Wednesday, November 13, 2024

ಕ್ರೀಡಾ ಕ್ಷೇರ್ತದ “ಮಿರಾಕಲ್‌ ಮ್ಯಾನ್‌” ಆಶೀಶ್‌ ಕುಶ್‌ವಹಾ!

ಅಥ್ಲೆಟಿಕ್ಸ್‌, ಕ್ರಿಕೆಟ್‌, ಫುಟ್ಬಾಲ್‌ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ ಪಡೆದು ಖ್ಯಾತ ಕ್ರೀಡಾಪಟುಗಳು ಚೇತರಿಸಿಕೊಳ್ಳುವಂತೆ ಮಾಡಿ ಭಾರತದ ಕ್ರೀಡಾ ಕ್ಷೇತ್ರದ “ಮಿರಾಕಲ್‌ ಮ್ಯಾನ್‌” ಎಂದೇ ಜನಪ್ರಿಯಗೊಂಡಿರುವ, ಮಾಜಿ ಅಥ್ಲೀಟ್‌ ಬೆಂಗಳೂರಿನ ಆಶೀಶ್‌ ಕುಶ್‌ವಹಾ ಗಾಯಗೊಂಡ ಕ್ರೀಡಾಪಟುಗಳ ಪಾಲಿಗೆ ವರದಾನ ಎನಿಸಿದ್ದಾರೆ. Healing Touch, Magic Hands, Miracle Man Ashish Kusswaha.

ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ, ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡ, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡ ಹೀಗೆ ದೇಶದ ಪ್ರಮುಖ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಆಶೀಶ್‌ ಈಗ ಬೆಂಗಳೂರಿನಲ್ಲಿ Holistic Way Pvt. Ltd ಸಂಸ್ಥೆಯನ್ನು ಸ್ಥಾಪಿಸಿ, International Medical & Sports Massage Therapy Clinic (IMSMTC) ಮತ್ತು ವೆಲ್‌ನೆಸ್‌ ಸ್ಪೋರ್ಟ್ಸ್‌ ಇಂಕ್‌ www.wellnesssportsinc.com ಮೂಲಕ ಕ್ರೀಡಾಪಟುಗಳಿಗೆ ಮಾತ್ರವಲ್ಲ ಜನ ಸಾಮಾನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ.

ಕ್ರೀಡಾಪಟುಗಳು ಗಾಯಗೊಂಡು ಹೆಚ್ಚು ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದರೆ ಅವರ ಕ್ರೀಡಾಪದುಕಿನ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಅವರು ಬೇಗನೇ ಚೇತರಿಸಿಕೊಳ್ಳುವ ತವಕದಲ್ಲಿರುತ್ತಾರೆ. ಅವರಿಗೆ ಸೂಕ್ತವಾದ ಕಸರತ್ತುಗಳು, ಮಸಾಜ್‌ಗಳ ಅಗತ್ಯವಿರುತ್ತದೆ. ಫಿಸಿಯೋಥರಪಿಸ್ಟ್‌ಗಳ ನೆರವು ಬೇಕಿರುತ್ತದೆ, ಈ ಕ್ಷೇತ್ರದಲ್ಲಿ ಆಶೀಶ್‌‌ ಅಂತಾರಾಷ್ಟ್ರೀ ಮಟ್ಟದಲ್ಲಿ ತರಬೇತಿ ಪಡೆದು ತಮ್ಮ ಸೇವೆಯನ್ನು ಕರ್ನಾಟಕದಲ್ಲಿ ನೀಡುತ್ತಿರುವುದು ವಿಶೇಷ, ಬೆಂಗಳೂರು ದೇಶದ ಕ್ರೀಡಾ ರಾಜಧಾನಿಯಾಗಿ ರೂಪುಗೊಳ್ಳುತ್ತಿದ್ದು, ಆಶೀಶ್‌ ಅವರ ಸೇವೆಗೆ ಮತ್ತಷ್ಟು ಬೇಡಿಕೆ ಬರಲಿದೆ.

ಹೀಲಿಂಗ್‌ ಟಚ್‌, ಮಿರಾಕಲ್‌ ಮ್ಯಾನ್‌ ಮತ್ತು ಮ್ಯಾಜಿಕ್‌ ಹ್ಯಾಂಡ್ಸ್‌:

ಆಶೀಶ್‌ ಅವರು 14 ವರ್ಷಗಳ ಕಾಲ ಚೀಫ್‌ ಸ್ಪೋರ್ಟ್ಸ್‌ ಥೆರಪಿಸ್ಟ್‌ ಆಗಿ ಕಾರ್ಯನಿವರ್ವಹಿಸಿದ ನಂತರ ತನ್ನದೇ ಆದ ಸಂಸ್ಥೆಯನ್ನು ಕಟ್ಟಿದ್ದಾರೆ. ಈಗ ಬೆಂಗಳೂರಿನಲ್ಲಿ ಗಾಯಗೊಂಡು ಕ್ರೀಡೆಗೆ ಮತ್ತೆ ಬರಲಾಗದೆ ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗಾಗಿಯೇ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಿದ್ದಾರೆ.

