Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಇಂಡಿಯನ್ ಸೂಪರ್ ಲೀಗ್ ಫೈನಲ್ : ಬೆಂಗಳೂರು ಎದುರಾಳಿ ಗೋವಾ

ಗೋವಾ, ಮಾರ್ಚ್ 13

ರಾಫೆಲ್  ಬಾಸ್ಟೋಸ್  6ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೋವಾ ಎಫ್ ಸಿ ತಂಡವನ್ನು ಎರಡನೇ ಲೆಗ್ ನ ಸೆಮಿಫೈನಲ್  ಪಂದ್ಯದಲ್ಲಿ 1-0 ಗೋಲಿನಿಂದ ಮನಿಸಿದರೂ ಮುಂಬೈ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. 5-2ರ ಸರಾಸರಿಯಲ್ಲಿ ಯಶಸ್ಸು ಕಂಡ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಪ್ರವೇಶಿಸಿತು. ಮಾರ್ಚ್ 17ರಂದು ಮುಂಬೈಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೋವಾ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಇದರೊಂದಿಗೆ ಈ ಬಾರಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ಚಾಂಪಿಯನ್ ಮೂಡಿ ಬರುವುದು ಸ್ಪಷ್ಟ.

ಮುಂಬೈ ಮುನ್ನಡೆ
6ನೇ ನಿಮಿಷದಲ್ಲಿ ರಾಫೆಲ್  ಬಾಸ್ಟೋಸ್ ಗಳಿಸಿದ ಗೋಲಿನಿಂದ ಮುಂಬೈ ತಂಡ ಮುನ್ನಡೆ ಕಂಡಿತು. ಆದರೆ 45 ನಿಮಿಷಗಳ ಅವಧಿಯಲ್ಲಿ ಮುಂಬೈ ಗಳಿಸಿರುವ ಗೋಲು ಗೋವಾ ತಂಡವನ್ನು ಫೈನಲ್ ತಲುಪುವುದರಿಂದ ತಡೆಯಲು ಸಾಗದು. ಏಕೆಂದರೆ  ಐದು ಗೋಲುಗಳು ದಾಖಲಾಗಬೇಕಿದೆ. ಗೋವಾ ಈ ಬಾರಿ ಮನೆಯಂಗಣದಲ್ಲಿ ಆಕ್ರಮಣಕಾರಿ ಆಟವಾಡಲಿಲ್ಲ. ಫೈನಲ್‌ಗಾಗಿ ಸಿದ್ಧಗೊಳ್ಳುತ್ತಿರುವ ಗೋವಾ ಹೆಚ್ಚು ಗಾಯಗಳು ಆಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಪಂದ್ಯವನ್ನಾಡಿತು. ಮುಂಬೈಯಲ್ಲಿ ನಡೆದ ಪಂದ್ಯದಲ್ಲೂ ಬಾಸ್ಟೋಸ್ ಮೊದಲ ಗೋಲು ಗಳಿಸಿದ್ದರರು. ಆರಾಮವಾಗಿ ಫೈನಲ್ ತಲಪುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿರುವ ಗೋವಾ ತಂಡ ಮುಂಬೈನ ಬ್ಯಾಕ್‌ಲೈನ್ ಮೇಲೆ ಹೆಚ್ಚಿನ ಒತ್ತಡ ಹೇರಲಿಲ್ಲ.
ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ 1-5 ಗೋಲುಗಳ ಅಂತರದಲ್ಲಿ ಸೋಲುಂಡು ಕಠಿಣ ಸವಾಲನ್ನು ಎದುರಿಸಬೇಕಾಗಿರುವ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್‌ನ ಎರಡನೇ ಲೆಗ್‌ನಲ್ಲಿ ಗೋವಾ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜಾಯಿತು. ಆದರೆ ಮುಂಬೈಗೆ ಹಾದಿ ಅಷ್ಟು ಸುಲಭವಾಗಿಲ್ಲ. ಗೋವಾ ಈಗಾಗಲೇ ಫೈನಲ್ ತಲುಪಿದೆನೆಂಬ ಆತ್ಮವಿಶ್ವಾಸದಲ್ಲಿದೆ. ಇದು ಫುಟ್ಬಾಲ್ ಏನೂ ಆಗಬಹುದು ಎಂದು ಪಂಡಿತರು ಹೇಳುತ್ತಿದ್ದರೂ, ಎದುರುಗಡೆ ಆಡುತ್ತಿರುವುದು ಬಲಿಷ್ಠ ಗೋವಾ ತಂಡ. ಮನೆಯಂಗಣದಲ್ಲೇ ಗೋವಾ ತಂಡವನ್ನು ಸೋಲಿಸಲಾಗದೆ ಕಂಗೆಟ್ಟ ಮುಂಬೈ ಎರಡನೇ ಬಾರಿಗೆ ಬೃಹತ್ ಅಂತರದಲ್ಲಿ ಆಘಾತ ಅನು‘ವಿಸಿತ್ತು. ಗೋವಾದಲ್ಲಿ ಪವಾಡ ನಡೆದರೆ ಮಾತ್ರ ಮುಂಬೈ ಫೈನಲ್ ತಲುಪಲಿದೆ. ಆದರೆ ಆ ಪವಾಡ ಅಷ್ಟು ಸುಲಭವಾದುದಲ್ಲ. ಫೆರಾನ್ ಕೊರೊಮಿನಾಸ್, ಎಡು ಬೇಡಿಯಾ, ಜಾಕಿಚಾಂದ್ ಸಿಂಗ್, ಬ್ರೆಂಡಾನ್ ಫೆರ್ನಾಂಡೆಸ್ ಅವರಂಥ ಆಟಗಾರರು ಗೋವಾದ ಅಟ್ಯಾಟ್ ವಿಭಾಗದಲ್ಲಿ ಮಿಂಚಿದ್ದಾರೆ. ಕೊರೊಮಿನಾಸ್ ಈಗಾಗಲೇ 16 ಗೋಲುಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಗೋಲ್ಡನ್ ಬೂಟ್ ಗೌರವಕ್ಕೆ ಸಜ್ಜಾಗಿದ್ದಾರೆ. ಮನೆಯಂಗಣದ ಹೊರಗಡೆ ಗೋವಾ ಗಳಿಸಿರುವ  5 ಗೋಲುಗಳಿಗೆ ಉತ್ತರವಾಗಿ ಮುಂಬೈ 1 ಗೋಲು ಗಳಿಸಿದೆ. ಇದರಿಂದಾಗಿ ಗೋವಾದಲ್ಲಿ ನಾಲ್ಕು ಗೋಲುಗಳನ್ನು ಗಳಿಸಬೇಕಾಗಿದೆ. ಅಂದರೆ ಫೈನಲ್ ತಲುಪಬೇಕಾದರೆ ಐದು ಗೋಲುಗಳನು ಗಳಿಸಬೇಕಾಗಿದೆ.  ಗೋವಾ ತಂಡ ಇದುವರೆಗೂ ಮುಂಬೈ ವಿರುದ್ಧ ಈ ಋತುವಿನಲ್ಲಿ 12 ಗೋಲುಗಳನ್ನು ಗಳಿಸಿದೆ.

administrator