Saturday, October 12, 2024

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌: ಅರುಂಧತಿಗೆ ಬೆಳ್ಳಿ ಪದಕ

ಬೆಂಗಳೂರು: ಕಜಕಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಎಪಿಎಸಿಎಸ್‌ ಅಂತಾಷ್ಟ್ರೀಯ ಬ್ಯಾಡ್ಮಿಂಟನ್‌ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಅರುಂಧತಿ ಎನ್.‌ ಮುದ್ದು ಅವರು ರನ್ನರ್‌ ಅಪ್‌ ಗೌರವಕ್ಕೆ ಪಾತ್ರರಾಗಿದ್ದಾರೆ. Arundhati N Muddu won silver medal in APACS Kazakhstan International Series 2023.

ಡಿಸೆಂಬರ್‌ 6 ರಿಂದ 10 ರವರೆಗೆ ನಡೆದ ಚಾಂಪಿಯನ್‌ಷಿಪ್‌ನ ವನಿತೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಅರುಂಧತಿ ಪಿಲಿಪೈನ್ಸ್‌ನ ಡೆ ಗುಜ್ಮನ್‌ ಮಿಕೇಲಾ ಜಾಯ್‌ ವಿರುದ್ಧ 21-13, 21-17 ಅಂತರದಲ್ಲಿ ಸೋಲಿಗೆ ಶರಣಾದರು.

ಮೊದಲ ಸುತ್ತಿನಲ್ಲಿ ಬೈ ಪಡೆದ ಅರುಂಧತಿ ಎರಡನೇ ಸುತ್ತಿನಲ್ಲಿ ಕಜಕಿಸ್ತಾನದ ವಿಶ್ವದ 200ನೇ ರಾಂಕ್‌ ಆಟಗಾರ್ತಿ ಕಮಿಲಾ ಸ್ಮಾಗುಲೋವಾ ವಿರುದ್ಧ 14-21, 21-14, 24-22 ಅಂತರದಲ್ಲಿ ಅದ್ಭುತ ಜಯ ಗಳಿಸಿ ಕ್ವಾರ್ಟರ್‌ ಫೈನಲ್‌ ತಲುಪಿದರು.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಜಕಿಸ್ತಾನದ ಡಯಾನ ನಮೀನೋವಾ ವಿರುದ್ಧ 21-06, 21-10 ಅಂತರದಲ್ಲಿ ಸುಲಭ ಜಯ ಗಳಿಸಿದ ಅರುಂಧತಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.  ಅಮಿನಾತ್‌ ನಬೀಹಾ ಅಬ್ದುಲ್‌ ರಜಾಕ್‌ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅರುಂಧತಿ 21-20, 21-14 ಅಂತರದಲ್ಲಿ ಜಯ ಗಳಿಸಿದರು. ಮೊದಲ ಗೇಮ್‌ನಲ್ಲಿ ಅಮಿನಾತ್‌ ಉತ್ತಮ ಪೈಪೋಟಿ ನೀಡಿದರೂ ಅರುಂಧತಿ 21-20 ಅಂತರದಲ್ಲಿ ಜಯ ಗಳಿಸುವಲ್ಲಿ ಸಫಲರಾದರು. ಎರಡನೇ ಗೇಮ್‌ನಲ್ಲಿ ಭಾತರದ ಆಟಗಾರ್ತಿಗೆ ಹೆಚ್ಚು ಪ್ರಯಾಸವಾಗಲಿಲ್ಲ.

ಫೈನಲ್‌ ಪಂದ್ಯದಲ್ಲಿ ಅರುಂಧತಿಗೆ ಪಿಲಿಫೈನ್ಸ್‌ನ ಅನುಭವಿ ಆಟಗಾರ್ತಿ ಡೆ ಗುಜ್ಮಾನ್‌ ಎದರುಆದರು. ಉತ್ತಮ ಪೈಪೋಟಿ ನೀಡಿದರೂ 21-13, 21-17 ಅಂತರದಲ್ಲಿ ಸೋಲಿಗೆ ಶರಣಾಗಬೇಕಾಯಿತು. ಆದರೆ ಟೂರ್ನಿಯುದ್ದಕ್ಕೂ ಅರುಂಧತಿ ಉತ್ತಮ ಪ್ರದರ್ಶನ ತೋರಿದ್ದು ಗಮನಾರ್ಹ. ಬೆಂಗಳೂರಿನ ಅರುಂಧತಿ ಭಾರತದ ಉದಯೋನ್ಮುಖ ಆಟಗಾರ್ತಿಯಾಗಿದ್ದು ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ.

Related Articles