ಭಾರತೀಯ ಸೇನೆಯಲ್ಲಿ ಕಾರ್ಯನಿವರ್ವಹಿಸಿ ರೇಸ್‌ ವಾಕಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಆಶೀಶ್‌, ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು (SAI) ಹಾಗೂ ಪಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಶಾಲೆಯಲ್ಲಿ ಭಾರತೀಯ ಅಥ್ಲೆಟಿಕ್ಸ್‌ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಆರು ವರ್ಷಗಳ ಕಾಲ ಸ್ಪೋರ್ಟ್ಸ್‌ ಮಸಾಜ್‌ ಥೆರಪಿಸ್ಟ್‌ ಆಗಿ ಭಾರತದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳ ದೈಹಿಕ ಕ್ಷಮತೆಯನ್ನು ಕಾಪಾಡಿದ್ದಾರೆ.

2022ರಲ್ಲಿ ಭಾರತೀಯ ಪ್ಯಾರಾಲಂಪಿಕ್‌ ಕಮಿಟಿಯಲ್ಲಿ ಕಾರ್ಯನಿರ್ವಹಿಸಿ, ಅಮೆರಿಕದಲ್ಲಿ ನಡೆದ ಡೆಸರ್ಟ್‌‌ ಚಾಲೆಂಜ್‌ ಗೇಮ್ಸ್‌ನಲ್ಲಿ ಭಾರತ ತಂಡ 15 ಪದಕಗಳನ್ನು ಗೆಲ್ಲುವಲ್ಲಿ ಆಶೀಶ್‌ ಅವರ ಪಾತ್ರ ಪ್ರಮುಖವಾಗಿತ್ತು. 2019ರಲ್ಲಿ ಬೆಂಗಳೂರಿನಲ್ಲಿ ನಡೆದ ಏಷ್ಯನ್‌ ಏಜ್‌ ಗ್ರೂಪ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಆಶೀಶ್‌ ಸುಮಾರು 200 ಗಂಟೆಗಳ ಕಾಲ ಸ್ಪೋರ್ಟ್ಸ್‌ ಮಸಾಜ್‌ ಮಾಡಿದ್ದರು. ಭಾರತದ ತಂಡ ಐತಿಹಾಸಿಕ 52 ಪದಕಗಳನ್ನು ಗೆದ್ದಿತ್ತು. ಭಾರತದ ಪುರಾತನ ಮತ್ತು ಚೀನಾದ ಪುರಾತನ ಕ್ರಮಗಳ ಸಂಯೋಜನೆಯೇ ಆಶೀಶ್‌ ಅವರ ಯಶಸ್ಸಿನ ಮಂತ್ರ. ಇದರಿಂದ ಗಾಯಗೊಂಡ ಕ್ರೀಡಾಪಟುಗಳು ಬೇಗನೇ ಚೇತರಿಸಿಕೊಂಡು ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ಆಶೀಶ್‌ ಆ ತಂಡದ ಎಲ್ಲ ಆಟಗಾರರ ಪ್ರೀತಿಗೆ ಪಾತ್ರರಾಗಿದ್ದಾರೆ.

ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಸೈನಾ ನೆಹ್ವಾಲ್‌:

