ರಮ್ಜಾನ್ ಹಿನ್ನೆಲೆ ಏಷ್ಯನ್ ಯೋಗಾಸನ ಸ್ಪರ್ಧೆ ಮುಂದಕ್ಕೆ
ಹೊಸದಿಲ್ಲಿ: ಮಾರ್ಚ್ 29 ರಿಂದ 31 ರ ವರೆಗೆ ನಡೆಯಬೇಕಾಗಿದ್ದ ಏಷ್ಯನ್ ಯೋಗಾಸನ ಚಾಂಪಿಯನ್‌ಷಿಪ್ ಪವಿತ್ರ ರಮ್ಜಾನ್ ಮಾಸದ ಮಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡಗಳು ವಿನಂತಿ ಮಾಡಿಕೊಂಡ ಕಾರಣ ಏಪ್ರಿಲ್ 25 ರಿಂದ 27 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. Asian Yogasana Sports Championship reschedule to April 25 to 27.
ಭಾರತದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಯೋಗಾಸನ ಭಾರತ ಇವುಗಳ ಸಂಯಕ್ತ ಆಶ್ರಯದಲ್ಲಿ ಈ ಚಾಂಪಿಯನ್‌ಷಿಪ್ ನಡೆಯಲಿದೆ.
ಏಷ್ಯಾದ 16 ರಾಷ್ಟ್ರಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿವೆ. ಕೆಲವು ರಾಷ್ಟ್ರಗಳು ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿದೆ.