ರೋವಿಂಗ್, ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

0
222
ಏಜೆನ್ಸೀಸ್ ಜಕಾರ್ತ

ಭಾರತದ ರೋವಿಂಗ್ ತಂಡ ಹಾಗೂ ಟೆನಿಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನ ಗೆಲ್ಲುವುದರೊಂದಿಗೆ ಏಷ್ಯನ್‌ಗೇಮ್ಸ್‌ನ ಆರನೇ ದಿನದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ.

ರೋವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಇನ್ನೆರಡು ಕಂಚಿನ ಪದಕ ಗೆದ್ದಿದ್ದಾರೆ. ಶೂಟಿಂಗ್‌ನಲ್ಲೂ ಹೀನಾ ಸಧು  ಕಂಚಿನ ಪದಕದ ಸಾಧನೆ
ಮಾಡಿದ್ದಾರೆ

ಮಿಂಚಿದ ರೋಹನ್-ಶರಣ್

ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್‌ಹ ಆಗೂ ಡೆನಿಸ್ ಯೆವ್ಸೇವ್ ವಿರುದ್ಧ ೬-೩, ೬-೪ ಅಂತರದಲ್ಲಿ ಗೆದ್ದು ಚಿನ್ನದ ಉಡುಗೊರೆ ನೀಡಿತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ. ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಸ್ ೨೦೦೨ ಹಾಗೂ ೨೦೦೬ರಲ್ಲಿ, ಸೋಮ್‌ದೇವ್ ಹಾಗೂ ಸನಮ್ ಸಿಂಗ್ ೨೦೧೦ರಲ್ಲಿ ಚಿನ್ನ ಗೆದ್ದಿದ್ದರು.
ರೋವಿಂಗ್‌ನಲ್ಲಿ ಸ್ವರಣ್ ಸಿಂಗ್, ಓಂ ಪ್ರಕಾಶ್, ದತ್ತು ಭೋಕನಾಲ್ ಹಾಗೂ ಸುಖ್ಮೀತ್‌ಸಿಂಗ್ ಅವರನ್ನೊಳಗೊಂಡ ತಂಡ ಭಾರತಕ್ಕೆ ದಿನದ ಮೊದಲ ಚಿನ್ನ ನೀಡಿತು. ದುಶ್ಯಂತ್ ಸಿಂಗಲ್ ಸ್ಕಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು,  ರೋಹಿತ್ ಕುಮಾರ್ ಹಾಗೂ ಭಗವಾನ್ ಸಿಂಗ್ ಡಬಲ್ ಸ್ಕಲ್ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದರು. ಈ ಸಮಯಕ್ಕೆ ಭಾರತ ಒಟ್ಟು ೬ ಚಿನ್ನ ಸೇರಿ ೨೩ ಪದಕಗಳನ್ನು ಗೆದ್ದಿದೆ.