ಒಲಿಂಪಿಕ್ಸ್‌, ವಿಶ್ವಕಪ್‌, ಏಷ್ಯಾಡ್‌, ಕಾಮನ್‌ವೆಲ್ತ್‌ ಗೇಮ್ಸ್‌ ಮೊದಲಾದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅಥ್ಲೀಟ್‌ಗಳಿಗೆ ಆಶೀಶ್‌ ಅವರ ಹೀಲಿಂಗ್‌ ಟಚ್‌ ಅನುಭವ ಸಿಕ್ಕಿದೆ. ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ರಾಜ್ಯವರ್ಧನ ಸಿಂಗ್‌ ರಾಥೋಡ್‌, ಸೈನಾ ನೆಹ್ವಾಲ್‌, ಸರ್ದಾರ್‌ ಸಿಂಗ್‌, ತುಷಾರ್‌ ಖಾಂಡೇಕರ್‌ ಮೊದಲಾದ ಅಥ್ಲೀಟ್‌ಗಳಿಗೆ ಆಶೀಶ್‌ ಅವರ ಮ್ಯಾಜಿಕ್‌ ಹ್ಯಾಂಡ್ಸ್‌ ನೆರವು ಮಾಡಿದೆ. ಟೆನಿಸ್‌, ಬ್ಯಾಡ್ಮಿಂಟನ್‌, ಫುಟ್ಬಾಲ್‌, ಶೂಟಿಂಗ್‌, ಈಜು, ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳಿಗೂ ಆಶೀಶ್‌ ಅವರು ನೆರವಾಗಿದ್ದಾರೆ. ಬೆಂಗಳೂರಿನ ನಾಗರಬಾವಿ, ಶ್ರೀ ಕಂಠೀರವ ಕ್ರೀಡಾಂಗಣ ಮತ್ತು ಜೆಪಿ ನಗರಗಳಲ್ಲಿ ಆಶೀಶ್‌ ಮತ್ತು ಅವರ ತಂಡ ಕಾರ್ಯನಿರ್ವಹಿಸುತ್ತಿದೆ. ದೇಶದ ಸುಮಾರು 10000ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಆಶೀಶ್‌ ಅವರ ಮಿರ್ಯಾಕಲ್‌ ಹ್ಯಾಂಡ್‌ನ ಸ್ಪರ್ಷ ಸಿಕ್ಕಿದೆ.

ಏನೆಲ್ಲ ಚಿಕಿತ್ಸೆ ನೀಡಲಾಗುತ್ತದೆ?:

ಆಶೀಶ್‌ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಜಪಾನ್‌, ಚೀನಾ, ರಷ್ಯ ಹಾಗೂ ಮಲೇಷ್ಯಾ ದೇಶಗಳಲ್ಲಿ ಉತ್ತಮ ಗುಣಮಟ್ಟದ ಸಂಸ್ಥೆಗಳಲ್ಲಿ ತರಬೇತಿ ಪಡೆದ ದೇಶದ ಉತ್ತಮ ಸ್ಪೋರ್ಟ್ಸ್‌ ಮಸಾಜ್‌ ಹಾಗೂ ಆಕ್ಯುಪಂಚರ್‌ ಥೆರಪಿಸ್ಟ್‌ ಎನಿಸಿದ್ದಾರೆ. ಚಿರೋಪ್ರಾಕ್ಟಿಕ್‌ ಥೆರಪಿ, ಸ್ಪೋರ್ಟ್ಸ್‌ ಮಸಾಜ್‌ ಥೆರಪಿ, ಮ್ಯೋಫೆಸ್ಕಿಯಲ್‌ ರಿಲೀಸ್‌, ಟಂಗ್‌ ಆಕ್ಯೂಪಂಚರ್‌, ಹಲೋಗ್ರಾಫಿಕ್‌ ಗುವಾ ಶಾ ಥೆರಪಿ, ಕೊಚಿ ಶಿಹಾತ್ಸು ಮಸಾಜ್‌ ಮೆಥಡ್‌, ಸ್ಪೋರ್ಟ್‌ ಸಮಾಜ್‌, ಮೆಡಿಕಲ್‌ ಮಸಾಜ್‌, ಡೀಪ್‌ ಟಿಶ್ಯು ವರ್ಕ್‌, ಫೇಸಿಯಾ ಮಸಾಜ್‌, ಹಾಟ್‌ ಸ್ಟೋನ್‌ ಮಸಾಜ್‌, ಆಕ್ಯುಪಂಚರ್‌ ಥೆರಪಿ, ಕಪ್ಪಿಂಗ್‌ ಥೆರಪಿ, ರಿಫ್ಲೆಕ್ಸಾಲಜಿ, ಟ್ರಿಗರ್‌ ಪಾಯಿಂಟ್‌ ಥೆರಪಿ ಸೇರಿದಂತೆ ಹಲವು ವಿಧದ ಥೆರಪಿ ಹಾಗೂ ಮಸಾಜ್‌ಗಳು ಹಾಲಿಸ್ಟಿಕ್‌ ವೇ ನಲ್ಲಿ ಲಭ್ಯ.

