Wednesday, December 4, 2024

ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಬೌದ್ಧ ಸನ್ಯಾಸಿ!

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು 56 ದಿನಗಳಿವೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದೆಂದರೆ ಕನಸು ನನಸಾದಂತೆ. ಅವರ ಸಾಧನೆಯ ಹಿಂದೆ ಹಲವು ವಿಧದ ತ್ಯಾಗವಿರುತ್ತದೆ. ಕಯಾಕ್‌ ಸ್ಪರ್ಧೆಯಲ್ಲಿ ಜಪಾನ್‌ ಮೇಲುಗೈ ಸಾಧಿಸುವುದೇ ಹೆಚ್ಚು. ಜಪಾನಿನ ಕಯಾಕ್‌ ಸ್ಪರ್ಧಿಗಳ ಬಗ್ಗೆ ತಿಳಿಯಹೊರಟಾಗ ನಮ್ಮ ಗಮನ ಸೆಳೆಯುವುದು ಒಬ್ಬ ಬೌದ್ಧ ಸನ್ಯಾಸಿ. ಕಝುಕಿ ಯಝಾವ ಸನ್ಯಾಸಿಯಾಗಿದ್ದರೂ ಅಕ್ಕನಿಂದ ಪ್ರೇರಣೆ ಪಡದು ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿರುವುದು ಕ್ರೀಡಾ ಜಗತ್ತಿನ ಅಚ್ಚರಿ. Buddhist priest participated in Three Olympics.

ಬೌಧ್ಧ ಸನ್ಯಾನಿಗಳೆಂದರೆ ಸದಾ ಪ್ರಾರ್ಥನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಪ್ರಾರ್ಥನೆಯ ನಡುವೆಯೇ ಸಮಯ ಮಾಡಿಕೊಂಡ ಕಝುಕಿ ಯಝಾವ 2008 ಬೀಜಿಂಗ್‌ ಒಲಿಂಪಿಕ್ಸ್‌, 2012 ಲಂಡನ್‌ ಒಲಿಂಪಿಕ್ಸ್‌ ಹಾಗೂ 2016 ರಿಯೋ ಒಲಿಂಪಿಕ್ಸ್‌ನಲ್ಲಿ ಜಪಾನ್‌ ದೇಶವನ್ನು ಪ್ರತಿನಿಧಿಸಿರುತ್ತಾರೆ. ಜಪಾನ್‌ ರಾಷ್ಟ್ರೀಯ ಚಾಂಪಿಯನ್‌ ಮತ್ತು ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಕಝುಕಿ ನಂತರ ಒಲಿಂಪಿಕ್ಸ್‌ಗೆ ಕಾಲಿಟ್ಟರು.

ಮನೆಗೆ ಸಮೀಪದ ನದಿಯಲ್ಲಿ ತಂದೆ ದೋಣಿ ನಡೆಸುತ್ತಿರುವುದನ್ನು ಕಂಡು ತಾನೂ ಅದೇ ರೀತಿ ಕಯಾಕ್‌ನಲ್ಲಿ ಪಾಲ್ಗೊಳ್ಳುವ ಕನಸು ಕಂಡರು. ಬಳಿಕ ಕಯಾಕ್‌ ಚಾಂಪಿಯನ್‌ ಆಗಿರುವ ಅಕ್ಕ ಅಕಿಯಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಪ್ರಾರ್ಥನೆಗೆ ಏಕಾಗ್ರತೆ ಮುಖ್ಯ. ಕ್ರೀಡೆಗೂ ಏಕಾಕಗ್ರತೆ ಅಗತ್ಯ. ಒಬ್ಬ ಸಾಮಾನ್ಯ ಮನುಷ್ಯ ಸನ್ಯಾಸಿ ಎನಿಸಿಕೊಳ್ಳಬೇಕಾದರೆ ಆತನಲ್ಲಿ ಮೊದಲ ಇರಬೇಕಾದುದು ಏಕಾಗ್ರತೆ. ಕ್ರೀಡೆ ಮತ್ತು ಪ್ರಾರ್ಥನೆ ಇವೆರಡೂ ಒಂದೇ ಎನ್ನುತ್ತಾರೆ ಕಝುಕಿ.

Related Articles