ಹೊಸದಿಲ್ಲಿ: ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ತಲಾ 3 ಲಕ್ಷ ರೂ. ನಗದು ಬಹುಮಾವನ್ನು ಪ್ರಕಟಿಸಿದೆ. Women’s Asian Hockey Champions Trophy winning Indian team player will get Rs 3 Lakh each by Hockey India.
ತಂಡದ ಸಹಾಯಕ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನೂ ಪ್ರಕಟಿಸಿದೆ. ಇದರ ಜೊತೆಯಲ್ಲಿ ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡ ಚಾಂಪಿಯನ್‌ಷಿಪ್‌ನ ಬಹುಮಾನವಾಗಿರುವ 10000 ಡಾಲರ್ ಮೊತ್ತವನ್ನೂ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನ ಗೆದ್ದಿರುವ ಚೀನಾ 7,000 ಡಾಲರ್ ಹಾಗೂ ಮೂರನೇ ಸ್ಥಾನಿಯಾದ ಜಪಾನ್ 5,000 ಅಮೆರಿಕನ್ ಡಾಲರ್ ಗೆದ್ದುಕೊಂಡಿತು. ಏಷ್ಯನ್ ಹಾಕಿ ಫೆಡರೇಷನ್ ಇದೇ ಮೊದಲ ಬಾರಿಗೆ ನಗದು ಬಹುಮಾನವನ್ನು ಘೋಷಿಸಿದೆ.
ಬಿಹಾರದ ರಾಜ್‌ಗೀರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ದೀಪಿಕಾ 31 ನೇ ನಿಮಿಷದಲ್ಲಿ ಗಳಿಸಿದ ಗೋಲು ಭಾರತಕ್ಕೆ ಐತಿಹಾಸಿಕ ಜಯವನ್ನು ತಂದುಕೊಟ್ಟಿತು.