ಮೈಸೂರಿನ ಪದ್ಮಪ್ರಿಯಾಗೆ ಪ್ರಶಸ್ತಿ ಡಬಲ್
ಬೆಂಗಳೂರು: ಭಾರತವನ್ನು ಪ್ರತಿನಿಧಿಸಿರುವ ಮೈಸೂರಿನ ಪದ್ಮಪ್ರಿಯಾ ರಮೇಶ್ ಕುಮಾರ್ ಅವರು ಬಹೆರಿನ್‌ನಲ್ಲಿ ನಡೆದ 14 ವರ್ಷ ವಯೋಮಿತಿಯ ಏಷ್ಯನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Mysuru’s Padmapriya Ramesh Kumar clinches double wins at Asian U-14 Tennis Championship in Bahrain
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಪದ್ಮಪ್ರಿಯಾ ಎರಡನೇ ಸುತ್ತಿನಲ್ಲಿ ರಷ್ಯಾದ ವಿಕ್ಟೋರಿಯಾ ಕಾರ್ಪೆಂಕೋ ವಿರುದ್ಧ 6-0-6-1 ಆಂತರದಲ್ಲಿ ಜಯ ಗಳಿಸಿದರು. ನಂತರ ಪಿಲಿಪೈನ್ಸ್‌ನ ಸೆರ್ಹಾ ಬೆರ್ಮಾಸ್ ವಿರುದ್ಧ 6-0, 6-0 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಸೆಮಿಫೈನಲ್ ಪಂದ್ಯದಲ್ಲಿ ಸೌದಿ ಅರೇಬಿಯಾದ ಫಾತಿಮಾ ಅಲ್ಬಾಜಾರಿ ವಿರದ್ಧ 6-0, 6-1 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಬಹೆರಿನ್‌ನ ಸೋಫಿಯಾ ಬಾದರ್ ವಿರುದ್ಧ 6-1, 6-1 ಅಂತರದಲ್ಲಿ ಗೆದ್ದು ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಡಬಲ್ಸ್‌ನಲ್ಲಿ ರಷ್ಯಾದ ವಿಕ್ಟೋರಿಯಾ ಕಾರ್ಪೆಂಕೋ ಅವರೊಂದಿಗೆ ಜೊತೆಗೂಡಿದ ಪದ್ಮಪ್ರಿಯ ಬಹೆರಿನ್ ಸೋಫಿಯಾ ಬಾದೆರ್ ಹಾಗೂ ಸಹ್ರಾ ಬೆರ್ಮಾಸ್ ಜೋಡಿಯನ್ನು 6-2, 6-2 ಅಂತರದಲ್ಲಿ ಮಣಿಸಿ ಡಬಲ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.