗ್ ಶಾರ್ಜಾದಲ್ಲಿ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.
ತಂಡಗಳ ವಿವರ: ಎಂಟು ತಂಡಗಳನ್ನು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ. “ಎ” ಗುಂಪಿನಲ್ಲಿ ಟೀಮ್ ಎಲಿಗೆಂಟ್, ಆಟೋ ಡೀಲ್ ಮೂಡಬಿದ್ರಿ, ಮಾಸ್ಟರ್ಸ್ ಯುನೈಟೆಡ್ ಮತ್ತು ಸೊಲಾಸ್ ತಂಡಗಳು ಸೇರಿದ್ದರೆ, “ಬಿ” ಗುಂಪಿನಲ್ಲಿ ಎಸ್ಪಿ ಸ್ಟ್ರೈಕರ್ಸ್ ಬೆಳಪು, ಅಲ್ ಸಿತಾರ ಕಾರ್ಕಳ, ವೆಬ್ ಗ್ಲಾಡಿಯೇಟರ್ಸ್ ಮತ್ತು ಕುಡ್ಲ ಫ್ರೆಂಡ್ಸ್ ತಂಡಗಳು ಸೇರಿವೆ.