ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕ ರಾಜ್ಯ ತಂಡಕ್ಕೆ ಸುನಿಲ್ ನಾಯಕ
ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ಪುರುಷರ ತಂಡದ ನಾಯಕತ್ವವನ್ನು ಅಂತಾರಾಷ್ಟ್ರೀಯ ಆಟಗಾರ, ಒಲಿಂಪಿಯನ್ ಎಸ್. ವಿ ಸುನಿಲ್ ಅವರು ವಹಿಸಲಿದ್ದಾರೆ. ವನಿತೆಯರ ತಂಡವನ್ನು ಸೌಮ್ಯಶ್ರೀ ಎನ್. ಆರ್. ಮುನ್ನಡೆಸಲಿದ್ದಾರೆ. Former Olympian S V Sunil will lead Karnataka hockey team in the 38th National Games Haridwar Uttarakhand
ಕರ್ನಾಟಕ ಪುರುಷರ ತಂಡ ಎ ಗುಂಪಿನಲ್ಲಿದ್ದು, ಒಡಿಶಾ, ಮಣಿಪುರ, ಪಂಜಾಬ್ ಹಾಗೂ ಮಧ್ಯಪ್ರದೇಶದ ವಿರುದ್ಧ ಸೆಣಲಿಸಿದೆ. ವನಿತೆಯರ ತಂಡವೂ ಎ ಗುಂಪಿನಲ್ಲಿದ್ದು, ಹರಿಯಾಣ, ಮಧ್ಯಪ್ರದೇಶ, ಪಶ್ಚಿಮಬಂಗಾಳ ಹಾಗೂ ಒಡಿಶಾ ತಂಡಗಳ ವಿರುದ್ಧ ಸೆಣಸಲಿದೆ.
ಪುರುಷರ ತಂಡದ ವಿವರ: ಎಸ್. ವಿ ಸುನಿಲ್ (ನಾಯಕ), ಪ್ರಣಾಮ್ ಗೌಡ ವೈ ಎಂ, ಸೋಮಯ್ಯ ಕೆ.ಪಿ, ಆಭರಣ್ ಸುದೇವ್ ಬಿ, ಮಾಜ್ಜಿ ಗಣೇಶ್, ಎ.ಎಚ್. ದೀಕ್ಷಿತ್, ಪ್ರಥ್ವಿರಾಜ್ ಜಿ ಎನ್, ಮೋಹಿತ್ ಎಚ್‌ಎಸ್, ಭರತ್ ಎಂ. ಕುರ್ತುಕೋಟಿ, ಶೇಶೇ ಗೌಡ ಬಿ ಎಂ, ಮೊಹಮ್ಮದ್ ರಾಹೀಲ್ ಮೌಸೀನ್, ಚೆಲ್ಸೀ ಮೇದಪ್ಪ ಬಿ ಎನ್, ಶಾನ್ ಮೊನ್ನಪ್ಪ ಎಂ ಎ, ಚೇತನ್ ಎಂ. ಕರಿಸಿರಿ, ಲಿಖಿತ್ ಬಿ ಎಂ, ಯತೀಶ್ ಕುಮಾರ್ ಬಿ, ಸುನಿಲ್ ಪಿ ಬಿ, ಸಮರ್ಥ್ ಸಿ ಎಸ್,
ಕೋಚ್: ವಿನಯ ವಿ ಎಸ್, ಕೋಚ್: ಸೋಮಣ್ಣ ಕೆ ಎಂ, ಸ್ಟ್ರೆಂಥ್ & ಕಂಡೀಷನಿಂಗ್ ಕೋಚ್: ಬಸವರಾಜ್ ರಾಯಪ್ಪ,ಮ್ಯಾನೇಜರ್; ಗಣಪತಿಕೆಎಸ್
ಮಹಿಳಾ ತಂಡದ ವಿವರ: ಸೌಂಯಶ್ರೀ ಎನ್ ಆರ್ (ನಾಯಕಿ), ವಿದ್ಯಾಶ್ರೀ ವಿ, ಅದಿರಾ ಎಸ್, ನಿಶಾ ಪಿ ಸಿ. ತಾಜ್ ಬೆಳ್ಳಿಯಪ್ಪ ಕೆ, ಯಶಿಕಾ ಎಂ.ಜಿ, ಅಂಜಲಿ ಎಚ್.ಆರ್, ಕಾವ್ಯಶ್ರೀ ಎಂ.ಡಿ, ದೀಪ್ತಿ ಕೆ ಎ, ದೇಚಮ್ಮ ಪಿ.ಜಿ, ದೀಪಾ ಶರ್ಮಾ, ಚಂದನ ಜೆ. ಪೂಜಾ ಎಂ. ಡಿ, ರಕ್ಷಿತಾ ಜೆ, ಶೈನಾ ತಂಗಮ್ಮ ಎಂ.ಪಿ, ಯಮುನ ಎಸ್.
ಕೋಚ್: ವರ್ಗೀಸ್ ಜಾನ್, ಕೋಚ್ ಅಪ್ಪಣ್ಣ ಕೆ ಎಸ್, ಮ್ಯಾನೇಜರ್: ಮೇರಿ ಅಭಿಜಿತ್
ಫೆಬ್ರವರಿ 4 ರಿಂದ 13 ರ ತನಕ ಹಾಕಿ ಪಂದ್ಯಗಳು ನಡೆಯಲಿವೆ.