Tuesday, September 10, 2024

2023-24ನೇ ಸಾಲಿನ ಕರಾವಳಿ ಕಂಬಳದ ಸಂಪೂರ್ಣ ವೇಳಾಪಟ್ಟಿ

ಉಡುಪಿ: ರಾಜಧಾನಿಯಲ್ಲಿ ಕರಾವಳಿಯ ಕಂಬಳ ಭಾರತದ ಗಮನ ಸೆಳೆದು, ಇತಿಹಾಸ ನಿರ್ಮಿಸಿತು. ಈಗ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಂಬಳದ ಋತು ಆರಂಭಗೊಂಡಿದೆ. ಕಂಬಳವನ್ನು ನೋಡಿಕೊಂಡು ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವವರಿಗೆ ಇದು ಸೂಕ್ತ ಕಾಲ. ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಕಂಬಳದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. Full schedule of Karavali Kambala 2023-24.

ಈ ಕಾರಣಕ್ಕಾಗಿ ಎರಡೂ ಜಿಲ್ಲೆಗಳಲ್ಲಿ ನಡೆಯುವ ಕಂಬಳದ ವೇಳಾಪಟ್ಟಿಯನ್ನು ಇಲ್ಲಿ ಲಗತ್ತಿಸಲಾಗಿದೆ. ಕಂಬಳದ ಮೂಲಕ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಇದನ್ನು ಕ್ರೀಡಾ ಪ್ರವಾಸೋದ್ಯಮ ಎಂದೂ ಕರೆಯಬಹುದು. ಕ್ರಿಕೆಟ್‌, ಫುಟ್ಬಾಲ್‌ ಸೇರಿದಂತೆ ಹಲವು ಕ್ರೀಡೆಗಳನ್ನು ವೀಕ್ಷಿಸಲು ಪ್ರವಾಸಿಗರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರವಾಸ ಮಾಡುತ್ತಾರೆ. ಕಂಬಳವು ಕೂಡ ಒಂದು ಪ್ರವಾಸೋದ್ಯಮದ ಕ್ರೀಡೆಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.

Related Articles