Saturday, October 12, 2024

ಕ್ರಿಸ್ತು ಜಯಂತಿ ಕಾಲೇಜು ಟೆಕ್ವಾಂಡೋ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಅಂತರಕಾಲೇಜು ಟೆಕ್ವಾಂಡೋ ಚಾಂಪಿಯನ್ಷಿಪ್ ನಲ್ಲಿ ಆತಿಥೇಯ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೆಬ್ರವರಿ 8ರಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ಚಾಂಪಿಯನ್ಷಿಪ್ ನಲ್ಲಿ 16 ಕಾಲೇಜುಗಳು ಪಾಲ್ಗೊಂಡಿದ್ದವು.

58, 68, 80 ಕೆಜಿಯೊಳಗಿನ ಮತ್ತು 80 ಕೆಜಿಗೆ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕ್ರಿಸ್ತು ಜಯಂತಿ ಕಾಲೇಜು ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಶಿಬ್ಲಾ ಗುಟ್ಟಾದ ಸರಕಾರಿ ಪ್ರಥಮದರ್ಜೆ ಕಾನೇಜು ವಿರುದ್ಧ 38 ಅಂಕಗಳ ಅಂತರದಲ್ಲಿ ಜಯ ಗಳಿಸಿದ ಕ್ರಿಸ್ತು ಜಯಂತಿ ಕಾಲೇಜು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಚಾಂಪಿಯನ್ ಎನಿಸಿತು. 10 ಅಂಕಗಳನ್ನು ಗಳಿಸಿದ ಶಿಬ್ಲ ಗುಟ್ಟಾ ಕಾಲೇಜು ರನ್ನರ್ ಅಪ್ ಎನಿಸಿತು.

ವಿಜೇತ ತಂಡವು ಮುಂದಿನ ತಿಂಗಳು ಪಂಜಾಬ್ ವಿಶ್ವವಿದ್ಯಾನಿಲಯದ ಆಶ್ರದಲ್ಲಿ ನಡೆಯಲಿರುವ ಅಂತರ್ ವಿಶ್ವವಿದ್ಯಾನಿಲಯ ಚಾಂಪಿಯನ್ಷಿಪ್ ನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕ್ರಿಸ್ತು ಜಯಂತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಅರೋಕಿಯಾ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

Related Articles