Wednesday, November 6, 2024

ಕೋಟದಲ್ಲಿ ಮಾ.30ರಂದು ಹಗ್ಗ ಜಗ್ಗಾಟ ಸ್ಪರ್ಧೆ

ಕೋಟ: ಎಲ್ಲೆಡೆ ಕ್ರಿಕೆಟ್‌ ಕಲರವ ಕೇಳಿ ಬರುತ್ತಿದ್ದರೆ ಕೋಟದ ಬಾಲಾಂಜನೇಯ ಫ್ರೆಂಡ್ಸ್‌ ಮಾರ್ಚ್‌ 30 ರಂದು ಇಲ್ಲಿನ ಶಾಂಭವೀ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. Tug of War in Kota on March 30th 2024

ಗ್ರಿಪ್‌ ಮಾದರಿಯಲ್ಲಿ ಅಮೃತೇಶ್ವರಿ ಟ್ರೋಫಿಗಾಗಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡವು 25,000 ರೂ. ನಗದು ಬಹುಮಾನವನ್ನು ಪಡೆಯಲಿದೆ. ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಗಳಿಸುವ ತಂಡಗಳು ಅನುಕ್ರಮವಾಗಿ 15,000, 10000 ಹಾಗೂ 5,000 ರೂ. ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿವೆ. ಪ್ರವೇಶ ಶುಲ್ಕ ರೂ. 2,000.

ಇದೇ ಸಂದರ್ಭದಲ್ಲಿ ಸ್ಥಳೀಯ ತಂಡಗಳನ್ನೂ ಆಹ್ವಾನಿಸಲಾಗುವುದು, ಇಲ್ಲಿ ವಿಜೇತ ಪ್ರಥಮ ಹಾಗೂ ದ್ವಿತೀಯ ತಂಡಗಳಿಗೆ ಅನುಕ್ರಮವಾಗಿ 5,000 ಹಾಗೂ 3,000 ರೂ. ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ ರೂ. 500 ಆಗಿರುತ್ತದೆ.

ಇದರ ಜೊತೆಯಲ್ಲಿ ಉತ್ತಮ ಹಿಡಿತಗಾರ, ಉತ್ತಮ ಸೊಂಟದ ಆಟಗಾರ, ಉತ್ತಮ ತರಬೇತುದಾರ ಹಾಗೂ ಶಿಸ್ತಿನ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಎಲ್ಲಿಯವರು ಪಾಲ್ಗೊಳ್ಳಲು ಅರ್ಹರು?:

ಈ ಸ್ಪರ್ಧೆಯಲ್ಲಿ ಬ್ರಹ್ಮಾವರದಿಂದ ಕಾರವಾರದ ವ್ಯಾಪ್ತಿಯಲ್ಲಿ ವಾಸಿಸುವ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು.

ಪ್ರತಿ ತಂಡಗಳ ಆಟಗಾರರ ಒಟ್ಟು ತೂಕ 500+10 ಕೆಜಿ ಮೀರಿರಬಾರದು.

ಒಂದು ತಂಡದಲ್ಲಿ 7+1 ಆಟಗಾರರು ಭಾಗವಹಿಸಬಹುದು.

ಪ್ರತಿ ತಂಡದ ಒಬ್ಬ ಕೋಚ್‌ಗೆ ಮಾತ್ರ ಅಂಗಣದ ಒಳಗೆ ಪ್ರವೇಶವಿರುತ್ತದೆ.

ಎಲ್ಲ ತಂಡಗಳು ಸಂಜೆ 7 ಗಂಟೆಯೊಳಗೆ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರುವುದು ಕಡ್ಡಾಯ.

ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಸರು ನೋಂದಾಯಿಸಲು ಕೊನೆಯ ದಿನಾಂಕ:  ದಿನಾಂಕ 26-03-2024ರ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸತಕ್ಕದ್ದು.

ಹೆಚ್ಚಿನ ವಿವರಗಳಿಗೆ ಸಂಘಟಕರಾದ ಪ್ರವೀಣ್‌: 7406822018, ವಿನಯ್‌: 6366049235 ಅವರನ್ನು ಸಂಪರ್ಕಿಸಬಹುದು.

1920ರ ವರೆಗೂ ಒಲಿಂಪಿಕ್ಸ್‌ ಕ್ರೀಡೆ:

ಹಗ್ಗ ಜಗ್ಗಾಟ 1900ರಿಂದ ಒಲಿಂಪಿಕ್ಸ್‌ ಕ್ರೀಡೆಯಾಗಿ 1920ರ ವರೆಗೂ ಸ್ಪರ್ಧೆಯಲ್ಲಿದ್ದಿತ್ತು. ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಕ್ರೀಡೆಗಳು ಇದ್ದ ಕಾರಣ 1920ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ 33 ಕ್ರೀಡೆಗಳನ್ನು ಒಲಿಂಪಿಕ್ಸ್‌ನಿಂದ ಹೊರಗಿಟ್ಟಿತು. ದುರಾದೃಷ್ಟವಶಾತ್‌ ಹಗ್ಗ ಜಗ್ಗಾಟವೂ ಒಲಿಂಪಿಕ್ಸ್‌ನಿಂದ ಹೊರಗುಳಿಯಿತು. ಇಂಗ್ಲೆಂಡ್‌ ಒಲಿಂಪಿಕ್ಸ್‌ ಹಗ್ಗ ಜಗ್ಗಾಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ರಾಷ್ಟ್ರವೆನಿಸಿದೆ.

Related Articles