ಆಶೀಶ್‌ ಮ್ಯಾಜಿಕ್‌ ಹ್ಯಾಂಡ್ಸ್‌ನಲ್ಲಿ ಮಿಂಚಿದವರು:

ಭಾರತೀಯ ಬ್ಯಾಡ್ಮಿಂಟನ್‌ ಆಟಗಾರರಾದ ಸೈನಾ ನೆಹ್ವಾಲ್‌, ಕೆನಡಾದ ಸಂಕೀರ್ತ್‌ ಬಿ.ಆರ್‌. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರರಾದ ಟಾಮಿ ಸುಗ್ರಿಯಾಟೊ, ಟಾನ್‌, ಕೂ, ಅಜಯ್‌ ಜಯರಾಮ್‌ ಮತ್ತು ಗ್ಯಾಬ್ರಿಯೆಲಾ. ಭಾರತದ ಈಜು ತಾರೆಗಳಾದ ಸಜ್ಜನ್‌ ಪ್ರಕಾಶ್‌, ಅರವಿಂದ್‌ ಮಣಿ, ಅವಿನಾಶ್‌ ಮಣಿ, ಶಿವ ಶ್ರೀಧರ್‌, ಕ್ಷಿತಿಜಾ ಕೆ. ಅಗ್ನೀಶ್ವರ್‌.

ಭಾರತದ ಹಾಕಿ ಆಟಗಾರರಾದ ಆಕಾಶ್‌ ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಹರ್ಪಾಲ್‌ ಸಿಂಗ್‌, ತುಷಾರ್‌ ಖಾಂಡೇಕರ್‌, ಹರ್ಪಾಲ್ ಸಿಂಗ್.‌ ಕ್ರಿಕೆಟಿಗರಾ ಕೇದಾರ್‌ ಜಾದವ್‌, ಮುನಾಫ್‌ ಪಟೇಲ್‌ ಹಾಗೂ ಅಮಿತ್‌ ಮಿಶ್ರಾ. ಮುಂಬಯಿ ಮ್ಯಾರಥಾನ್‌ ಓಟಗಾರರಾದ ರಾಮ್‌ಸಿಂಗ್‌ ಯಾದವ್‌, ನಿತೇಂದರ್‌ ರಾವತ್‌, ಗೋಪಿ ಟಿ, ಕೇತಾ ರಾಮ್‌, ವನಿತೆಯ ವಿಭಾಗದಲ್ಲಿ ಲಲಿತ್‌ ಬಾಬರ್‌, ಒಪಿ ಜೈಸಾ ಹಾಗೂ ಸುಧಾ ಸಿಂಗ್.‌

ವಿಶ್ವ10K ಬೆಂಗಳೂರು ಮ್ಯಾರಥಾನ್‌ನಲ್ಲಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಪೌಲ್‌ ಕಿಪ್ಸೈಲ್‌ ಕೊಯಿಚ್‌, ಲೆನಾರ್ಡೋ ಪ್ಯಾಟ್ರಿಕ್‌ ಕಾಮನ್‌, ಎಲೆಕ್ಸ್‌ ಕೊರಿಯೊ, ಎಡ್ವಿನ್‌ ಕಿಪ್‌ಟು, ನವೀನ್‌ ಡಾಗರ್‌, ಮಂಜು ಗೌಡ. ಸುರೇಶ್‌ ಕುಮಾರ್‌ ಪಟೇಲ್‌, ಮಾನ್‌ಸಿಂಗ್‌, ಸಂಜೀವಿನಿ ಜಾದವ್‌, ಸ್ವಾತಿ ಗಢಾವೆ, ಕಿರಣ್‌ ಜೀತ್‌ ಕೌರ್‌. ಪ್ಯಾರಾ ಅಥ್ಲೀಟ್‌ಗಳಾದ ಎಚ್‌.ಎನ್‌, ಗಿರೀಶ್‌, ಮಾರಿಯಪ್ಪನ್‌, ಫರ್ಮಾನ್‌ ಬಾಷಾ, ಶವಾದ್‌ ಜೆ.ಎಂ, ಸಕೀನಾ ಕಾತುನ್‌, ಶರದ್‌ ಕುಮಾರ್‌, ಸುಂದರ್‌ ಸಿಂಗ್‌ ಗುಜಾರ್‌, ರಕ್ಷಿತಾ ರಾಜು, ರಾಧಾ ವೆಂಕಟೇಶ್‌ ಅವರಿಗೆ ಆಶೀಶ್‌ ಅವರ ಮ್ಯಾಜಿಕ್‌ ಹ್ಯಾಂಡ್‌ನ ಸ್ಪರ್ಷ ಸಿಕ್ಕಿದ್ದು, ಇವರಲ್ಲಿ ಹೆಚ್ಚಿನವರು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಾಗಿರುತ್ತಾರೆ.

ಹೆಚ್ಚಿನ ವಿವರಗಳಿಗೆ: www.wellnesssportsinc.com ಸಂಪರ್ಕಿಸಿ

Related Articles