Saturday, October 12, 2024

ಡಿ. 24 ರಿಂದ ಅಲ್ಟಿಮೇಟ್‌ ಖೋ ಖೋ ಲೀಗ್‌ ಆರಂಭ

ಕಟಕ್‌: ಮೊದಲ ಋತುವಿನಲ್ಲಿ ಯಶಸ್ಸು ಕಂಡಿದ್ದ ಅಲ್ಟಿಮೇಟ್‌ ಖೋ ಖೋ ಲೀಗ್‌ನ ಎರಡನೇ ಆವೃತ್ತಿ ಡಿಸೆಂಬರ್‌ 24ರಿಂದ ಜನವರಿ 14 ರ ವರೆಗೆ ಒಡಿಶಾದ ಕಟಕ್‌ನಲ್ಲಿ ನಡೆಯಲಿದೆ. Ultimate Kho Kho League will start from December 24 at Cuttack.

ಈಗಾಗಲೇ ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 33 ಯುವ ಪ್ರತಿಭೆಗಳು ಸೇರಿದಂತೆ ದೇಶದ 145 ಆಟಗಾರರ ಆರು ತಂಡಗಳನ್ನು ಸೇರಿಕೊಂಡಿದ್ದಾರೆ.

ಭಾರತದ ದೇಶೀಯ ಕ್ರೀಡೆಯಾಗಿರುವ ಖೋ ಖೋಗೆ ಅಂತಾರಾಷ್ಟ್ರೀಯ ವೇದಿಕೆ ನೀಡಬೇಕು ಮತ್ತು ಆಟಗಾರರ ಶ್ರಮಕ್ಕೆ ತಕ್ಕ ಫಲ ಸಿಗಬೇಕು ಎಂಬ ಉದ್ದೇಶದಿಂದ ಹುಟ್ಟಿಕೊಂಡ ಅಲ್ಟಿಮೇಟ್‌ ಖೋ ಖೋ ಲೀಗ್ 16-18 ವಯೋಮಿತಿಯ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಹಾಲಿ ಚಾಂಪಿಯನ್‌ ಇಡಿಶಾ ಜಗರ್‌ನಾಟ್ಸ್‌ ಈ ಬಾರಿಯೂ ಉತ್ತಮ ಹಾಗೂ ಸಮತೋಲನದ ತಂಡವನ್ನು ಹೊಂದಿದೆ.

ಕಳೆದ ವರ್ಷ ಆಡಿರುವ ಕೆಲವು ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದು ಅವರು ತಲಾ 6 ಲಕ್ಷ ರೂ.ಗಳನ್ನು ಪಡೆಯುತ್ತಾರೆ. ಎ, ಬಿ, ಸಿ. ಮತ್ತು ಡಿ ವಿಭಾಗಗಳನ್ನು ಮಾಡಲಾಗಿದ್ದು, ಎ ವಿಭಾಗದಿಂದ ಆಯ್ಕೆಯಾಗುವ ಆಟಗಾರರು 5 ಲಕ್ಷ ರೂ. ಬಿ. ವಿಭಾಗದಿಂದ ಆಯ್ಕೆಯಾಗುವ ಆಟಗಾರರು, 3 ಲಕ್ಷ ರೂ. ಸಿ ವಿಭಾಗದಿಂದ ಆಯ್ಕೆಯಾಗುವ ಆಟಗಾರರು 1.5 ಲಕ್ಷ ರೂ. ಹಾಗೂ ಡಿ ಗುಂಪಿನಿಂದ ಆಯ್ಕೆಯಾಗುವ ಆಟಗಾರರು 1 ಲಕ್ಷ ರೂ. ಪಡೆಯಲಿದ್ದಾರೆ.

ಎರಡನೇ ಋತುವಿನ ಹರಾಜು ಪ್ರಕ್ರಿಯೆಗೆ 18 ರಾಜ್ಯಗಳಿಂದ 290 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. ಆರು ಫ್ರಾಂಚೈಸಿಗಳು ಒಟ್ಟು 3.9 ಕೋಟಿ ರೂ. ವ್ಯಯ ಮಾಡಿ 18 ಯುವ ಆಟಗಾರರು ಸೇರಿದಂತೆ ಒಟ್ಟು 145 ಆಟಗಾರರನ್ನು ಖರೀದಿಸಿವೆ. ಅತ್ಯಂತ ಕುತೂಹಲದಿಂದ ಕೂಡಿರುವ ಅಲ್ಟಿಮೇಟ್‌ ಖೋ ಖೋ ಲೀಗ್‌ ಪಂದ್ಯಗಳು ಸೋನಿ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಆರು ತಂಡಗಳು: ಒಡಿಶಾ ಜಗರ್ನಾಟ್ಸ್‌, ತೆಲುಗು ಯೋಧಾಸ್‌, ಚೆನ್ನೈ ಕ್ವಿಕ್‌ ಗನ್ಸ್‌, ರಾಜಸ್ಥಾನ್‌ ವಾರಿಯರ್ಸ್‌, ಗುಜರಾತ್‌ ಜಯಂಟ್ಸ್‌, ಮುಂಬೈ ಕಿಲಾಡೀಸ್‌.

Related Articles