18 ತಿಂಗಳಲ್ಲಿ 15 ಬ್ಯಾಡ್ಮಿಂಟನ್ ಆಟಗಾರರಿಗೆ ನಿಷೇಧ!
ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು ಕಳೆದ 18 ತಿಂಗಳಲ್ಲಿ ವಯಸ್ಸು ದೃಡೀಕರಣದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ 15 ಆಟಗಾರರನ್ನು ನಿಷೇಧ ಮಾಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. Age fraud Badminton Association of India banned 15 players.
ವಯಸ್ಸಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ನೀಡುವುದು ಭಾರತದ ಕ್ರೀಡೆಯಲ್ಲಿ ಕಾಣ ಸಿಗುವ ದೊಡ್ಡ ಮೋಸದಾಟ. ವಯಸ್ಸಿನಲ್ಲಿ ಮೋಸ ಮಾಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ 2023ರಲ್ಲಿ ಸ್ವಯಂಪ್ರೇರಿತ ವಯಸ್ಸು ದೃಢೀಕರಣ ಯೋಜನೆ (ವಿಎಆರ್‌ಎಸ್)ಯನ್ನು ಜಾರಿಗೆ ತಂದಿತ್ತು. ಸುಮಾರು 300ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ಮರುಸೇರ್ಪಡೆ ಮಾಡಿಕೊಂಡರು. ವಯಸ್ಸಿನಲ್ಲಿ ಮೋಸ ಮಾಡಿರುವುದನ್ನು ಒಪ್ಪಿಕೊಂಡಿರುವ ಆಟಗಾರರನ್ನು ಅವರ ವಯಸ್ಸಿನಲ್ಲೇ ಆಡಲು ಅವಕಾಶ ಮಾಡಿಕೊಡಲಾಯಿತು. ಇವರು ಕಿರಿಯ ಆಟಗಾರರಾಗಿದ್ದ ಕಾರಣ ಬಿಎಐ ಅವರ ಹೆಸರನ್ನು ಬಹಿರಂಗಗೊಳಿಸಲಿಲ್ಲ.
ಆದರೆ ತಮ್ಮ ನೈಜ ವಯಸ್ಸನ್ನು ಬಹಿರಂಗಪಡಿಸಿದೆ ಪ್ರಮಾದವೆಸಗಿದ ಆಟಗಾರರನ್ನು ಎರಡೂವರೆ ವರ್ಷ ನಿಷೇಧಿಸಲಾಗಿದೆ. ಅವರು ಯಾವುದೇ ಬ್ಯಾಡ್ಮಿಂಟನ್ ಚಟುವಟಿಕೆಗಳನ್ನು ಪಾಲ್ಗೊಳ್ಳುವಂತಿಲ್ಲ.