Thursday, December 12, 2024

ಪುಣೆ ತಂಡ ಎಡವಿದ್ದೆಲ್ಲಿ ಎಂದು ತೋರಿಸಿದ ಬ್ರೌನ್

ಮುಂಬೈ, ಫೆಬ್ರವರಿ 16

ಪುಣೆ ತಂಡದ ನೂತನ ಕೋಚ್ ಯಾವಾಗಲೂ ಆತ್ಮವಿಶ್ವಾಸದಲ್ಲೇ ಇರುವ ವ್ಯಕ್ತಿ. ಇಂಗ್ಲೆಂಡ್‌ನ ಹಲ್ ಸಿಟಿ ತಂಡದಲ್ಲಿ ನಾಲ್ಕು ವರ್ಷಗಳ ಕಾಲ ತರಬೇತುದಾರರಾಗಿದ್ದ  ಬ್ರೌನ್, ಪುಣೆ ತಂಡದ ಕೋಚ್ ಆಗಿ ಭಾರತಕ್ಕೆ ಆಗಮಿಸಿದಾಗ ಅವರಿಗೆ ಯಶಶಸ್ಸಿನ ಹಾದಿ ಹಿಡಿಯಲು ಉಳಿದದ್ದು ಕೇವಲ ಆರು ಪಂದ್ಯಗಳು.

