Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಗೋಲ್ಡನ್ ಗರ್ಲ್ ರಾಹಿ

ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನದಲ್ಲಿ  ೨೫ ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ರಾಹಿ ಸರ್ನೋಬತ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ವೈಯಕ್ತಿಕ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ರಾಹಿ ಸರ್ನೋಬತ್. ಶೂಟ್ ಆಫ್ ನಲ್ಲಿ  ಥಾಯ್ಲೆಂಡ್‌ನ ಸ್ಪರ್ಧಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮೂರನೇ ಶಾಟ್‌ನಲ್ಲಿ ರಾಹಿ ತಪ್ಪನ್ನೆಸಗಿದರೆ ಐದನೇ ಶಾಟ್‌ನಲ್ಲಿ ಯಾಂಗ್‌ಪೈಬೂನ್ ತಪ್ಪನ್ನೆಸಗಿದರು. ಇದರಿಂದ ಎರಡನೇ ಶೂಟ್ ಆಫ್  ಮೂಲಕ ಚಿನ್ನವನ್ನು ನಿರ್ಧರಿಸಲಾಯಿತು. ಥಾಯ್ಲೆಂಡ್‌ನ ಶೂಟರ್ ಮೂರರಲ್ಲೂ ಗುರಿ ತಪ್ಪಿದರೆ, ರಾಹಿ ಮೂರರಲ್ಲೂ ಯಶಸ್ಸು ಕಂಡು ಚಿನ್ನ ಗೆದ್ದರು. ಈ ಚಿನ್ನದೊಂದಿಗೆ ಭಾರತ ನಾಲ್ಕನೇ ದಿನದ ಕೊನೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಂತಾಯಿತು.
ಈ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ರಾಹಿ ೨೫ ಮೀ. ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ೨೦೧೪ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಹಿ ಚಿನ್ನದ ಪದಕ ಗೆದ್ದಿದ್ದರು. ಪದಕ ಗೆಲ್ಲುವ ‘ರವಸೆ ಮೂಡಿಸಿದ್ದ ಮನು ಭಾಕರ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ರಾಹಿ ೯೭, ೯೫, ೯೬ ಸೇರಿ ೨೮೮ ಅಂಕಗಳನ್ನು ಆರಂಭಿಕ ಹಂತದಲ್ಲಿ ಗಳಿಸಿದ್ದರು. ಅಂತಿಮವಾಗಿ ೯೮, ೯೬, ೯೮ ಸೇರಿ ಒಟ್ಟು ೨೯೨ ಅಂಕಗಳನ್ನು ಗಳಿಸಿದರು.

ವುಷೂನಲ್ಲಿ ನಾಲ್ಕು ಕಂಚು

ನರೇಂದ್ರ ಗ್ರೆವಾಲ್, ಭಾನು ಪ್ರಕಾಶ್, ಸಂತೋಷ್ ಕುಮಾರ್ ಹಾಗೂ ರೋಶಿಬಿನಾ ದೇವಿ ವುಷೂ ಸೆಮಿ ಫೈನಲ್ ನಲ್ಲಿ ಸೋಲನುಭವಿಸುವುದರೊಂದಿಗೆ ಕಂಚಿನ ಪದಕ ಗೆದ್ದರು. ಟೆನಿಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಸೆಮಿಫೈನಲ್ ತಲುಪಿ ಪದಕವೊಂದನ್ನು ಖಚಿತಪಡಿಸಿದ್ದಾರೆ. ಅದೇ ರೀತಿ ಅಂಕಿತಾ ರೈನಾ ಕೂಡ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿ ಪದಕ ಖಚಿತಪಡಿಸಿದ್ದಾರೆ.

administrator