Saturday, April 13, 2024

26 ರಂದು ರಾಜ್ಯಮಟ್ಟದ ಯೋಗ ಸ್ಪರ್ಧೆ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಗಂಗಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ, ಆಚಾರ್ಯ ಯೋಗ ಕೋಚಿಂಗ್ ಸೆಂಟರ್‌ನ ಸಹಭಾಗಿತ್ವದಲ್ಲಿ ಬೆಂಗಳೂರು ಸಿಟಿ ಪೊಲೀಸ್ ನೆರವಿನಿಂದ ಆಗಸ್ಟ್ 26 ರಂದು ೨ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಷಿಪ್‌ನಡೆಯಲಿದೆ.

ಗಂಗಾ ಅಂತಾರಾಷ್ಟ್ರೀಯ ಸ್ಕೂಲ್ ಮತ್ತು ಕಾಲೇಜು ಆವರಣದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಓಂಕಾರ್ ಆಶ್ರಮದ ಶ್ರೀ ಶ್ರೀ ಶ್ರೀ ಸ್ವಾಮಿ ಮಧುಸೂಧಾನಂದ ಪುರಿ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಹಾಗೂ ಗಂಗಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ಗಂಗ ನರಸಯ್ಯ ಪಾಲ್ಗೊಳ್ಳುವರು. ನಿರ್ದೇಶಕ ಹಾಗೂ ಪ್ರಾಂಶುಪಾಲ ಪಾರ್ಥಸಾರಥಿ ಕೃಷ್ಣ ಅಯ್ಯರ್ ಹಾಜರಿರುವರು.

ಹೆಚ್ಚಿನ ವಿವರಗಳಿಗೆ ಸಮನ್ವಯಕಾರರಾದ ರಾಜೇಶ್ ಆಚಾರಿ- 8884058198, ದೀಪಕ್ ಜೆ.- 9902191478, ನಾಗರಾಜು-9743199131 ಅವರನ್ನು ಸಂಪರ್ಕಿಸಬಹುದು.

Related Articles