ರಾಜ್ಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಆಳ್ವಾಸ್‌ಗೆ ಪ್ರಶಸ್ತಿ
ಮೂಡುಬಿದಿರೆ: ಮೈಸೂರಿನ ಕುಂಬಾರಕೊಪ್ಪಲ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಚಾಂಪಿಯನ್‌ಶಿಫ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. State Ball Badminton Championship: Alvas College Moodabidire Champion.
ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ ಅಂಬಾರಿ ಮೈಸೂರು ತಂಡವನ್ನು 35-30, 35-23 ನೇರ ಸೆಟ್‌ಗಳಿಂದ ಸೋಲಿಸಿದರೆ, ಬನಶಂಕರಿ ತಂಡವು ಸೆಮಿಫೈನಲ್‌ನಲ್ಲಿ ವಿಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-31, 22-35 ಹಾಗೂ 36-34 ಸೆಟ್ ಗಳಿಂದ ಸೋಲಿಸಿ, ಫೈನಲ್ ಹಂತಕ್ಕೆ ಅರ್ಹತೆ ಪಡೆದಿತ್ತು.
ಅಂತಿಮ ಸುತ್ತಿನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ತಂಡವನ್ನು 36- 34 ಹಾಗೂ 35-21 ನೇರ ಸೆಟ್ ಗಳಿಂದ ಸೋಲಿಸಿ ಜಯ ಗಳಿಸಿತು.
ಟೂರ್ನಿಯ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ನ ಆಕಾಶ್ ‘ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ’ಯನ್ನು ಪಡೆದುಕೊಂಡರು. ಜೊತೆಯಲ್ಲಿ ಆಳ್ವಾಸ್‌ನ ವಿನಯ್ ‘ಬೆಸ್ಟ್ ಸೆಂಟರ್ ಪ್ಲೇಯರ್ ಪ್ರಶಸ್ತಿ’ ಗಳಿಸಿದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.