Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ISL
ಬೆಂಗಳೂರು ಎಫ್ ಸಿ ನನ್ನ ಕ್ರೀಡಾ ಬದುಕಿನ ಹೊಸ ಹೆಜ್ಜೆ: ಆಶಿಕ್
- By Sportsmail Desk
- . January 24, 2020
ಆಶಿಕ್ ಕುರುನಿಯನ್ ಎಫ್ ಸಿ ಪುಣೆ ಸಿಟಿ ತೊರೆದು ಬೆಂಗಳೂರು ಎಫ್ ಸಿ ಸೇರಿದ್ದು ಬಹಳಷ್ಟು ಅಚ್ಚರಿಯ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಹೊಸ ತಾರೆಯಾಗಿ ಮೂಡಿಬಂದ, ಸಾಕಷ್ಟು ಪ್ರತಿಭೆಯ ಆಶಿಕ್ ಚಾಂಪಿಯನ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಆಶಿಕ್ ಅವರ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ. ನೀವು ಭಾರತದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ಹೊಸ ತಾರೆ, ರಾಷ್ಟ್ರೀಯ ತಂಡದಲ್ಲಿದ್ದು ನಿಮಗೆ ಹೇಗನಿಸಿತು? ರಾಷ್ಟ್ರೀಯ ತಂಡದಲ್ಲಿ ನನ್ನ ಬದುಕು ಅದ್ಬುತವೆನಿಸಿತ್ತು. ದೇಶಕ್ಕಾಗಿ ಆಡುವುದು ನನಗೆ ಹಾಗೂ ನನ್ನ ಕುಟುಂಭಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಂದು ಪಂದ್ಯದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವುದರಿಂದ ನಾನು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆರಂಭಿಕ ಹನ್ನೊಂದು ಆಟಗಾರರಲ್ಲಿ ನಾನು ಸ್ಥಿರವಾಗಿರಬೇಕೆಂದು ಬಯಸುತ್ತಿದ್ದೆ. ನೀವು ಬೆಂಗಳೂರು ಎಫ್ ಸಿ ತಂಡವನ್ನು ಸೇರಿರುವ ಬಗ್ಗೆಯೂ ಸಾಕಷ್ಟು ಮಾತುಕತೆ ನಡೆಯುತ್ತಿದೆ …. ನಾನು ಬೆಂಗಳೂರು ಎಫ್ ಸಿ ತಂಡವನ್ನು ಸೇರಿಕೊಂಡಿದ್ದು ನನ್ನ ಬದುಕಿನ ತಿರುವು, ಏಕೆಂದರೆ ನಾನು ನಾಲ್ಕು ವರ್ಷಗಳಿಗಾಗಿ ಸಹಿ ಮಾಡಿದ್ದೇನೆ. ಈ ಕ್ಲಬ್ ನಲ್ಲಿ ಹೆಚ್ಚು ಕಾಲ ಇದ್ದರೆ ನನ್ನ ಕ್ರೀಡಾ ಬದುಕಿಗೆ ನೆರವಾಗಬಹುದು ಎಂದು ನಂಬಿರುವೆ. ನೀವು ಕ್ಲಬ್ ನ ಜತೆ ಹಾಗೂ ಆಟಗಾರರೊಂದಿಗೆ ಉತ್ತಮವಾದ ಅನುಬಂಧವನ್ನು ಹೊಂದಿರಬೇಕು. ಅತ್ಯಂತ ವೃತ್ತಿಪರತೆಯಿಂದ ಕೂಡಿರುವ ಬೆಂಗಳೂರು ಎಫ್ ಸಿ ಗಾಗಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ. ನೀವು ಈಗ ರದ್ದಾಗಿರುವ ಎಫ್ ಸಿ ಪುಣೆ ಸಿಟಿಯಲ್ಲಿ ಕೆಲವು ಕಾಲ ಕಳೆದಿದ್ದೀರಿ, ಬದಲಾವಣೆಗೆ ಯಾಕೆ ಮನಸ್ಸು ಮಾಡಿದಿರಿ? ನನ್ನ ಫುಟ್ಬಾಲ್ ಬದುಕಿನಲ್ಲಿ ಎಫ್ ಸಿ ಪುಣೆ ಸಿಟಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ. ಐದು ವರ್ಷಗಳ ಹಿಂದೆ ಚಿಕ್ಕ ಬಾಲಕನಿದ್ದಾಗ ಪುಣೆಗೆ ಆಗಮಿಸಿದೆ, ಎರಡು ವರ್ಷಗಳ ಕಾಲ ಪುಣೆ ಅಕಾಡೆಮಿಯಲ್ಲಿದ್ದೆ, ನಂತರ ಪುಣೆ ಸಿಟಿ ತಂಡವನ್ನು ಸೇರಿಕೊಂಡೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ ಪುಣೆ ಸಿಟಿ ತಂಡದ ಪರ ಆಡಿದೆ, ಅಲ್ಲಿಂದ ರಾಷ್ಟ್ರೀಯ ತಂಡವನ್ನು ಸೇರಿಕೊಂಡೆ, ಆದ್ದರಿಂದ ಪುಣೆ ಸಿಟಿ ತಂಡ ನನ್ನ ಕ್ರೀಡಾ ಬದುಕಿನ ಪ್ರಮುಖ ಭಾಗ. ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ನಡುವಿನ ಪ್ರತಿಸ್ಪರ್ಧಿತನ ನಿಮಗೆ ಹೇಗನಿಸುತ್ತದೆ?, ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸುವಾಗ ಹೇಗನಿಸಬಹುದು? ನನಗೆ ಕೇರಳ ಮನೆ. ಅವರಿಗಾಗಿ ಆಡಲು ನನಗೆ ಕಾಲಾವಕಾಶ ಸಿಗಬಹುದೇ? ಯಾರಾದರೂ ಹಾಗೆ ಮಾಡಬಹುದೇನೋ, ನನಗೆ ಗೊತ್ತಿಲ್ಲ, ಮುಂದಿನ ನಾಲ್ಕು ವರ್ಷಗಳ ಕಾಲ ಆಡಲು ನಾನು ಇಲ್ಲಿ ಇದ್ದೇನೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಇದು ಫುಟ್ಬಾಲ್ ಆಟದ ರೀತಿ, ಪರಿಸ್ಥಿತಿ ಹೀಗೆ ಬದಲಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಏನೂ ಆಗಬಹುದು. ಐಎಸ್ ಎಲ್ ನಲ್ಲಿ ಕೇರಳ ತಂಡವೊಂದು ಇರುವುದು ನನಗೆ ಹೆಮ್ಮೆಯ ಸಂಗತಿ. ಏಕೆಂದರೆ ಅದು ಮನೆಯಂಗಣದಲ್ಲಿ ಆಡುವ ಅವಕಾಶವನ್ನು ನೀಡಿದೆ. ಅವರಿಗೆ ಇರುವ ಬೆಂಬಲವನ್ನು ಗಮನಿಸಿದಾಗ ಅಲ್ಲೊಂದು ತಂಡ ಇರುವುದು ಪ್ರಮುಖ, ದೇಶದಲ್ಲಿ ಫುಟ್ಬಾಲ್ ಬೆಳೆಯುತ್ತದೆ, ಮತ್ತು ಆಟಗಾರರು ಆಡಲು ಹೆಚ್ಚು ಮನೋಬಲವನ್ನು ಹೊಂದುತ್ತಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳ ಪಡೆ ಮಂಜಪ್ಪಾಡ ಹಾಗೂ ಇಲ್ಲಿರುವ ನಮ್ಮ ಅಭಿಮಾನಿಗಳು ವೆಸ್ಟ್ ಬ್ಲಾಕ್ ಬ್ಲೂಸ್ ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇರುವ ಎರಡು ಗುಂಪುಗಳು, ಪಂದ್ಯದ ವೇಳೆ ಈ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಪ್ರೋತ್ಸಾಹದಿಂದ ಸಾಕಷ್ಟು ಬದಲಾವಣೆ ಆಗಬಹುದು. ದೇಶದಲ್ಲಿರುವ ಯುವ ಆಟಗಾರರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಾಗ ಹೇಗನಿಸುತ್ತದೆ? ಆ ರೀತಿಯಲ್ಲಿ ಯುವ ಆಟಗಾರರ ಬಗ್ಗೆ ಜನ ಉತ್ತಮ ರೀತಿಯಲ್ಲಿ ಮಾತನಾಡುತ್ತಿರುವುದರಿಂದ ಸಾಕಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆ. ಯುವ ಆಟಗಾರರು ಚೆಂಡಿನಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುತ್ತಿದ್ದಾರೆ, ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ರೀತಿಯ ಹೋರಾಟ ನೀಡುತ್ತಿದ್ದಾರೆ. ಬೆಂಗಳೂರು ಎಫ್ ತಂಡದಲ್ಲಿ ನಾನಿದನ್ನು ಕಾಣುತ್ತಿದ್ದೇನೆ, ನಮ್ಮ ಕಾಯ್ದಿರಿಸಿದ ಆಟಗಾರರು, ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ, ಭಾರತದಲ್ಲಿ ಅನೇಕ ಯುವ ಆಟಗಾರರು ಸಜ್ಜಾಗುತ್ತಿದ್ದಾರೆ. ಹಿರಿಯ ಆಟಗಾರರು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದಾಗ, ಕೋಚ್ ಗಳು ಸಲಹೆ ನೀಡಿದಾಗ ಯಾವ ರೀತಿಯಲ್ಲಿ ಸ್ಫೂರ್ತಿ ಸಿಗಬಹುವುದು ಎಂಬುದನ್ನು ಒಬ್ಬ ಯುವ ಆಟಗಾರನಾಗಿ ಅರ್ಥೈಸಿಕೊಳ್ಳಬಲ್ಲೆ.
ಕಪ್ ನಮ್ದೇ ….ಬೆಂಗಳೂರು ಐಎಸ್ ಎಲ್ ಚಾಂಪಿಯನ್
- By Sportsmail Desk
- . March 18, 2019
ಮುಂಬೈ, ಮಾರ್ಚ್ 18 ಕೊನೆಗೂ ಕಪ್ ನಮ್ದೇ …ಪ್ರಥಮಾರ್ಧದಲ್ಲಿ ಗೋಲು ಆಗಲಿಲ್ಲ, ದ್ವಿತೀಯಾರ್ಧದಲ್ಲೂ ಗೋಲಾಗಲಿಲ್ಲ, ಹೆಚ್ಚುವರಿ ಸಮಯದಲ್ಲೂ ಇದುವರೆಗೂ ಗೋಲು ಗಳಿಸಿದವರು ಗೋಲು ಗಳಿಸಲಿಲ್ಲ. ಬದಲಾಗಿ ಭಾರತೀಯ ಆಟಗಾರ ರಾಹುಲ್ ಭಿಕೆ (116ನೇ )
ಇಂಡಿಯನ್ ಸೂಪರ್ ಲೀಗ್ ಫೈನಲ್ : ಬೆಂಗಳೂರು ಎದುರಾಳಿ ಗೋವಾ
- By Sportsmail Desk
- . March 13, 2019
ಗೋವಾ, ಮಾರ್ಚ್ 13 ರಾಫೆಲ್ ಬಾಸ್ಟೋಸ್ 6ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೋವಾ ಎಫ್ ಸಿ ತಂಡವನ್ನು ಎರಡನೇ ಲೆಗ್ ನ ಸೆಮಿಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಮನಿಸಿದರೂ ಮುಂಬೈ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. 5-2ರ ಸರಾಸರಿಯಲ್ಲಿ
ಬೆಂಗಳೂರಿಗೆ ಆಘಾತ ನೀಡಿದ ನಾರ್ತ್ ಈಸ್ಟ್ ಯುನೈಟೆಡ್
- By Sportsmail Desk
- . March 8, 2019
ಸ್ಪೋರ್ಟ್ಸ್ ಮೇಲ್ ವರದಿ ರೆದೀಮ್ ತಾಂಗ್ (20ನೇ ನಿಮಿಷ) ಹಾಗೂ ಜುವಾನ್ ಮಾಸ್ಕಿಯ (90ನೇ ನಿಮಿಷ ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್ ನ ಮೊದಲ ಹಂತದ
ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೆ ಸಿಟಿ
- By Sportsmail Desk
