Monday, December 11, 2023

ಪಂಕಜ್‌ ಆಡ್ವಾಣಿಗೆ 26ನೇ ವಿಶ್ವ ಚಾಂಪಿಯನ್‌ ಕಿರೀಟ

ದೋಹಾ: ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ ಜಯ ಗಳಿಸುವ ಮೂಲಕ ಕರ್ನಾಟಕದ ಪಂಕಜ್‌ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದಾರೆ. ಇದು ಪಂಕಜ್‌ ಅವರ 26ನೇ ವಿಶ್ವ ಕಿರೀಟ. Prince of Pune Pankaj Advani won 26th World Title

ಕಳೆದ ವರ್ಷ ಕೌಲಾಲಂಪುರದಲ್ಲಿ ನಡೆದ ಫೈನಲ್‌ನ ಪುನರಾವರ್ತನೆ ಎಂಬ ರೀತಿಯಲ್ಲಿ ನಡೆದ ಪಂದ್ಯದಲ್ಲಿ ಪಂಕಜ್‌ 1000-416 ಅಂತರದಲ್ಲಿ ಜಯ ಗಳಿಸಿದರು.

2005ರಲ್ಲಿ ಪಂಕಜ್‌ ಮೊದಲ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದಿದ್ದರು. ವಿಶ್ವ ಬಿಲಿಯರ್ಡ್ಸ್‌ ಟೀಮ್‌ ಪ್ರಶಸ್ತಿ ಗೆಲ್ಲುವುದರ ಜೊತೆಯಲ್ಲಿ ಆಡ್ವಾಣಿ 9 ಬಾರಿ “ಲಾಂಗ್‌ ಫಾರ್ಮ್ಯಾಟ್‌” ಹಾಗೂ ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ 8 ಬಾರಿ ವಿಶ್ವ ಕಿರೀಟ ಧರಿಸಿದ್ದರು. ಸ್ನೂಕರ್‌ನಲ್ಲಿ ಅವರು ಹಲವು ವಿಶ್ವ ಚಾಂಪಿಯನ್‌ ಪಟ್ಟ ಗೆದ್ದಿದ್ದಾರೆ.

ಈ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಪಂಕಜ್‌ ಭಾರತದವರೇ ಆದ ರೂಪೇಶ್‌ ಶಾ ವಿರುದ್ಧ ಜಯ ಗಳಿಸಿದ್ದರು. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಕೊಠಾರಿ ಅವರು ದ್ರುವ ಸಿತ್ವಾಲ್‌ ವಿರುದ್ಧ ಜಯ ಗಳಿಸಿ ಫೈನಲ್‌ ತಲುಪಿದ್ದರು.

Related Articles