Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸೇವ್‌ ವಾಟರ್‌ ಕಪ್‌: ಪೂರ್ಣ ವಿಕಾಸ್‌ ವಿದ್ಯಾಲಯ ಚಾಂಪಿಯನ್‌

ಬೆಂಗಳೂರು:  ಗೋಪಾಲನ್‌ ಸ್ಪೋರ್ಟ್ಸ್‌ ಸೆಂಟರ್‌ Gopalan Sports Center ಆಶ್ರಯದಲ್ಲಿ ನಡೆದ ಸೇವ್‌ ವಾಟರ್‌ ಕಪ್‌ 14 ವರ್ಷ ವಯೋಮಿತಿಯ ಕ್ರಿಕೆಟ್‌ ಟೂರ್ನಿಯ 8 ನೇ ಆವೃತ್ತಿಯನ್ನು ಪೂರ್ಣ ವಿಕಾಸ ವಿದ್ಯಾಲಯ ಗೆದ್ದುಕೊಂಡಿದೆ. Poorna Vikasa Vidyalaya won the 8th Edition of Save water Cup cricket Tournament.

ಫೈನಲ್‌ ಪಂದ್ಯದಲ್ಲಿ ಪೂರ್ಣ ವಿಕಾಸ ವಿದ್ಯಾಲಯ ಶಾಲಾ ತಂಡವು ಕವರ್‌ ಡ್ರೈವ್‌ ಅಕಾಡೆಮಿ ವಿರುದ್ಧ 8 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಕವರ್‌ ಡ್ರೈವ್‌ ಅಕಾಡೆಮಿ 18.2 ಓವರ್‌ಗಳಲ್ಲಿ 79 ರನ್ ಗಳಿಸಿ ಆಲೌಟ್‌ ಆಗಿತ್ತು. ಪೂರ್ಣ ವಿಕಾಸ ವಿದ್ಯಾಲಯ ತಂಡ 10.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿ 8 ವಿಕೆಟ್‌ ಅಂತರದಲ್ಲಿ ಜಯ ಗಳಿಸಿತು.

 ಪೂರ್ಣ ವಿಕಾಸ ವಿದ್ಯಾಲಯದ ತೇಜಸ್‌ ಭಟ್‌ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ತೇಜಸ್‌ ಭಟ್‌ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 3 ವಿಕೆಟ್‌‌ ಗಳಿಸಿ ಜಯದ ರೂವಾರಿ ಎನಿಸಿದರು. ಗೋಪಾಲನ್‌ ಗ್ರೂಪ್‌ನ ಡಾ. ಪ್ರಭಾಕರ್‌ ಸಿ [Dr. Prabhakar C., Director of Gopalan Group] ಅವರು ಟೂರ್ನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.


administrator