ಪುಣೆ ತಂಡದ ಆಡಳಿತ ಮಂಡಳಿ ಮುಂದಿನ ಋತುವನ್ನು ಗಮನದಲ್ಲಿರಿಸಿಕೊಂಡು ಬ್ರೌನ್ ಅವರನ್ನು ನೇಮಿಸಿಕೊಂಡಿತ್ತು. ಕಳೆದ ಬಾರಿಯ ಋತುವಿನಲ್ಲಿ ಸೆಮೀಫೈನಲ್ ತಲುಪಿದ್ದ ಪುಣೆ ತಂಡ ಈ ಬಾರಿ ಉತ್ತಮ ಆರಂಭ  ಕಂಡಿರಲಿಲ್ಲ. ಮಧ್ಯಂತರದಲ್ಲಿ ಪದ್ಯುಮ್ ರೆಡ್ಡಿ ಅವರು ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರೂ ತಂಡ ಚೇತರಿಸಿಕೊಳ್ಳಲಿಲ್ಲ. ತಂಡ ಈಗ ನಾಲ್ಕರ ಹಂತ ತಲುಪಬೇಕಾದರೆ ಚಮತ್ಕಾರವೇ ನಡೆಯಬೇಕು. ಬ್ರೌನ್  ಅವರ ತರಬೇತಿಯಲ್ಲಿ ತಂಡ ಮೂರು ಪಂದ್ಯಗಳನ್ನಾಡಿದೆ, ತಂಡ ಎಲ್ಲಿ ಎಡವಿದೆ ಎಂಬುದನ್ನು ಬ್ರೌನ್ ಕಂಡುಕೊಂಡಿದ್ದಾರೆ.
‘ಪುಣೆ ಸಿಟಿ ತಂಡದಲ್ಲಿ ಆಟಗಾರರು ತಂಡವನ್ನು ಸಂಪರ್ಕಿಸುವ ಹಾಗೂ ಐಎಸ್‌ಎಲ್ ನಮ್ಮ ಸಾಧನೆಯ ಹಾದಿಯನ್ನು ಮುನ್ನಡೆಸುವ ವಿಶಷಯದಲ್ಲಿ ಆಟಗಾರರ ನೆರವಿನ ಅಗತ್ಯವಿದೆ. ನಾನು ಕೇವಲ ಆರು ಪಂದ್ಯಗಳಿಗಾಗಿ ಬಂದಿದ್ದೇನೆ  ಎಂಬುದು ಋಣಾತ್ಮಕ ನಿಲುವು. ಆದರೆ ಇಲ್ಲಿ ಏನನ್ನಾದರೂ ಸಾಧಿಸುತ್ತೇನೆಂಬ ಆತ್ಮವಿಶ್ವಾಸ ನನ್ನಲ್ಲಿದೆ,‘ ಎಂದು ಬ್ರೌನ್ ಈ ಹಿಂದೆಯೇ ಹೇಳಿದ್ದರು.  ಬ್ರೌನ್ ಇದುವರೆಗೂ ಮಾಡಿರುವ ಸಾ‘ನೆ ಅ‘ೂತಪೂರ್ವ.   ಚೆನ್ನೈಯಿನ್ ತಂಡದ ವಿರುದ್ಧ ಐಎಸ್‌ಎಲ್ ಇತಿಹಾಸದಲ್ಲೇ ಮೊದಲ ಜಯ ಗಳಿಸುವ ಮೂಲಕ ಬ್ರೌನ್ ತಮ್ಮ ಅಭಿಯಾನವನ್ನು ಉತ್ತಮ ರೀತಿಯಲ್ಲೇ ಆರಂಭಿಸಿದರು. ರಾಬಿನ್ ಸಿಂಗ್ ಕೊನೆಯ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ಎಟಿಕೆ ವಿರುದ್ಧದ ಪಂದ್ಯದಲ್ಲಿ  ಪುಣೆ ಡ್ರಾ ಕಂಡಿತ್ತು. ಈ ಎರಡು ಲಿತಾಂಶಗಳ ನಂತರ ತಂಡದ ಆತ್ಮವಿಶ್ವಾಸ  ಹೆಚ್ಚಿದೆ. ನಂತರ ಜೆಮ್ಷೆಡ್ಪುರ ವಿರ್ದುದದ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ  ಜಯ ಗಳಿಸಿದ್ದು, ಅದು  ಅಚ್ಚರಿಯ ಲಿತಾಂಶವಲ್ಲ, ಬದಲಾಗಿ ಬ್ರೌನ್ ಅವರ ರಣತಂತ್ರವೆಂದೇ ಹೇಳಬೇಕಾಗುತ್ತದೆ.  ಅದು ಕೂಡ ಜೆಮ್ಷೆಡ್ಪುರ ತಂಡಕ್ಕೆ ಮನೆಯಂಗಣದಲ್ಲಿ ಮೊದಲ ಸೋಲು.
‘ಕೋಚ್ ಆಗಿ ಒಂದು ಕ್ಲಬ್ ಸೇರಿಕೊಂಡಾಗ ನೀವು ಸಮಸ್ಯೆಗಳನ್ನು ಸ್ವೀಕರಿಸಬೇಕಾಗುತ್ತದೆ. ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಎರಡು ಪಂದ್ಯಗಳನ್ನು ಗೆದ್ದಿದ್ದೇನೆ ಎಂದೆನಿಸುತ್ತಿದೆ. ಇಂಥ ತಂಡಗಳನ್ನು ಸೇರಿಕೊಂಡಾಗ ಲೀಗ್ ಬಗ್ಗೆ ತಿಳಿದುಕೊಂಡಿರಬೇಕು. ನಾಲ್ಕು ವಾರಗಳ ಕಾಲ ತಂಡದ ಆಟಗಾರರೊಂದಿಗೆ ಚರ್ಚಿಸಬೇಕು. ಅದು ಕೋಚ್ ಆಗಿ ಸದ್ಯ ನನ್ನ ಮುಂದಿರುವ ಸವಾಲು,‘ ಎಂದು ಬ್ರೌನ್ ಹೇಳಿದರರು.  ಹಿಂದಿನ ಋತುವಿನ ಪಂದ್ಯಗಳಿಗೆ ಹೋಲಿಸಿದರೆ ಪುಣೆ ಈ ಬಾರಿ ಉತ್ತಮವಾಗಿಯೇ ಆಡುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಕಂಡುಕೊಳ್ಳುತ್ತಿದೆ. ಮ್ಯುಗಲ್ ಏಂಜಲ್ ಪೋರ್ಚುಗಲ್ ಇದ್ದಾಗ ತಂಡ ಆಡಿದ ರೀತಿಗೂ ಈಗ ಆಡುತ್ತಿರುವುದಕ್ಕೂ ಭಿನ್ನತೆ ಇದೆ. ಪುಣೆ ತಂಡಕ್ಕೆ ಇತರ ತಂಡಗಳಿಗಿಂತ ಉತ್ತಮವಾಗಿ ಆಡಬಲ್ಲೆವು ಎಂಬುದನ್ನು ತೋರಿಸಬೇಕಾಗಿದೆ. ಆದರೆ ಎಷ್ಟೇ ಉತ್ತಮ ಕೋಚ್ ಬಂದರೂ ಪುಣೆಯ ಪಾಲಿಗೆ ಕಾಲ ಮೀರಿದೆ.15 ಪಂದ್ಯಗಳಿಂದ ಪುಣೆ 18 ಅಂಕಗಳನ್ನು ಗಳಿಸಿದೆ. ಹೆಚ್ಚೆಂದರೆ27 ಅಂಕಗಳನ್ನು ಗಳಿಸಬಹುದು. ಜೆಮ್ಷೆಡ್ಪುರ ಹಾಗೂ ಎಟಿಕೆ ತಂಡಗಳು ಪುಣೆಗಿಂತ ಮೇಲಿನ ಸ್ಥಾನದಲ್ಲಿದ್ದು, ಪುಣೆಯ ಮುನ್ನಡೆಗೆ ಕಷ್ಟವಾಗಲಿದೆ.

Related Articles