- . March 3, 2019
ಸ್ಪೋರ್ಟ್ಸ್ ಮೇಲ್ ವರದಿ ಆದಿಲ್ ಖಾನ್ (18ನೇ ನಿಮಿಷ) ಹಾಗೂ ಇಯಾನ್ ಹೂಮ್ (84ನೇ ನಿಮಿಷ) ಗಳಿಸಿದ ಅಮೂಲ್ಯ ಗೋಲುಗಳ ನೆರವಿನಿಂದ ಮುಂಬೈ ಸಿಟಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಪುಣೆ
ಮೊದಲ ಸ್ಥಾನಕ್ಕೆ ಕೊನೆಯ ಹೋರಾಟ
- By Sportsmail Desk
- . February 21, 2019
ಸ್ಪೋರ್ಟ್ಸ್ ಮೇಲ್ ವರದಿ ಎಫ್ ಸಿ ಗೋವಾ ತಂಡ ಸದ್ಯ ಇಂಡಿಯನ್ ಸೂಪರ್ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿರಬಹುದು, ಆದರೆ ಈ ಅಗ್ರ ಸ್ಥಾನ ಎಷ್ಟು ಶಾಶ್ವತ ಎಂಬುದು ಗುರುವಾರ ಕಂಠೀರವ
ನಾರ್ತ್ ಈಸ್ಟ್‌ಗೆ ಸೆಮಿಫೈನಲ್ ತಲುಪಲು ಒಂದು ಜಯ ಸಾಕು
- By Sportsmail Desk
- . February 20, 2019
ಸ್ಪೋರ್ಟ್ಸ್ ಮೇಲ್ ವರದಿ ಬುಧವಾರ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಅಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಪುಣೆ ಸಿಟಿ ತಂಡಕ್ಕೆ ಆತಿಥ್ಯ ನೀಡಲಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಸೆಮಿಫೈನಲ್ ತಲುಪಲು
ಪುಣೆ ತಂಡ ಎಡವಿದ್ದೆಲ್ಲಿ ಎಂದು ತೋರಿಸಿದ ಬ್ರೌನ್
- By Sportsmail Desk
- . February 19, 2019
ಮುಂಬೈ, ಫೆಬ್ರವರಿ 16 ಪುಣೆ ತಂಡದ ನೂತನ ಕೋಚ್ ಯಾವಾಗಲೂ ಆತ್ಮವಿಶ್ವಾಸದಲ್ಲೇ ಇರುವ ವ್ಯಕ್ತಿ. ಇಂಗ್ಲೆಂಡ್‌ನ ಹಲ್ ಸಿಟಿ ತಂಡದಲ್ಲಿ ನಾಲ್ಕು ವರ್ಷಗಳ ಕಾಲ ತರಬೇತುದಾರರಾಗಿದ್ದ ಬ್ರೌನ್, ಪುಣೆ ತಂಡದ ಕೋಚ್ ಆಗಿ ಭಾರತಕ್ಕೆ
ನಾರ್ತಲ್ಲೂ ನಾರ್ತ್ ಈಸ್ಟ್ ಬೆಸ್ಟ್
- By Sportsmail Desk
- . February 14, 2019
ಮುಂಬೈ, ಫೆಬ್ರವರಿ 14 ರೌಲಿನ್ ಬೊರ್ಗೆಸ್ (4ನೇ ನಿಮಿಷ) ಹಾಗೂ ಬಾರ್ತಲೋಮ್ಯೊ ಒಗ್ಬಚೆ (33ನೇ ನಿಮಿಷ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ವಿರುದ್ಧ 2-0 ಅಂತರದಲ್ಲಿ ಅಮೂಲ್ಯ ಜಯ
ಕೊಚ್ಚಿಯಲ್ಲಿ ಸಮಬಲದ ಹೋರಾಟ
- By Sportsmail Desk
- . January 26, 2019
ಕೊಚ್ಚಿ, ಜನವರಿ 25 85ನೇ ನಿಮಿಷದಲ್ಲಿ ಎಟಿಕೆ ಪರ ಎಡು ಗಾರ್ಸಿಯಾ ಹಾಗೂ 88ನೇ ನಿಮಿಷದಲ್ಲಿ ಮತೇಜ ಪಪ್ಲಾಟಿನಿಕ್ ಗಳಿಸಿದ ಗೋಲಿನಿಂದ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1 ಗೋಲಿನಿಂದ