Sunday, May 26, 2024

ವೈರಿಗಳಲ್ಲಿದೆ ವೈರಲ್‌ ಆದ ಮಾಯಾಂತಿ, ಗವಾಸ್ಕರ್‌!

ಮುಂಬಯಿ: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹಂತ ತಲುಪಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾಯಾಂತಿ ಲ್ಯಾಂಗರ್‌ ಅವರ ಪ್ಯಾಂಟ್‌ ಕಳವಾದ ಸುದ್ದಿ ವೈರಲ್‌ ಆಗಿದ್ದು ಪತಿ ಸ್ಟುವರ್ಟ್‌ ಬಿನ್ನಿ ಹಾಗೂ ಮಾವ ರೋಜರ್‌ ಬಿನ್ನಿ ಅವರಿಗೂ ಚಿಂತೆಯಾಗಿದೆ. Mayanti Langer and Sunil Gavaskar’s trousers go viral.

ಮನುಷ್ಯನಿಗೆ ಐದು ಸೆನ್ಸ್‌ಗಳಿರುತ್ತವೆ. ಕೆಲವರು ನನಗೆ ಆರನೇ ಸೆನ್ಸ್‌ ಹೇಳಿತು ಹಾಗಾಗಿ ಹೀಗೆ ಮಾಡಿದೆ ಅಂತಾರೆ. ಆದರೆ ಕ್ರಿಕೆಟ್‌ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುವವರಿಗೆ ಎಷ್ಟು ಸೆನ್ಸ್‌ ಇದ್ದರೂ ಕಡಿಮೆಯೇ. ಉತ್ತಮ ಧ್ವನಿ, ಸೌಂದರ್ಯ ಹಾಗೂ ಡ್ರೆಸ್‌ ಸೆನ್ಸ್‌ ಇರಬೇಕು. ಇವುಗಳ ಜೊತೆಯಲ್ಲಿ ಕ್ರಿಕೆಟ್‌ ಜ್ಞಾನವೂ ಇರಬೇಕು, ಮಾಯಾಂತಿ ಲ್ಯಾಂಗರ್‌ ಕೆಲವು ವರ್ಷಗಳಿಂದ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಜನ ಅವರ ಡ್ರೆಸ್‌ ಸೆನ್ಸ್‌ ಬಗ್ಗೆ ಮಾತಾಡಿರಲಿಲ್ಲ. ಆದರೆ ಈಗ ಶುರು ಹಚ್ಕೊಂಡಿದ್ದಾರೆ ನೋಡಿ.

ಸುನಿಲ್‌ ಗವಾಸ್ಕರ್‌ ನೀಲಿ ಪ್ಯಾಂಟ್‌ ಧರಿಸಿದ್ದು, ಮಯಾಂತಿ ಟು ಪೀಸ್‌ ಟಾಪ್‌ ಡ್ರೆಸ್‌ನಲ್ಲಿ ಮಾತ್ರ ಬಂದಿರುವುದನ್ನು ಕಂಡು ನೆಟ್ಟಿಗರು ತಮಾಷೆ ಮಾಡಿದ್ದಾರೆ. “ದಯವಿಟ್ಟು ಮಾಯಾಂತಿ ಲ್ಯಾಂಗರ್‌ ಪ್ಯಾಂಟ್‌ ಕದ್ದವರು ಹಿಂದಿರುಗಿಸಿ,” “ಗವಾಸ್ಕರ್‌ ಸರ್‌ ಇದು ನ್ಯಾಯವಲ್ಲ, ದಯವಿಟ್ಟು ಆಕೆಯ ಪ್ಯಾಂಟ್‌ ಕೊಡಿ,” “ ಸಾಕಪ್ಪ ಸಾಕು, ಯಾರು ಕದ್ದಿದ್ದಾರೋ ಅವರು ದಯವಿಟ್ಟು ಹಿಂದಿರುಗಿಸಿ ಆಕೆ ಇಡೀ ಕಾರ್ಯಕ್ರಮದಲ್ಲಿ ನಿಂತಿರುವುದನ್ನು ನೋಡಿ ಅಯ್ಯೋ ಅನಿಸುತ್ತಿದೆ,” ರಾಜೇಶ್ವರಿ ಎನ್ನುವರರು X ನಲ್ಲಿ “Arre Mayanti Langer forgot wear bottoms” ಎಂದು ಬರೆದುಕೊಂಡಿದ್ದಾರೆ. “ಟೀವಿಯಲ್ಲಿ ಮಾಯಾಂತಿ ಲ್ಯಾಂಗರ್‌ ಅವರನ್ನು ಕಂಡ ನನ್ನ ಆರು ವರ್ಷದ ಮಗು, ಕೂಗುತ್ತಾ ಬಂದು, “ಅಮ್ಮಾ ಮಾಯಾಂತಿ ಲ್ಯಾಂಗರ್‌ ಪ್ಯಾಂಟ್‌ ಹಾಕುವುದನ್ನೇ ಮರೆದಿತ್ತಿದ್ದಾರೆ,” ಅನ್ನುವುದೇ? ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ಸುನಿಲ್‌ ಗವಾಸ್ಕರ್‌ ಅವರು ಮಾಯಾಂತಿ ಲ್ಯಾಂಗರ್‌ ಟಾಪ್‌ ಬಣ್ಣದ್ದೇ ಪ್ಯಾಂಟ್‌ ಧರಿಸಿ ಅಂಗಣದಲ್ಲಿ ಕಾಣಿಸಿಕೊಂಡ ಚಿತ್ರ ಪ್ರತ್ಯಕ್ಷವಾಯಿತು, ಯಾವುದೋ ಫೋಟೋ ಎಡಿಟರ್‌ ಆ ಚಿತ್ರವನ್ನು ಚೆನ್ನಾಗಿ ಎಡಿಟ್‌ ಮಾಡಿ ಗವಾಸ್ಕರ್‌ಗೆ ಚೆಡ್ಡಿ ಹಾಕಿಸಿ ಮಾಯಾಂತಿ ಲ್ಯಾಂಗರ್‌ಗೆ ಫುಲ್‌ ಪ್ಯಾಂಟ್‌ ತೊಡಿಸಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದರು. ಮಾಯಾಂತಿ ಲ್ಯಾಂಗರ್‌ ಇನ್ನಾದರೂ ತಮ್ಮ ಉಡುಪಿನ ಬಗ್ಗೆ ಗಮನ ಹರಿಸಬಹುದೋ ಕಾದು ನೋಡಬೇಕು.

Related Articles